..
ವಾಯುದೇವರ ಸ್ತೋತ್ರ
ಲಾಲಿ ಲಾಲಿ ತ್ರಿಭುವನ ಪಾವನ ಲಾಲಿ ಪ
ಅಂಜನದೇವಿಯ ಕಂದಗೆ ಲಾಲಿಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ ||ಅಂಜದೆ ಅಸುರರ ಕೊಂದಗೆ ಲಾಲಿಸಂಜೀವನ ಗಿರಿ ತಂದಗೆ ಲಾಲಿ 1
ಕುಂತಿಯುದರದಿ ಬಂದಗೆ ಲಾಲಿದಂತಿಯ ಗಗನಕ್ಕೆ ಒಗದಗೆ ಲಾಲಿ ||ಭ್ರಾಂತನ ಉದರವ ಬಗೆದಗೆ ಲಾಲಿಚಿಂತಾಮಣಿ ಭೀಮರಾಯಗೆ ಲಾಲಿ 2
ಸೋಹಂ ಎಂಬರ ತರಿದಾಗೆ ಲಾಲಿ ದಾ-ಸೋಹಂ ಎಂಬರ ಪೊರೆದಗೆ ಲಾಲಿ ||ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿಸ್ನೇಹದಿ ಭಕತರ ಪೊರೆವಗೆ ಲಾಲಿ 3
***