ಪುರಂದರದಾಸರು
ಕೂಸು ಕಂಡೆವಮ್ಮ , ಅಮ್ಮ ನಿಮ್ಮ
ಕೂಸು ಕಂಡೆವಮ್ಮ ||ಪ||
ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು
ಶೇಷಗಿರಿಯ ಮೇಲೆ ವಾಸವಾಗಿದ್ದನೆ ||
ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು
ಕಂಚಿ ಪಟ್ಟಣದಿ ಬಲ್ ಮಿಂಚಾಗಿದ್ದನೆ ||
ಗುಡ್ಡ ಬೆರಳೊಳೆತ್ತಿ ದೊಡ್ಡಿ ಗೋವ್ಗಳ ಕಾಯ್ದು
ಒಡ್ಡಿ ಜಗನ್ನಾಥ ಗಿಡ್ಡಾಗಿದ್ದನೆ ||
ದುಡುಕುಮಾಡಿ ಹಾಲು ಮಡಕೆಗಳ ಒಡೆದು
ಹಡಗನೇರಿ ಬಂದು ಉಡುಪಿಲಿ ಇದ್ದನೆ ||
ಮಂಗಳರೇಖೆ ಪಾದಂಗಳುಳ್ಳ ನಿಮ್ಮ
ರಂಗ ಪುರಂದರವಿಠಲ ಶ್ರೀಕೃಷ್ಣನೆ ||
***
ಕೂಸು ಕಂಡೆವಮ್ಮ , ಅಮ್ಮ ನಿಮ್ಮ
ಕೂಸು ಕಂಡೆವಮ್ಮ ||ಪ||
ಕಾಸಿಗೆ ವೀಸವ ಬಡ್ಡಿ ಗಳಿಸಿಕೊಂಡು
ಶೇಷಗಿರಿಯ ಮೇಲೆ ವಾಸವಾಗಿದ್ದನೆ ||
ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು
ಕಂಚಿ ಪಟ್ಟಣದಿ ಬಲ್ ಮಿಂಚಾಗಿದ್ದನೆ ||
ಗುಡ್ಡ ಬೆರಳೊಳೆತ್ತಿ ದೊಡ್ಡಿ ಗೋವ್ಗಳ ಕಾಯ್ದು
ಒಡ್ಡಿ ಜಗನ್ನಾಥ ಗಿಡ್ಡಾಗಿದ್ದನೆ ||
ದುಡುಕುಮಾಡಿ ಹಾಲು ಮಡಕೆಗಳ ಒಡೆದು
ಹಡಗನೇರಿ ಬಂದು ಉಡುಪಿಲಿ ಇದ್ದನೆ ||
ಮಂಗಳರೇಖೆ ಪಾದಂಗಳುಳ್ಳ ನಿಮ್ಮ
ರಂಗ ಪುರಂದರವಿಠಲ ಶ್ರೀಕೃಷ್ಣನೆ ||
***
ರಾಗ ಪಂತುವರಾಳಿ , ಅಟತಾಳ (raga tala may differ in audio)
pallavi
kUsu kaNDevamma amma nimma kUsu kaNDevamma
caraNam 1
kAsige vIsava baDDi gaLisi koNDu shESa giriya mEle vAsavAgiddane
caraNam 2
vancisi baleyoL-prapancavella seLedu kanci paTTanadi bal-mincAgiddane
caraNam 3
kuDDa berLoLetti doDDi gOvgaLa kAida oDDi jagannATha giDDAgiddane
caraNam 4
duDuku mADi hAlu maDagegaLa oDedu haDaganEri bandu uDupili iddena
caraNam 5
mangaLa rEge pAdangaLuLLa nimma ranga purandara viTTala shrI krSNana
***
ಕೂಸು ಕಂಡೆವಮ್ಮಅಮ್ಮ ನಿಮ್ಮಕೂಸು ಕಂಡೆವಮ್ಮ ಪ
ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು |
ಶೇಷಗಿರಿಯ ಮೇಲೆ ವಾಸವಾಗಿಪ್ಪನೆ 1
ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು |
ಕಂಚಿ ಪಟ್ಟಣದಿ ಮಿಂಚಾಗಿಪ್ಪನೆ 2
ಗುಡ್ಡ ಬೆರಳಲ್ಲೆತ್ತಿ ದೊಡ್ಡಿ ಗೋಗಳ ಕಾಯ್ದ |
ಒಡ್ಡಿಜಗನ್ನಾಥ ಗಿಡ್ಡಾಗಿಪ್ಪನೆ3
ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು |
ಹಡಗನೇರಿ ಬಂದು ಉಡುಪಿಯಲಿಪ್ಪನೆ 4
ಮಂಗಳರೇಖೆ ಪದಂಗಳುಳ್ಳ ನಿಮ್ಮ |
ರಂಗ ಪುರಂದರವಿಠಲ ಶ್ರೀ ಕೃಷ್ಣ 5
******