RAO COLLECTIONS SONGS refer remember refresh render DEVARANAMA
..
kruti by ಲಕ್ಷ್ಮೀನಾರಯಣರಾಯರು Lakshminarayanaru
ರಾಮ ಸದ್ಗುಣ ಧಾಮ - ನಿಸ್ಸೀಮ
ಸುಮನೋರಮ ಪ
ಕಾಮಾರಿಸ್ತುತ ಮಂಗಳನಾಮ ಅ
ಸರಸಾಕಾರ ದುರಿತ ವಿದೂರ
ಕರುಣಾಕರ ಸುಂದರ ಗಂಭೀರ 1
ದೀನೋದ್ಧಾರ ವಿಪಿನವಿಹಾರ
ದಾನವಹರ ಸುರಕಾವ್ಯ ವಿಚಾರ 2
ಸೀತಾನಾಥ ವಾನರಯೂಥ
ವಾತಾತ್ಮಜ ನುತ ಶ್ರೀ ಲಕ್ಷ್ಮೀಕಾಂತ 3
***