..
ಲಕ್ಷ್ಮೀನಾರಾಯಣ ಕಾಯೋ ನಿನ್ನ ನಂಬಿದವರÀುಕ್ಷಿಯೊಳು ಜಗಂಗಳನಿತ್ತು ರಕ್ಷಿಸಿದ ಶ್ರೀಶ ಪ.
ಕಂದ ಪ್ರಹ್ಲಾದನ್ನ ಕಾಯ್ದೆ ಚಂದದಿ ಕಾಯೊಯೆಂದು ಬಂದಮುಂದೆ ನಿಂದ ಮಂದಿಯೊಳು ನಿಂದು ನೀ ಸಲಹಯ್ಯ 1
ಕರಿರಾಜ ಕರೆಯಲು ಭರದಿ ಬಂದು ಪೊರೆದೆ ನೀಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ 2
ಶರಣು ಮುಖ್ಯ ಸುರರ ವರದೈವವಾದೆ ನೀನುಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ 3
ಶಂಖಚಕ್ರಧರಾಕಾರ ಕಿಂಕರ ಭಯಹರಅಂಕದ ಶ್ರೀದೇವಿಗೆ ಮೀನಾಂಕ ತಲೆದೊರಿದೆ ನೀ 4
ಹಯವದನನಾಗಿ ನೀ ತ್ರಯೀಚೋರರನ್ನು ಕೊಂದುಸ್ತ್ರೀಯರಿಗೆ ನ್ಯಾಯದಿಂದ ದಯ ಬೀರಿದೆಯಲ್ಲ 5
***