Showing posts with label ಸಹನೆ ಇನ್ನೆಷ್ಟಮ್ಮ ಶ್ರೀ ಭಾರ್ಗವಿ ಮಹಾಲಕುಮಿ ಶ್ರೀಪತಿಗೆ uragadrivasa vittala. Show all posts
Showing posts with label ಸಹನೆ ಇನ್ನೆಷ್ಟಮ್ಮ ಶ್ರೀ ಭಾರ್ಗವಿ ಮಹಾಲಕುಮಿ ಶ್ರೀಪತಿಗೆ uragadrivasa vittala. Show all posts

Monday, 2 August 2021

ಸಹನೆ ಇನ್ನೆಷ್ಟಮ್ಮ ಶ್ರೀ ಭಾರ್ಗವಿ ಮಹಾಲಕುಮಿ ಶ್ರೀಪತಿಗೆ ankita uragadrivasa vittala

ಸಹನೆ ಇನ್ನೆಷ್ಟಮ್ಮ ಶ್ರೀ ಭಾರ್ಗವಿ ಪ

ಮಹಾಲಕುಮಿ ಶ್ರೀಪತಿಗೆ ಸಮಾಸಮಳೆನಿಸಿರಲು ಅ.ಪ


ಮಡುವ ಸೇರಿದ ಒಡೆಯ ಬಿಡದೆ ಮಂದರಗಿರಿಯ

ಪೊಡವಿಬಗೆದು ಒಡೆದು ಕಡುಕ್ರೂರನಾದ

ಬಡವನಂತೆ ಬೇಡಿ ಕೊಡಲಿ ಪಿಡಿದಿಹ ಕೆಡುಕ

ಮಡದಿಯಾ ಕಳಕೊಂಡು ಕಡಹನೇರಿದ ಕ್ರಿಯಕೆ 1


ಮುಗುಧರನ ಮಾಡಿದ ಶುದ್ಧಸ್ತ್ರೀಯರನೆಲ್ಲಾ

ಖಗಗಮನ ತಾ ತುರುಗವನು ಹತ್ತಿದಾಯೋಗ

ಭೃಗುಮುನಿಯ ಅಪಚಯಕೆ ಕರವೀರಪುರದಲಿರೆ

ನಾಗಗಿರಿಗಿಳಿದ ಪತಿಯ ಪರಿಣಯವನೆಸಗಿದೆ2


ನಾಗರಾಜನ ಕೂಗ ಕೇಳಿದಾಗ್ಹೇಳದಲೆ

ಬೇಗ ಸಾಗಿಬಂದಾ ಸರಸಿನಾ ಬಳಿಗೇ

ಅಂಗಜನ ವೈರಿಯ ಇಂಗಿತವನರಿತು

ಹೆಂಗಳಾರೂಪದಲಿ ಮೋಹಿಸಿದ ಮಾಯಕ್ಕೆ 3


ಕ್ಷಮೆಯಸಾಗರಳೆ ನಿನ್ನ ಅನುಪಮ ಸನ್ಮಹಿಮೆ

ಅಮಿತವಾಗಿಹುದು ಜಗಕಾರ್ಯದಿ

ಅಮಮ ನೀನಿರಲು ನಾಭಿಕಮಲದಲಿ ಬ್ರಹ್ಮನ ಜ-

ನುಮ ತೋರಿದ ಹರಿಯ ಸ್ವರಮಣನ ಕಾರ್ಯಕೆ4


ಗುಣತ್ರಯಂಗಳಭಿಮಾನಿ ಶ್ರೀ ವೇಂಕಟೇಶನರಾಣಿ

ಎಣೆಯಂಟೆ ಹರಿಗುಣವನೆಣಿಸುವ ಪ್ರವೀಣೆ

ಘನ್ನ ಉರಗಾದ್ರಿವಾಸವಿಠಲನ ಕರುಣ

ಪೂರ್ಣಪಾತ್ರಳೆ ಹರಿಯ ವಕ್ಷಸ್ಥಳನಿವಾಸಿನಿಯೇ5

****