Showing posts with label ಮಾರುತೀ ನಮ್ಮಗುರು ಮೂರುತೀ jagannatha vittala. Show all posts
Showing posts with label ಮಾರುತೀ ನಮ್ಮಗುರು ಮೂರುತೀ jagannatha vittala. Show all posts

Saturday, 14 December 2019

ಮಾರುತೀ ನಮ್ಮಗುರು ಮೂರುತೀ ankita jagannatha vittala

ಜಗನ್ನಾಥದಾಸರು
ಮಾರುತೀ ನಮ್ಮಗುರು ಮೂರುತೀ ಪ

ಮಾರುತಿ ಕರುಣಿಸು e್ಞÁನಾ ಎನ್ನ
ಸೇರಿದ ಸತತ ಅe್ಞÁನಾ ಆಹ
ದೂರ ಓಡಿಸಿ ಹರಿ ಆರಾಧನೆ ಇತ್ತು
ಪಥ ಸರ್ವಾಧಾರ ಉದಾರನೆ ಅ.ಪ.

ದ್ವಿತೀಯ ಯುಗದಲ್ಲವತರಿಸಿ ಸೀತಾ
ಅತಿ ವೇಗದಿಂದ ಉತ್ತರಿಸಿ ರವಿ
ಸುತಗೊಲಿದವನುದ್ಧರಿಸಿ ಆಹಾ
ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು
ದಿವಿಜರ ಸದೆದ ಭಾರತಿಯ ರಮಣನೆ 1

ಕುರುಕುಲದಲ್ಲಿ ಉದ್ಭವಿಸಿ ಬಲು
ಗರಳ ಪದಾರ್ಥವ ಸಲಿಸಿ ಚೆಲ್ವ
ತರಣಿ ರೂಪವನೆ ಸಿಂಗರಿಸಿ ನೀಚ
ತರ ಕೀಚಕನ ಸಂಹರಿಸಿ ಆಹ
ಜರೆಯ ಸುತನ ಸೀಳಿ ಧರಣಿಪಾಲಕರನ್ನು
ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2

ಭೂತಳದೊಳಗೆ ಯತಿಯ ರೂಪ
ನೀ ತಾಳಿದೆಯೋ ಶುಭಕಾಯ ಮಾಯಿ
ವ್ರಾತ ಗೆಲಿದೆ ಮಧ್ವರಾಯಾ ಕಾಯ
ಜಾತ ಜನಕಗತಿ ಪ್ರೀಯಾ ಆಹಾ
ಭೂತನಾಥನೆ ಪರಮಾತುಮನೆಂಬ
ಪಾತಕರರಿ ಜಗನ್ನಾಥವಿಠಲನ ದೂತ 3
*********