ಕಾಖಂಡಕಿ ಶ್ರೀ ಮಹಿಪತಿರಾಯರು
ಇನ್ನೊಬ್ಬರಿಗೆ ಇದು ಏನು ತಿಳಿದೀತು P
ವೇದಾಂತಕಿದು ಸನ್ಮತಗೂಡುವ ಮಾತು ಸಾಧುಜನರಿಗೆ ಸಾಕ್ಷಿಯಾಗಿ ದೋರುವ ಮಾತು ಸಾಧನಕೆ ಸಾಧಿಸುವ ಮಾತು ಬೋಧಿಸಿದವಗೆ ಬಲವಾಗುವ ಮಾತು 1
ಕೋಟಿ ಜನ್ಮದಾ ಪುಣ್ಯವಂತಗಿದಿರಿಡುವ ಮಾತು ನೋಟ ನಿಜವಾದವಗೆ ನೀಟವಾಗಿಹ ಮಾತು ಸೂಟಿಗಿದೆ ಘನಕೂಟ ಮಾತು ನಾಟಿಮನದೊಳು ಮಥಿüಸುವ ಮಾತು 2
ದ್ವೈತ ಅದ್ವೈತಕ ಆಧಾರವಾಗುವ ಮಾತು ತ್ರಯಗುಣಕ ಮೀರಿ ಮಿಗಿಲಾಗಿ ದೋರುವ ಮಾತು ಮಹಿಪತಿಯ ಗುರುಗೂಢ ಮಾತು ತ್ರಯಲೋಕಕಿದೆ ತಾರಿಸುವ ಮಾತು 3
***