Showing posts with label ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ramesha. Show all posts
Showing posts with label ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ramesha. Show all posts

Wednesday, 4 August 2021

ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ankita ramesha

ದಾರಿ ನೋಡುವನು ರಂಗಯ್ಯನಿಮ್ಮ ದಾರಿ ನೋಡುವನು ಮುರಾರಿ ಮುದ್ದು ವೈಯ್ಯಾರಿ ನಿನ್ನಯಮಾರಿ ತೋರೆಂದು ದಾರಿ ನೋಡುವನು ಪ.


ಏಳು ಸಾವಿರ ಮನೆಯು ತೆರವೆಂದು ಹೇಳಿದನಿಮಗಾಗಿ ಜಾಳಿಗೆ ಮುತ್ತು ಜಡಿಸೆಂದ ಜಾಳಿಗೆ ಮುತ್ತು ರಂಗಯ್ಯ ಜಡಿಸೆಂದ ಪಾಂಡವರ ಆಳು ಮಂದಿಗಳ ತಂದು ಇಳಿಸೆಂದ 1

ಚಂದದ ಮನೆ ಮುಂದೆ ಮುತ್ತಿನ ಹಂದರ ಹಾಕೆಂದ ಕುಂದಣ ರತ್ನ ರಚಿಸೆಂದ ಕುಂದಣ ರತ್ನ ರಚಿಸೆಂದ ರಂಗಯ್ಯಪಾಂಡವರ ಬಂಧುಗಳ ತಂದು ಇಳಿಸೆಂದ 2

ನೀಲಮೇಘಶ್ಯಾಮ ಮುತ್ತಿನ ಮಹಲು ರಚಿಸೆಂದಮ್ಯಾಲೆ ಮಾಣಿಕವ ರಚಿಸೆಂದ ಮ್ಯಾಲೆ ಮಾಣಿಕವ ರಚಿಸೆಂದ ರಂಗಯ್ಯ ಪಾಂಡವರ ಬಾಲಿಯರ ತಂದು ಇಳಿಸೆಂದ 3

ಮದಗಜನಯ್ಯನು ಮುತ್ತಿನ ಸದನ ವಿಸ್ತರಿಸೆಂದಹದಿನದಿ ರತ್ನ ರಚಸೆಂದಹದಿನದಿ ರತ್ನ ರಚಸೆಂದ ರಂಗಯ್ಯಪಾಂಡವರ ಮುದದಿಂದ ತಂದು ಇಳಿಸೆಂದ 4

ಚದುರ ರಾಮೇಶನು ಮಡದಿಯರೆದುರಿಗೆಮುದದಿ ದ್ರೌಪತಿಯ ಕರೆಯೆಂದಮುದದಿ ದ್ರೌಪತಿಯ ರಂಗಯ್ಯ ಕರೆಯೆಂದ ವಜ್ರದ ಸದನದಿ ತಂದು ಇಳಿಸೆಂದ 5

***

ದಯಮಾಡೊ ರಂಗ ದಯ ಮಾಡೊಕೈವಲ್ಯಪತಿ ನಮಗೆ ಕರುಣೆ ಮಾಡೊ ಕೃಷ್ಣ ಪ.


ಕುಂತಿ ದೇವಿಯರು ತಂದ ಅನಂತ ಪದಾರ್ಥವ ಶಾಂತ ಮೂರುತಿಯೆ ಕೈಕೊಳ್ಳೊ ಕೃಷ್ಣಶಾಂತ ಮೂರುತಿಯೆ ಕೈಕೊಳ್ಳೊ ಎನುತಲಿ ಕಾಂತೆ ಸುಭದ್ರಾ ನುಡಿದಳು1

ಶ್ರೀದೇವಿಯರಸನ ಪಾದವ ತೊಳೆದರು ಕ್ಯಾದಿಗೆ ಗಂಧ ತುಳಸಿಕ್ಯಾದಿಗೆ ಗಂಧ ತುಳಸಿ ಅಕ್ಷತೆಯಿಂದ ವೇದಗೋಚರನ ಉಪಚರಿಸಿ 2

ಸುರರಿಗಭಯವಿತ್ತು ಕರದಿ ವೀಳ್ಯವಕೊಟ್ಟುವರ ಪೂಗಿ ಫಲವ ನಡುವಿಟ್ಟುವರ ಪೂಗಿ ಫಲವ ನಡುವಿಟ್ಟು ರಾಮೇಶಗೆ ಕರವ ಜೋಡಿಸುತ ಐವರು3

***