ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾರಿಸುವಿ ಹರಿಯೇ ಎನ್ನವಗುಣಾ ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ
ಉದಯ ಉದ್ಯೋಗನೆನುವೆ ಮಧ್ಯಾಹ್ನಕ ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು ವದಗಿ ನಿದ್ರೆ ಯನುವೆ ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1
ನಿನ್ನ ಕಥೆಯಾ ಕೇಳದೇ ಮಂಗಳಂಗುಟ ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ ಚೆನ್ನಾಗಿ ಮಾಡದೇ ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2
ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ ಅರಿವಿಗೆ ಮನನೀಲಿಸೀ ಹೊರೆವದು ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3
***