ankita ಭೂಪತಿವಿಠಲ
ರಾಗ: ಪೀಲು ತಾಳ: ಭಜನೀಠೇಕಾ
ಬಿಡುವೆನೇನಯ್ಯಾ ನಿನ್ನ ಬಿಡುವೆನೇನಯ್ಯಾ
ಬಿಡುವೆನೇನಯ್ಯಾ ನಿನ್ನ ಹಡೆದ ತಂದೆಯ ಕೊಲ್ಲಿಸಿ(?) ಪ
ಇಲ್ಲಿ ಸಡಗರದಿಂದ ಯತಿಯು ಆಗಿ
ಅಡಗಿಕೊಂಡು ಕುಳಿತರೆ ಈಗ 1
ಚಕ್ರವರ್ತಿ ಆದರೇನು ಚಕ್ರಪಾಣಿಯ ಕುಣಿಸಿದರೇನು
ನಕ್ರಹರನ ತಂದು ನಮಗೆ ಅಕ್ಕರೆಯಿಂದ ತೋರುವತನಕ 2
ಸಣ್ಣ ಬಾಲಕನಾದರೇನು ಕಣ್ಣು ಮುಚ್ಚಿ ಕುಳಿತರೆ ನೀನು
ಬೆಣ್ಣೆ ಕಳ್ಳ ಕೃಷ್ಣನ ನಮ್ಮ ಕಣ್ಣಿಗೆ ತಂದು ತೋರುವ ತನಕ 3
ಜಾಣಯತಿಯು ಆದರೇನು ಮೌನದಿಂದ ಇದ್ದರೇನು
ಕೋಣನಂತೆ ತಿರುಗುವ ನಮಗೆ ಜ್ಞಾನ ಭಕ್ತಿ ಕೊಡುವ ತನಕ 4
ಶಾಪಾನುಗ್ರಹ ಶಕ್ತನು ನೀನು ಅಪರೋಕ್ಷೀಕೃತ ಶ್ರೀಶನು ನೀನು
ಅಪೇಕ್ಷಿತವ ಕೊಟ್ಟು ನಮಗೆ ಭೂಪತಿವಿಠಲನ ತೋರುವತನಕ 5
***