Showing posts with label ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ vijaya vittala. Show all posts
Showing posts with label ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ vijaya vittala. Show all posts

Thursday, 17 October 2019

ಹರಿಮಣಿವರ್ಣ ವಿಠ್ಠಲಾ ನಿನ್ನವನೊ ಪರಮ ಪ್ರೀತಿಯಿಂದ ankita vijaya vittala

ವಿಜಯದಾಸ
ಹರಿಮಣಿವರ್ಣ ವಿಠ್ಠಲಾ ನಿನ್ನವನೊ
ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ

ಪಂಕಜ ದಳ ಕೂಡಿತು ನೋಡು
ಮುದರಿಕೊಂಡವು ಕುಮುದವೆಂಬೊ ಕಣ್ಣು
ಪದುಮನಾಭನೆ ನಿನ್ನ ನಖವೆಂಬೊ ರವಿ
ವದನವೆಂಬೊ ಚಂದ್ರÀಮಾ ಉದಿಸಲಿ 1

ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು
ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ
ಕರ್ಣ ಮಂದಿರವೆ ತುಂಬಲಿ
ಕಲಿ ಅಡಗಿ ಪೋಪಾ 2

ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು
ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು
ಪೂಸಿದಾ ಗಂಧ ದಿವ್ಯವಾಸನೆ ಬರಲಿ
ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು3

ನೀನಲ್ಲದೆ ತುಲಾ ಕಾವೇರಿಯೊಳಗೆ
ಸ್ನಾನ ಜಪ ತಪಗಳು ಮಾಡುವದೇಕೆ
ಸಿರಿ ಪ್ರಾಣರಿಗೆ
ಪ್ರಾಣನಾದ ಬಲು ಮೋಹನಾ 4

ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ
ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ
ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ
ಲೋಕ ಚರಿಸುವದೇನು ನಿನ್ನ ಪೋಗಾಡಿ 5

ಧವಳಗಂಗಿಯೊಳಂದು ಬಿದ್ದು ಬಂದಾಗ
ಕವಿ ವಾದಿರಾಜಗೊಲಿದು ಬರಲಿಲ್ಲವೇ
ಅವರ ದಾಸಾನುದಾಸನು ಸತತ ನಾನು
ತವಕದಿಂದಲಿ ಬಾರೊ ಭಕ್ತವತ್ಸಲಾ6

ಅರ್ಚಿಸಬಲ್ಲನೆ ದೇವ ನಿನ್ನನುದಿನಾ
ಗಚ್ಚರಿತವಂದಲ್ಲವೆ ಮತ್ತಾವದರಿಯೆ
ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ
ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ 7
*********