Showing posts with label ಶ್ರೀಪುರಂದರದಾಸರಾಯ ನಿಮ್ಮಶ್ರೀ ಪಾದ venkata vittala purandara dasa stutih. Show all posts
Showing posts with label ಶ್ರೀಪುರಂದರದಾಸರಾಯ ನಿಮ್ಮಶ್ರೀ ಪಾದ venkata vittala purandara dasa stutih. Show all posts

Sunday, 1 August 2021

ಶ್ರೀಪುರಂದರದಾಸರಾಯ ನಿಮ್ಮಶ್ರೀ ಪಾದ ankita venkata vittala purandara dasa stutih

..

kruti by ವೆಂಕಟೇಶವಿಟ್ಠಲ ದಾಸರು venkatesha vittala dasaru

ಪುರಂದರದಾಸರ ಸ್ತೋತ್ರ


ಶ್ರೀ ಪುರಂದರದಾಸರಾಯ ನಿಮ್ಮಶ್ರೀ ಪಾದ ಪದ್ಮಕ್ಕೆ ಎರಗುವೆನು ಸಲಹೆಮ್ಮ ಪ


ಸುರಮುನಿಯು ನಾರದರೆ ಹರಿಯಾಜ್ಞದಿಂದ ಶ್ರೀಪುರಂದರಾ ಗಡದಲ್ಲಿ ಅವತರಿಸಿದೆತರುಣಿ ಮಕ್ಕಳು ಕೂಡೆ ಪರಮ ಸೌಖ್ಯದಲಿರುತಹರುಷದಲಿ ಮನೆಧನವ ಭೂಸುರರಿಗರ್ಪಣೆ ಮಾಡ್ದೆ 1


ಆದಿಕಾರಣ ನೀವು ದಾಸಮಾರ್ಗಕೆ ಪ್ರ-ಹ್ಲಾದನವತಾರ ಶ್ರೀ ವ್ಯಾಸಮುನಿಯಾಪಾದಕೆ ನಮಿಸಲುಪದೇಶವನು ಕೈಕೊಂಡುಮೋದತೀರ್ಥರ ಚರಣ ನಾದದಿಂದಲಿ ತುತಿಪೆ 2


ಅದ್ವೈತ ಮತವ ಕಾಲಿಲೊದ್ದು ಶ್ರೀ ಗುರುಮಧ್ವ ಸಿದ್ಧಾಂತವನು ಮಾಡಿದಶುದ್ಧ ಭಕ್ತಿ ಜ್ಞಾನ ವೈರಾಗ್ಯ ಪರರಾಗಿಮಧ್ವ ವಲ್ಲಭನ ಪದ ಹೃದ್ಗುಹದಿ ಪೂಜಿಸುವ 3


ಹರಿ ಸರ್ವೋತ್ತಮನೆಂದು ಧರೆಯೊಳಗೆ ನೀವು ಡಂ-ಗುರವ ಹೊಯ್ಸಿ ಮೆರೆವ ಶ್ರೀ ಗುರುವರ್ಯರೆತರತಮವು ಪಂಚಭೇದ ಸತ್ಯವೆಂದು ಪೇಳಿಹರಿಪುರವ ಸಾರ್ದ ಶ್ರೀ ಪುರಂದರರಾಯ 4


ತತ್ತ್ವ ಶೋಧನ ಮಾಡಿ ತತ್ತ್ವೇಶರನು ತಿಳಿದುತತ್ತತ್ಕಾಲಕೆ ಮಾಳ್ಪ ಕರ್ಮಗಳನಾಉತ್ತಮ ಶ್ಲೋಕ ಪುರುಷೋತ್ತಮನಿಗರ್ಪಿಸಿಮುಕ್ತಿ ಮಾರ್ಗವ ಪಿಡಿದೆ ಅತ್ಯಂತ ಮಹಾಮಹಿಮ 5


ಎರಡ್ಹೊತ್ತು ನಾಲ್ಕು ತತ್ತ್ವದ ವಿಚಾರವಅರುಹು ಹರಿಯೆ ದೈವ ಸಿರಿ ಬ್ರಹ್ಮ ವಾಯುಗರುಡ ಭುಜಂಗ ಮಾರಹರ ಇಂದ್ರ ಸುರರೆಲ್ಲ ತರತಮದಿ ದಾಸರೆಂಬುವ ಜ್ಞಾನ ಕರುಣಿಸುವುದು 6


ದಾಸವರ್ಯರೆ ವಿಜಯದಾಸರಾಯರಿಗುಪದೇಶಿಸಿದ ಪುರಂದರದಾಸರಾಯಶೇಷಗಿರಿವಾಸ ವೆಂಕಟ ವಿಠ್ಠಲನ ನಿಜದಾಸರಾ ದಾಸನೆಂದೆನಿಸೆನ್ನ 7

***