Showing posts with label ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ gadugina veeranarayana. Show all posts
Showing posts with label ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ gadugina veeranarayana. Show all posts

Wednesday, 1 September 2021

ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ ankita gadugina veeranarayana

 ..

kruti by ವೀರನಾರಾಯಣ Veeranarayana 


ನಿಜ ವೈಷ್ಣವಾ ಅವನೇ ನಿಜ ವೈಷ್ಣವಾ ಪ


ಇತರರ ದುಃಖವು ತನಗೆಂದರಿವಾಸತತದಿ ಸೇವೆಗೆ ತತಪರನಿರುವಾ 1


ತೊರೆದು ಹೆಮ್ಮೆಯಾ ಸರುವರು ನಮಿಸುವ ಪರರನು ಜರಿಯಾ ನಿರುಮಲನಿರುವಾ 2


ಧನ್ಯನವನು ತಾಯನ್ಯ ಸತಿಯರನುತನ್ನ ತಾಯಿಯೊಲು ಮನ್ನಿಸುತಿರುವಾ 3


ಸಟಿಯನು ನುಡಿಯಾ ಪರಧನವೆಡಿಯಾಕಟ್ಟಿಲಿ ಸಿಕ್ಕದೆ ಸಮಮನನೆನವ 4


ನಡೆನುಡಿಗಳಲಿ ಮಡಿಯಿಂದಿರುವಾದೃಢ ಮನದಿಂ ಬಹು ಶಾಂತಿಯಲಿರುವಾ 5


ಪ್ರತಿಪ್ರಾಣಿಯಲಿ ಹರಿಯನು ನೋಡುವಾಅತಿಶಯ ದಯವನು ತೋರುತಲಿರುವಾ 6


ಕಾಮಕ್ರೋಧಗಳ ಗಡ ಜೈಸಿರುವರಾಮನಾಮವ ನೇಮದಿ ಭಜಿಸುವ 7


ಗದುಗಿನ ವೀರನಾರಾಯಣನಹೃದಯದಿ ಸತತ ಮುದದಲಿ ಪಿಡಿವ 8

***