ನಂಬದೆ ನಾ ಕೆಟ್ಟೆ ಪ
ಅಂಬುಜಾಕ್ಷನೆ ನಿನ್ನಾ ಅ.ಪ
ಗಳಿಸಿತು ಬಹುಕಾಲಾ ವಿಷಯಕೆ ಆಯ್ತೆಲ್ಲಾ
ಅತಿಶಯ ವಾಯ್ತಾಶೇಗತಿಯನು ನಾಕಾಣೆ
ಮತಿವಂತ ವ್ರತತತಿ ಜಪಜಪ ಹೋಮಕೆ
ಪತಿಗತಿಯೆನಿಸುವ ಗತಿದಾಯಕ ನಂಬದೆ 1
ಬಂದೆನು ಬಹುಸಾರಿ ನೊಂದೆನು ಈ ಪರಿಯೇ
ಕಂದಿಸೆ ಯಮರಾಯಾ ಬಂಧುವು ಯಾರೈಯ
ಇಂದಿರೆ ಮನಶಶಿ ಸುಂದರಮೂರ್ತಿ
ಮಹೇಂದ್ರ ಪರಾತ್ಪರ ಪೂರ್ಣಾನಂದನ 2
ಮಾಡಿಹೆನಪರಾಧ ಪಾಡದೆ ತವ ಮಹಿಮೆ
ಬೇಡುವೆ ನಿಜಭಕ್ತಿ ಓಡಿಸು ಈ ಬುದ್ಧಿ
ಓಡಿಸೆ ಜಗ ಕಾಪಾಡುತಜೀವರ
ಈಡು ದಿಕ್ಕಿಲ್ಲದ ಗೂಢ ಸ್ವತಂತ್ರನೆ 3
e್ಞÁನವ ನಾಬಿಟ್ಟೆ ಹೀನನು ಹೇ ಧೊರೆಯೆ
e್ಞÁನದ ಶರಣೆಂಬೆ ಏನನು ಕೊಡಲಾರೆ
ಆನತ ಬಂಧುವನಂತ ಗುಣಾರ್ಣವ
ಶ್ರೀನಿಧಿ ಸೃಷ್ಟಿವಿನೋದವ ಗೈವನ4
ಬಂದಿಯು ನಾನೈಯಾ ಬಂಧಕ ನೀನೈಯ
ಎಂದಿಗುನಾದಾಸಾ-ತಂಡಿಡು ನೀಲೇಸಾ
ನಂದ ಮುನೀಂದ್ರ ಸುಮಾನಸ ಮಂದಿರ
ನಂದದ ಶ್ರೀವರ “ಶ್ರೀ ಕೃಷ್ಣವಿಠಲ”ನ5
****