kruti by Mahipatirayaru
ಅಧ್ಯಾತ್ಮದ ವಿದ್ಯ ಅಧ್ಯಕ್ಷಾಗಬೇಕು ಸಾಧ್ಯ P
ಕನ್ನಡಿಯೊಳಗಿನ ತಾ ಗಂಟು ಸನ್ನಿಧವಾಗುವದೆ ಕೈಗೊಟ್ಟು ಬಣ್ಣಿಸಬ್ಯಾಡಿ ನಿಜಬಿಟ್ಟು ಕಣ್ಣಾರೆ ಕೆಟ್ಟು 1
ಕನಸಿಲೆ ತಾ ಕಂಡಭಾಗ್ಯ ಅನುಭವಕೆ ಬಹುದೆ ಶ್ಲಾಘ್ಯ ನೆನಸಿಕೊಂಡವ ಅಯೋಗ್ಯಜನದೊಳು ಅಶ್ಲಾಘ್ಯ 2
ಹೊತ್ತಿಗೆಲ್ಹೇಳುವ ಪುರಾಣ ಯಾತಕೆ ಬಾಹುದು ನಿರ್ವಾಣ ಚಿತ್ತಗಾಗುದು ಸಮಾಧಾನ ಹತ್ತಿಲಿ ನಿಜಗಾಣಾ 3
ಬಾಹುದೆ ನಿರ್ವಾಹ ಹೊಗುವರೆ ಹೊಕ್ಕರೆ ಸಹಾ ಹೋಗದು ತೃಷದಾಹ 4
ಸಾಧನ ಮಾಡಿಕೊ ಸಾಧ್ಯಸದ್ಗುರು ಕೃಪೆಯಲಿ ನಿಜ ಅಭೇದ್ಯ ಸಾಧಿಸೊ ಮಹಿಪತಿ ಸಧ್ಯ ಆಧ್ಯಾತ್ಮಸುವಿದ್ಯ 5
***