..
kruti by ಲಕ್ಷ್ಮೀನಾರಯಣರಾಯರು Lakshminarayanaru
ಮಂಗಳಾರತಿಯನ್ನು ಬೆಳಗಿರೆ - ಮಂಗಳಾಂಗಿಯರೆಲ್ಲರು ಪ
ಅಂಗನಾಮಣಿ ಗೌರಿದೇವಿ-ಶುಭಾಂಗ ಮೃದ್ಛವ ಗಣಪಗೆ ಅ.ಪ
ದಾಸರೀಪ್ಸಿತವನ್ನು ಸಲಿಸುವ ಈಶನಂದನ ಗಣಪಗೇ
ಪಾಶ ಅಂಕುಶ ಧರಿಸಿಹ ವಿಘ್ನೇಶ ವಿಘ್ನ ವಿನಾಶಗೇ1
ವಿದ್ಯವೀವಗೆ ಬುದ್ಧಿ ಕೊಡುವಗೆ ಸಿದ್ಧಿದಾಯಕ ಗಣಪಗೇ
ಶುದ್ಧಮನದಲಿ ಶರಣುಹೊದ್ದಲು ಉದ್ಧರಿಪ ಸದ್ದಯನಿಗೇ 2
ಇಕ್ಷುಚಾಪನ ಲಕ್ಷ್ಯಮಾಡದೆ ದಕ್ಷನಾಗಿಹ ಗಣಪಗೇ
ಕುಕ್ಷಿಯೊಳು ಜಗವಿಟ್ಟು ರಕ್ಷಿಪ ಲಕ್ಷ್ಮೀಕಾಂತನ ಭಜಕಗೇ 3
***
ಮಂಗಳಾರತಿಯನ್ನು ಬೆಳಗಿರೆ – ಮಂಗಳಾಂಗಿಯರೆಲ್ಲರು ||ಪ||
ಅಂಗನಾಮಣಿ ಗೌರಿದೇವಿ-ಶುಭಾಂಗ ಮೃದ್ಛವ ಗಣಪಗೆ ||ಅ.ಪ||
ದಾಸರೀಪ್ಸಿತವನ್ನು ಸಲಿಸುವ ಈಶನಂದನ ಗಣಪಗೇ
ಪಾಶ ಅಂಕುಶ ಧರಿಸಿಹ ವಿಘ್ನೇಶ ವಿಘ್ನ ವಿನಾಶಗೇ||1||
ವಿದ್ಯವೀವಗೆ ಬುದ್ಧಿ ಕೊಡುವಗೆ ಸಿದ್ಧಿದಾಯಕ ಗಣಪಗೇ
ಶುದ್ಧಮನದಲಿ ಶರಣುಹೊದ್ದಲು ಉದ್ಧರಿಪ ಸದ್ದಯನಿಗೇ|| 2||
ಇಕ್ಷುಚಾಪನ ಲಕ್ಷ್ಯಮಾಡದೆ ದಕ್ಷನಾಗಿಹ ಗಣಪಗೇ
ಕುಕ್ಷಿಯೊಳು ಜಗವಿಟ್ಟು ರಕ್ಷಿಪ ಲಕ್ಷ್ಮೀಕಾಂತನ ಭಜಕಗೇ ||3||
mangaLAratiyannu beLagire – mangaLAngiyarellaru ||pa||
anganAmaNi gauridEvi-SuBAnga mRudCava gaNapage ||a.pa||
dAsarIpsitavannu salisuva ISanaMdana gaNapagE
pASa ankuSa dharisiha viGnESa viGna vinASagE||1||
vidyavIvage buddhi koDuvage siddhidAyaka gaNapagE
Suddhamanadali SaraNuhoddalu uddharipa saddayanigE|| 2||
ikShucApana lakShyamADade dakShanAgiha gaNapagE
kukShiyoLu jagaviTTu rakShipa lakShmIkAntana BajakagE ||3||
****