Showing posts with label ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ sirigurutandevarada vittala tandevarada vittala dasa stutih. Show all posts
Showing posts with label ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ sirigurutandevarada vittala tandevarada vittala dasa stutih. Show all posts

Friday, 6 August 2021

ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ankita sirigurutandevarada vittala tandevarada vittala dasa stutih

..

srinivasaryaru = tandevarada vittalaru stutih

Kruti by ಸಿರಿಗುರುತಂದೆವರದವಿಠಲರು sirigurutandevarada vittala 


ಶಿಖರಪುರ ದಾಸಾರ್ಯ ವಂಶದಿ ಶಶಿಯಂತೆ ಉದಿಸಿದ ಶ್ರೀನಿವಾಸಾರ್ಯರೆಂಬ ಪ್ರಚಲಿತ ನಾಮದ ದಾಸಾರ್ಯರ ಚರಿತೆ ಗುರುಗಳ ದಯದಿಂದ ಅರಿತಷ್ಟು ಪೇಳುವೆ ಬುಧ ಜನರು ನಿಷ್ಕಪಟ ಭಾವದಿಂದಲಿ ಕೇಳಿ ಸಿರಿಗುರುತಂದೆವರದಗೋಪಾಲವಿಠ್ಠಲನ ಭಕ್ತರೊಳಗಿವರೊಬ್ಬರು ಕಾಣಿರೊ 1


ಶ್ರೀ ರಮೇಶಕೃಷ್ಣನು ತನ್ನ ಪರಿವಾರ ಸಹಿತಾಗಿ ಓಲಗದಿ ಕುಳಿತಿರಲು ಸಾವಧಾನದಿ ತಾನು ಶ್ರೀದೇವಿ ಋಷಿಯಾಜ್ಞೆಯಿಂದಲಿ ಬಂದು ಶಿರಬಾಗಿ ಧರಣಿಯೊಳು ಭಾಗವತರ ಮಹಿಮೆತಿಳಿದು ಸಾಧನೆಗೈಯ್ಯಬೇಕೆಂಬ ಕುತೂಹಲದಿಂದ ದೇವಾಂಶರ ಬಿಡದೆ ಅವತಾರ ಮಾಡಿದ ಪವಿತ್ರವಂಶದಿ ಬಹುಕಾಲ ಪುತ್ರಾಪೇಕ್ಷೆಯಿಂದಲಿ ಶ್ರೀನಿವಾಸನ ಸೇವೆಗೈದ ಮಾತೆ ಶ್ರೀ ರುಕ್ಮಿಣೀದೇವಿ ಪಿತ ರಾಘವೇಂದ್ರರ ಉದರದಿಂದಲಿ ಜನಿಸಿ ಬಾಲತ್ವ ಕೆಲಕಾಲ ಕಳೆದು ತದನಂತರದಿ ಭೂವೈಕುಂಠಪುರದಲ್ಲಿ ದ್ವಿಜತ್ವವನೆ ಪಡೆದು ಲೌಕಿಕ ವಿದ್ಯೆಗಳನೆಲ್ಲ ಕಲಿಸಿ ಬಳಿಕ ಸಂಗೀತ ವಿದ್ಯೆಯ ಸಾಧನಕೆ ಮಿಗಿಲೆಂದು ಸಾಧಿಸಿ ಬಿಡದೆಲೆ ಪ್ರಾವೀಣ್ಯತೆಯ ಪಡೆದು ಅತಿ ಗೌಪ್ಯದಿಂದಲಿ ಶಿರಿಗುರು ತಂದೆವರದಗೋಪಾಲವಿಠ್ಠಲನ ಸ್ತುತಿಸಿ ಮನದಿ ಅತಿ ಹಿಗ್ಗುತಲಿರ್ದ ಬಗೆ ಕೇಳಿ 2


ಗುರು ಕಾಳಿಮರ್ದನ ಕೃಷ್ಣಾಖ್ಯದಾಸರ ಸಹವಾಸದಿಂದಲಿ ಲೌಕಿಕದಿ ಹುರುಳಿಲ್ಲವೆಂಬ ಮರ್ಮವ ತಿಳಿದು ಮನದಿ ವಿಚಾರಿಸುತಿರಲು ಕಾಲವಶದ ಸೋತ್ತುಮ ರಾಜ್ಯದಿ ಸ್ವರೂಪ ಕ್ರಿಯೆಗಳಾಚರಣೆಗೆ ಮನಮಾಡುತಲಿಹ ಓರ್ವ ದ್ವಿಜನ ಮರ್ಮವ ತಿಳಿಯದೆ ನಿಂದಿಸುವ ಮನವ ಮಾಡೆ ಶ್ರೀವದ್ವಿಜಯರಾಯರುತಮ್ಮ ವಂಶಜನಿವನೆಂದು ಶ್ರೀಮತ್ ರಾಘವೇಂದ್ರ ಮುನಿಗೆ ಬಹು ವಿಧ ಪ್ರಾರ್ಥಿಸಿ ಫಲ ಮಂತ್ರಾಕ್ಷತೆಯನಿತ್ತು ಧ್ಯಾನಕ್ಕೆ ತೊಡಗಿಸಿ ಶ್ರೀಮದ್ ಭಾವಿ ಸಮೀರ ಪದರಜವೇ ಬಹು ಭಾಗ್ಯವೆಂದು ಧೇನಿಪ ಭಕ್ತವರ್ಯರಾದ ತಂದೆವರದಗೋಪಾಲ ವಿಠಲದಾಸರಾಯರ ಪದಪದ್ಮಂಗಳಿಗೊಪ್ಪಿಸಿ ಅಪರಾಧಗಳನ್ನೆಲ್ಲ ದೃಷ್ಟಿ ಮಾತ್ರದಿ ದಹಿಸಿ ಫಣಿಗೆ ಮೃತ್ತಿಕೆ ತಡೆದು ಗುರುಗಳನೆ ಅರುಹಿ ನಿಜ ಮಾರ್ಗದಿಂದ ಶಿರಿಗುರುತಂದೆವರದಗೋಪಾಲವಿಠ್ಠಲನ ಕರುಣಿ ಪಡೆವ ಮಾರ್ಗವನೆ ಪಿಡಿದರು ಜವದಿ 3


ಭವದೊಳು ಬಳಲುವ ಭೌತಿಕ ಜೀವಿಗಳ ಬಹು ಬೇಗದಿಂದಲಿ ಉದ್ಧರಿಸಲೋಸುಗ ಬೋಧಮುನಿ ಕೃತ ಗ್ರಂಥಸಾರವ ಬೋಧಿಪ ಮುನಿಗಳ ದರ್ಶನಗೋಸುಗ ಪೊರಟ ಸಮಯದಲಿ ಶ್ರೀಗುರು ವಾದಿರಾಜ ಮುನಿವರ್ಯ ತನ್ನಯ ಪುತ್ರನ ಮೊರೆಕೇಳಿ ಶ್ರೀಲಕ್ಷ್ಮೀಹಯವದನನ ಮೂರ್ತಿಯ ಪ್ರಾರ್ಥಿಸೆ ರೌಪ್ಯಪೀಠ ಪುರವಾಸಿ ಶ್ರೀಕೃಷ್ಣನ ಕರದಿ ಶೋಭಿಪ ವಸ್ತುವಿನ ಪುರದಿ ಸ್ವಪ್ನದಿ ಬಂದು ತಂದೆವರದವಿಠ್ಠಲನೆಂಬ ಅಂಕಿತವನಿತ್ತು ಅದೇ ಸುಂದರ ರೂಪವ ತೋರಿ ನೈಜಗುರುಗಳ ದ್ವಾರಾ ಭಜಿಸೆಂದು ಬೋಧಿಸಿದ ನಂತರದಿ ಬಹು ಸಂಭ್ರಮದಿಂದಲಿ ಉಬ್ಬುಬ್ಬಿ ತನ್ನ ತನುಮನಧನ ಮನೆ ಮಕ್ಕಳನೆಲ್ಲ ನಿನ್ನ ಚರಣಾಲಯಕೆ ಅರ್ಪಿತವೆಂದು ಅರ್ಪಿಸಿ ಗುರುಗಳ ದ್ವಾರಾ ಸಿರಿಗುರು ತಂದೆವರದಗೋಪಾಲಗೆ ಸದಾ ಧೇನಿಸುತ ಮೈಮರೆತಿರ್ದನೀ ದಾಸವರ್ಯ 4


ಮೊರೆ ಪೊಕ್ಕವರನೆ ಬಿಡದೆ ಪೊರೆವುದಕೆ ಭೂತಳಕೆ ನೆಲಸಿಹ ಸುರಪನಾಲಯಕೆ ಮಿಗಿಲಾದ ಸುಖಗರೆವ ತುಂಗಾತೀರ ನಿವಾಸ ಶ್ರೀ ರಾಘವೇಂದ್ರರ ಪೀಠದಿ ಶೋಭಿಪ ಯತಿವರ್ಯ ಶ್ರೀ ಧೀರೇಂದ್ರ ಸುಶೀಲೇಂದ್ರ ಸುವ್ರತೇಂದ್ರ ಶ್ರೀ ನರಹರಿಯ ವಂಶಸ್ಥ ಶ್ರೀ ಸತ್ಯಬೋದಾದಿ ಯತಿವರ್ಯರ ಸಂದರುಶನವ ಪ್ರತಿ ವತ್ಸರದಲಿ ಕೊಳ್ಳುತಲಿ ಗೌಪ್ಯದಲಿ ನಿಜಮರ್ಮಕ್ಕನುಸರಿಸಿ ಸೇವೆಗೈದು ನೈಜಗುರುಗಳ ದರುಶನಕೆಂದು ಶ್ರೀ ಕ್ಷೇತ್ರ ಸೋದಾಪುರಕೆ ಪೋಗಿ ಮಹಾದ್ವಾರದಲಿ ಬಹು ಭಕ್ತಿಯಿಂದಲಿ ಸಾಷ್ಟಾಂಗ ನಮನವ ಮಾಡಿ ಕರಮುಗಿದು ಶಿರಬಾಗಿ ನಿಂತಿರಲು ಶ್ರೀ ಗುರುರಾಜಾಜ್ಞೆಯಿಂದಲಿ ಶ್ರೀ ಭೂತರಾಜರು ಸಮಸ್ತ ಪರಿವಾರದೊಡನೆ ಬಹು ಬೇಗದಿಂದಲಿ ಬಂದು ಕರುಣದಿಂದಲಿ ಮೈದಡವಿ ಆದರದಿ ಸಂಪ್ರದಾಯಾನುಸಾರದಲಿಪವಿತ್ರ ಸ್ಥಳಗಳನೆ ತೋರಿ ತದಭಿಮಾನಿ ದೇವತೆಗಳ ಪೂರ್ಣಾನುಗ್ರಹಕೆ ಪಾತ್ರರನೆ ಮಾಡಿ ಶ್ರೀಲಕ್ಷ್ಮೀ ತ್ರಿವಿಕ್ರಮ ಸ್ವಾಮಿಯ ಸಂದರುಶನವ ಗೈಸಿ ತನ್ನ ಪ್ರಭುಗಳ ಪಾದ ಪದ್ಮಂಗಳ ಸನ್ನಿಧಿಗೆ ತಂದೊಪ್ಪಿಸಿ ಕರವ ಮುಗಿದು ಸ್ವಾಮಿ ಶ್ರೀಗುರುರಾಜಾತ್ವದ್ದಾಸವರ್ಗಕೆಸೇರಿದ ಬಾಲಕ ದಾಸನೀತಾ ಕರುಣದಿಂದಲಿ ಜವದಿ ಕರುಣ ಕಟಾಕ್ಷದಿ ಈಕ್ಷಿಸಿ ಉದ್ಧರಿಸಬೇಕೆಂದು ಬಹುವಿಧ ಪ್ರಾರ್ಥಿಸಲು ಪರಮ ಕರುಣಾನಿಧಿ ಋಜುವರ್ಯ ಶ್ರೀ ವಾದಿರಾಜಾರ್ಯ ತನ್ನ ಹಂಸರೂಪಿಣಿ ಶ್ರೀ ಭಾವೀ ಭಾರತಿಯಿಂದೊಡಗೂಡಿ ಬಹು ಆನಂದದಿಂದಲಿ ಪಂಚ ಬೃಂದಾವನ ರೂಪದಿ ಮೆರೆವ ತನ್ನಯ ರೂಪವ ತೋರಿ ತುತಿಸಿಕೊಂಡು ಬಹು ಆನಂದಭರಿತರಾಗಿ ಬಹು ಬೇಗ ಸಾಧಿಸುವ ಗೈಸಲೋಸುಗ ಶಿರಿಗುರು ತಂದೆವರದಗೋಪಲವಿಠಲನ ಪ್ರಾರ್ಥಿಸಿ ಸಕಲ ಉತ್ಸವಗಳ ತೋರಿ ಶ್ರೀಮದ್ವಿಶ್ವೇಂದ್ರರ ದ್ವಾರಾ ತವ ಪಾದರೇಣು ಫಲ ಮಂತ್ರಾಕ್ಷತೆಯನಿತ್ತು ಬಗೆಯನೆಂತು ವರ್ಣಿಸಲಿ ಪಾಮರ ನರಾಧಮನು ನಾನು 5


ಕೇವಲ ಲೌಕಿಕ ಜನರಂತೆ ಆಧುನಿಕ ಪದ್ಧತಿಗನುಸರಿಸಿ ದಿನಚರ್ಯವನೆ ತೋರುತಲಿ ಭಾರತೀಶನ ಪ್ರಿಯವಾಗಿಹ ಕರ್ಮಗಳನೊಂದನೂ ಬಿಡದೆ ತಿಳಿದು ಮನದಿ ಮಾಡುತಲಿ ಮಂಕುಗಳಿಗೆ ಮೋಹಗೊಳಿಸಿ ಮಮಕಾರ ರಹಿತನಾಗಿ ದಿನಾಚರಣೆಗೈದು ಶ್ರೀ ಶುಕಮುನಿ ಆವೇಶಯುತರಾದ ಸದ್ವಂಶಜಾತ ಶ್ರೀಕೃಷ್ಣನ ಸೇವೆಗೋಸುಗ ಅವತರಿಸಿದ ವಾಯುದೇವ ಪೆಸರಿನಿಂದಲಿ ಶೋಭಿಪ ಕುಲಪುರೋಹಿತರ ಬಳಿಯಲಿ ಬಹು ವಿನಯದಿಂದಲಿ ಶ್ರೀ ನಿಜತತ್ವಗಳ ಮರ್ಮಗಳ ಕೇಳಿಕೊಂಡು ಮನದಿ ವಿಚಾರಿಸಿ ದೃಢೀಕರಣ ಪೂರ್ವಕ ಪಕ್ವವಾದ ಮನದಿಂದಲಿ ಶ್ರೀಶಶ್ರೀ ಮಧ್ವಮುನಿ ಶ್ರೀಗುರುಗಳ ಕರಣವನೆ ಕ್ಷಣಕ್ಷಣಕೆ ಬಿಡದೆ ಸ್ಮರಿಸುತಾನಂದ ಭಾಷ್ಯೆಗಳ ಸುರಿಸುತ ಭಾಗವತರ ಸಮ್ಮೇಳನದಿ ತತ್ವಗಳ ವಿಚಾರಿಸುತ ಶ್ರೀ ದಾಸಾರ್ಯರಾ ಉಕ್ತಿಗಳ ಆಧಾರವನೆ ಪೇಳುತಲಿ ಮನದಿ ಗುರುಗಳ ಸನ್ನಿಧಿಗೆ ಅರ್ಪಿಸಿ ತತ್ವದ್ವಾರ ತಿಳಿದುಪೂರ್ಣ ಸಾಧನವಗೈದು ಶ್ರೀ ಪ್ರಲ್ಹಾದ ಬಲಿ ಮಾಂಧಾತ ಕರಿರಾಜ ಶಿಬಿಮೊದಲಾದ ಚಕ್ರವರ್ತಿಗಳಲಿ ಬಹುಬೇಗ ಸಾಧನವ ಗೈದರು ಇವರಾರೊ ನಾ ಕಾಣೆ ಶಿರಿ ಗುರುತಂದೆವರದ-ಗೋಪಾಲವಿಠಲನ ಆಣೆ 6


ಸಾರಸುಖವ ಸತಿ ಆವೇಶದಿಂದಲಿ ಉದ್ಭವಿಸಿದ ಸುತೆಯ ವಿಯೋಗದ ನೆಪಮಾಡಿನಾಲ್ಕೆಂಟು ವತ್ಸರ ಪಾಂಚಭೌತಿಕ ದೇಹದಿಂದಿದ್ದು ಸಾಧನ ಪೂರ್ತಿಗೈದ ಬಗೆಯನೆ ಸಾಧುಜನಕೆ ತಾ ತೋರದಲೆ ಇನ್ನು ಈ ಭೂಲೋಕದ ವಾಸವು ಸಾಕೆಂದು ತಾರುಣ ವತ್ಸರ ಬಹು ತಾರಕವೆಂದು ಬಗೆದು ಬಲು ಸಂಭ್ರಮದಿಂದಲಿ ಭೌತಿಕ ದೇಹದಿ ಏಳು ದಿನ ಬಿಡದೆ ಪ್ರಾಯೋಪವೇಶಗೈದುಬಂದ ಜನರಿಗೆಲ್ಲ ಕರುಣದಿಂದಲಿ ನೋಡಿ ತದಾಕಾರನಾದಶ್ರೀಹರಿಯ ಗುರುಗಳ ದ್ವಾರಾ ಧೇನಿಸುತ ನೈಜ ಸತಿ ಇವಳೆಂದುಮನದಿ ವಿಚಾರಿಸಿ ಕಪಿಲ ಮುನಿಯು ತನ್ನ ಮಾತೆಗೆ ಪೇಳಿದಂತೆಪಿರಿಯರೆಂದು ಬಗೆದು ಪರ್ಯಾಯದಿಂದಲಿ ತತ್ವವನೆ ಪೇಳಿಭಾಗವತ ಜನರಿಗೆ ಮೌನದಿಂದಲಿ ಬಹುಬೇಗಸಾಧನವ ಗೈಯ್ಯಬೇಕೆಂದುಸೂಚನೆಯ ಮಾಡುತ ಮಾಯಾ ಮಮತೆಗಳೆಂಬವ್ಯಾಘ್ರಾದಿಗಳನೆಲ್ಲನೈಜಜ್ಞಾನಾಖ್ಯ ಖಡ್ಗದಿಂದಲಿ ಸವರಿ ಆಶ್ವೀಜ ಶುದ್ಧ ನವಮಿಮಂಗಳ ಶುಭ ದಿನದಿ ಸಂಖ್ಯಾ ಕಾಲದಿ ಪ್ರಥಮ ಯಾಮವೆಮಿಗಿಲೆಂದು ಮನದಿ ಲಯ ಚಿಂತನೆಯ ಬಿಡದೆ ಮಾಡುತದೇವತೆಗಳ ದುಂದುಭಿ ವಾದ್ಯಗಾಯನಗಳ ರಭಸದಿಶ್ರೀ ಲಕುಮಿ ದೇವಿಯ ಸೌಮ್ಯ ದುರ್ಗಾ ರೂಪಕೆನಮೋ ನಮೋ ಎಂದು ಶಿರಿಗುರುತಂದೆವರದಗೋಪಾಲ ವಿಠಲನಪುರಕೆ ಪುಷ್ಪಕ ವಿಮಾನ ರೋಹಿಣಿಯನೆ ಮಾಡಿನಲಿನಲಿದಾಡುವ ತೆರಳಿ ಪೋದಾರಿವರು 7


ಜತೆ :ಸತಿದೇವಿ ರಮಣನ ಭಕ್ತನೇ ನಿನ್ನಯಸುಖತನವೆಂದಿಗೂ ಕೊಡಲೆಂದು ಬೇಡಿಕೊಂಬೆಸಿರಿಗುರುತಂದೆವರದಗೋಪಾಲ ವಿಠಲನಿಗೆ 8

***