Showing posts with label ಅಮ್ಮ ಬಾ ನಮ್ಮಮ್ಮನೆ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ mahipati. Show all posts
Showing posts with label ಅಮ್ಮ ಬಾ ನಮ್ಮಮ್ಮನೆ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ mahipati. Show all posts

Wednesday, 1 September 2021

ಅಮ್ಮ ಬಾ ನಮ್ಮಮ್ಮನೆ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಅಮ್ಮಬಾರೆ ನಮ್ಮಮ್ಮನೆ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ P


ಅಮ್ಮಬಾರೆ ನಮ್ಮಮ್ಮನೆ ನೀ ನಮ್ಮ ಬೊಮ್ಮನ ಪಡೆದಮ್ಮ ನೀ ಪರ ಬ್ರಹ್ಮ ನೀನಹುದಮ್ಮ ನೀನಮ್ಮ ಅಮ್ಮಬಾರೆ ನಮ್ಮಮ್ಮನೆ 1 


ಉಮ್ಮ ಸವಿದೊಮ್ಮೆ ಅಮ್ಮೆ ನಾ ನಿನ್ನ ಸುಮ್ಮನಿರುವೆ ನಾ ಒಮ್ಮನದಲೆಮ್ಮೆ ಇಮ್ಮನಡಿಬೇಡೆ ಅಮ್ಮೆ ನಾನ ನಿಮ್ಮ ಒಮ್ಮೆ ಅಮ್ಮಿಯಾಲಮೃತ್ಯೆರಿ ಅಮ್ಮಾ 2 


ಒಮ್ಮೆ ದಯವೆಂಬ ಅಮ್ಮನುಣಿಸಮ್ಮಾ ನಮ್ಮ ಕರುಣದಾ ಅಮ್ಮನುಣಿಸಮ್ಮಾ ಒಮ್ಮೊಮ್ಮುಣಿಸ ನಮ್ಮಮ್ಮ ನೀನಮ್ಮಾ ರಮ್ಮಿಸಿ ಮಹಿಪತಿ ಬಾಲಕಗ ನಿಮ್ಮ 3

***