Showing posts with label ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ gopalakrishna vittala. Show all posts
Showing posts with label ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ gopalakrishna vittala. Show all posts

Sunday, 1 August 2021

ಕುಲವ್ಯಾವುದಯ್ಯ ಕಪಿಕುಲನೆ ನಿನಗೆ ಒಲಿದಿಹನು ಹರಿ ನಿನಗೆ ankita gopalakrishna vittala

ಕುಲವ್ಯಾವುದಯ್ಯ ಕಪಿಕುಲನೆ ನಿನಗೆ

ಒಲಿದಿಹನು ಹರಿ ನಿನಗೆ ಎಂದು ಜನ ನುತಿಸುವರು ಪ.


ಮರ ಹಾರುವಂಥ ಮರ್ಕಟಕುಲದಲವತರಿಸಿ

ಶರಧಿ ಲಂಘಿಸುತ ದ್ವೀಪಾಂತರವಾಸಿ

ದುರುಳರನು ಸಂಹರಿಸಿ ದೊರೆ ಸುತರ ಸೇವಿಸಿ

ಕರದಿ ಎಂಜಲು ಕೊಂಡು ಮರವನೇರಿದನೆ 1

ಪ್ರಥಮ ಕುಲವನೆ ಬಿಟ್ಟು ದ್ವಿತೀಯ ಕುಲದೊಳಗುದಿಸಿ

ಹಿತವೆ ರಕ್ಕಸಿ ಸಂಗ ಪಥದಿ ನಿನಗೆ

ದಿತಿಜನಾಹುತಿ ಅನ್ನ ಗತಿಯಿಲ್ಲದಲೆ ತಿಂದು

ಚತುರ ಕುಲಜನ ನೀ ನುತಿಸಿ ಹಿಗ್ಗಿದನೆ 2

ತುಳುವಂಶಜನೆ ನೀ ಲಲನೆ ಸಂಗವ ತೊರೆದು

ಅಲೆದೆ ಯತಿಯಾಗಿ ಈ ಇಳೆ ಎಲ್ಲವ

ಕುಲನ್ಯೂನ ಗೋಪಾಲಕೃಷ್ಣವಿಠ್ಠಲನ ಪದವ

ಒಲಿಸಲೋಡಿದೆ ಆರು ಬರದಂಥ ಗಿರಿಗೆ 3

*****