by ಗಲಗಲಿಅವ್ವನವರು
ಕೋಲಕೋಲೆಂದು ಕೋಮಲೆಯರೆಲ್ಲರ ಕಾಲುಗೆಜ್ಜೆಯು ಘಿಲ್ಲು ಘಿಲುಕೆಂದು ಇಲ್ಲೆ ಪ.
ಸಿಂಧುಶಯನನ ಚಂದದಲೆ ನೋಡಿಆನಂದ ಭಾಷ್ಪದ ಬಿಂದು ಉದುರುತ ಪಾಡಿಮಂದಹಾಸದಿ ಮನೆಗೆ ಬಾರೆನಲುಕೂಡಿಕೊಂಡು ಕೃಷ್ಣನ ಸಭೆಯ ಪ್ರವೇಶಮಾಡಿ 1
ಕರಲಾಘವ ಧರ್ಮ ಕೊಟ್ಟನು ರಾಜ ಶ್ರೇಷ್ಠನು ಮನನರಹರಿಯಲ್ಲಿಟ್ಟಿಹನು ವರಸಿಂಹಾಸನ ಏರಿದಶ್ರೇಷ್ಠ ತೋರಿದ ಬಲುಹರುಷ ಬೀರಿದರಾಜಗೋಪಾಲನ ನೋಡುವ ವರವ ಬೇಡುವ 2
ಜಳಕುಜಳಕುರಂಗ ಜಳಜಳಿಸುತ ಬರಲುಬೆಳಕು ತುಂಬಿತು ಬಹಳೆಮಂದಿರದಲಿಥಳಕು ಥಳಕನೆ ಹೊಳೆವ ಸಿಂಹಾಸನದÀಲಿಕುಳಿತ ಕೃಷ್ಣನು ಅಣಕಿಸಿ ಸೂರ್ಯನ 3
ಭೇರಿತುತ್ತೂರಿನಾನಾಪರಿವಾದÀ್ಯವಸಾರಿ ಕುಳಿತ ಧೀರ ಮುರಾರಿಚಾರುಮಲ್ಲಿಗೆ ಮಳೆಗರೆದ ಸುಖಸುರಿವರರಾಯರು ಏನು ಧನ್ಯರೆÉ ರಾಜಗೋಪಾಲನ್ನ ನೋಡುವ 4
ಹಲವು ರಾಯರು ಹಲವು ಯಾದವರುಬಲುಸೊಗಸಿಲೆ ಬಂದು ಕುಳಿತಾರೆ ಅವರುಹಲಧರನ ಹತ್ತಿರೆ ರಾಮೇಶನವರುಜಲಜಾಕ್ಷನ ನೋಡುತಲೊಪ್ಪುತಿಹರು 5
ಕಡು ಚಲ್ವ ರಾಮೇಶನ ಮಡದಿಯರುಉಡುರಾಜಮುಖಿಯರು ನಡೆದು ದ್ರೌಪತಿಸುಭದ್ರೆಯರ ಮಾನÀ ಶುದ್ಧೆಯರಹರಿಯ ಅಡಿಗೆರಗುವ ರಾಜಗೋಪಾಲನ ನೋಡುವ 6
********