Showing posts with label ಶ್ರೀಮದ್ಗುರುವರ ಪವನಗೆ ಜಯ ಜಯ krishnavittala. Show all posts
Showing posts with label ಶ್ರೀಮದ್ಗುರುವರ ಪವನಗೆ ಜಯ ಜಯ krishnavittala. Show all posts

Monday, 2 August 2021

ಶ್ರೀಮದ್ಗುರುವರ ಪವನಗೆ ಜಯ ಜಯ ankita krishnavittala

 ಮಂದಾಸಲ ರಗಳೆ

ಶ್ರೀಮದ್ಗುರುವರ ಪವನಗೆ ಜಯ ಜಯ

ರಾಮ ಪದಾಂಬುಜ ಭೃಂಗಗೆ ಜಯ ಜಯ

ತಾಮಸ ಕುರುಕುಲ ಧ್ವಂಸಕ ಜಯ ಜಯ

ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1


ವಾಸುದೇವ ಸುನಾಮಕ ಜಯ ಜಯ

ದೋಷ e್ಞÁನ ವಿನಾಶಕ ಜಯ ಜಯ

ಭೇಷ ಸೂರ್ಯ ವಿಭಾಸಕ ಜಯ ಜಯ

ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2


ಶುಭಗುಣಲಕ್ಷಣ ಶೋಭಿತ ಜಯ ಜಯ

ಅಭಯ ಪ್ರದ ಭವ ಮೋಚಕ ಜಯ ಜಯ

ಇಭವರದಾe್ಞÁಧಾರಕ ಜಯ ಜಯ

ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3

ನಿತ್ಯ ಸದಾಗಮ ಕೋಶಗೆ ಜಯ ಜಯ

ಸತ್ಯವತೀಸುತ ಪ್ರೀಯಗೆ ಜಯ ಜಯ

ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ

ಭೃತ್ಯ ಮನೋರಥ ಸುರತರು ಜಯ ಜಯ 4


ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ

ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ

ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ

ತುಚ್ಚಮತಾಟವಿ ಪಾವಕ ಜಯ ಜಯ 5


ಯತಿ ಕುಲಾಂಬುಜ ತರಣಿಗೆ ಜಯ ಜಯ

ಶೃತಿತತಿ ವಿಮಲ ಸುಭೋದಕ ಜಯ ಜಯ

ರತಿಪತಿ ಪಿತವರ ದೂತಗೆ ಜಯ ಜಯ

ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6


“ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ

ಲೋಕ ಹಿತಪ್ರದ ನಿಜಗುಣ ಜಯ ಜಯ

ಶ್ರೀಕರ ಶುಭಕರ ಜಯಕರ ಜಯ ಜಯ

ಆಕಮಲಾಸುತ ರಯೀಪತಿ ಜಯ ಜಯ 7

****