Showing posts with label ಇಲ್ಲೇ ಹರಿ ಇರುವ ಬಲ್ಲವರದ ನೋಡಲಲ್ಲೇ ತೋರುವ raghurama vittala. Show all posts
Showing posts with label ಇಲ್ಲೇ ಹರಿ ಇರುವ ಬಲ್ಲವರದ ನೋಡಲಲ್ಲೇ ತೋರುವ raghurama vittala. Show all posts

Thursday, 5 August 2021

ಇಲ್ಲೇ ಹರಿ ಇರುವ ಬಲ್ಲವರದ ನೋಡಲಲ್ಲೇ ತೋರುವ ankita raghurama vittala

   ..

ಇಲ್ಲೇ ಹರಿ ಇರುವ ಪ


ಬಲ್ಲವರದ ನೋಡಲಲ್ಲೇ ತೋರುವ ಅ.ಪ


ಗಿಡದ ಬೇರು ಕಾಂಡ ಕೊಂಬೆ ರೆಂಬೆಗಳಲ್ಲಿ

ಅಡಗಿ ಎಲೆಯೊಳ್ಹೀಚು ಹೂವ್ಕಾಯ್ಗಳಲ್ಲಿ

ಮೃಡ ಸಖನಲ್ಲಲ್ಲೆ ವಿವಿಧ ರೂಪಗಳಿಂದ

ಅಡಗಿದ್ದು ಬೆಳೆಸುವ ಕಳೆಗೊಳಿಸುವನು1


ವಸ್ತ್ರದ್ಹಾಸುಹೊಕ್ಕು ದಾರಗಳಂದದಿ

ವಿಸ್ತಾರಗೊಂಡ ಈ ಲೋಕದೊಳು

ಹಸ್ತಿವರದನಾದಿಮೂಲ ತಾ ನೆಲೆಗೊಂಡು

ಸ್ವಸ್ಥದಿ ಪೊರೆವನನಂತ ಪ್ರಾಣಿಗಳ 2


ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ರೂಪ

ವನು ತಾಳಿ ನಾರಾಯಣ ವಾಸುದೇವನು

ಅನಿಮಿತ್ತಬಂಧು ಚರಾಚರ ಪೃಥ್ವಿಯ

ನನುದಿನ ಪೊರೆವ ರಘುರಾಮವಿಠಲನು 3

***