ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೀನೆ ಸ್ವಹಿತ ಗುರುನಾಥ ಬ್ರಹ್ಮಾನಂದ ಸದ್ಘನ ಸದೋದಿತ ಪ
ನೀನಹದೋ ಬಡವನಾಧಾರಿ ಸಾನುಕೂಲ ನೀನೆವೆ ಪರೋಪರಿ ಅನುದಿನದಲಿ ನೀ ಸಹಕಾರಿ ಮನೋಹರ ಮೂರುತಿ ನೀ ಶ್ರೀ ಹರಿ 1
ದಯಗುಣಕೆ ನಿಮ್ಮ ನಾ ಸರಿಗಾಣೆ ತಾಯಿ ತಂದೆ ಸಕಲ ಬಂಧು ನೀನೆ ತ್ರೈಲೋಕ್ಯವಂದ್ಯ ನೀ ದೇವನೆ ಶ್ರೇಯ ಸುಖದಾಯಕ ಎನ್ನ ನೀನೆ 2
ಶ್ರುತಿ ಸಾರುತಲ್ಯದ ನಿಮ್ಮ ಖ್ಯಾತಿ ಸ್ತುತಿ ಮಾಡಲೇನು ನಾ ಮಂದಮತಿ ಅತಿ ದೀನ ನಾ ನಿಮ್ಮ ಮಹಿಪತಿ ಪ್ರತಿಪಾಲಕಹುದೋ ನೀ ಶ್ರೀಪತಿ 3
***