ಕಾಖಂಡಕಿ ಶ್ರೀ ಕೃಷ್ಣದಾಸರು
ಬೋಧ ಬಂದನು ಮಾ | ಪ್ರಪಂಚ ಗೆಲುವವ ನಾರೆಲಮಾ ನಮ್ಮ | ಪತಿ - ಭಕ್ತರು ಕಾಣಿಲಮಾ ಪ
ಎನಗಾರು ಇದಿರಿಲ್ಲ ಸ್ವರಾಜ್ಯದೊಳಗಿಂದು | ನೀನಾರೋ ಪರದೇಶಿ ಹೇಳಲಮಾ | ನಾನೆಂಬ ಹಮ್ಮಿನ ಬಿರುದನ ಬಿಡಿಸುವ | ನಾನೆಂಬ ಹಮ್ಮಿನ ಬಿರುದವ ಬಿಡುಸುವ | ಜ್ಞಾನ ಶಸ್ತ್ರಧಾರಿ ಬೋದನುಮಾ 1
ಸರಸಿದ ಭವರುದ್ರ ಇಂದ್ರರ ಬಗೆಯದ | ನೆರೆ ಕಾಮ ಗೆಲುವವ ರಾರೆಲಮಾ | ಭಾಗವತ ಶುಕ ಹನುಮಂತನು ಮೆರೆವ ಭೀಷ್ಟ ದೇವ ನಲ್ಲೇನುಮಾ 2
ವೈಕುಂಠದೊಳು ಸನಕಾದಿಕರೊಳು ಹೊಕ್ಕ | ಆ ಕೋಪ ಕಾನುವ ನಾರೆಲಮಾ | ಸಾಕಿ ಬೆಳೆಸಿದ ಶಾಂತಿಯ ನೆಲೆಯಿಂದ | ಪ್ರಖ್ಯಾತ ಕದರಿಯು ಕೇಳಲಮಾ 3
ಧರಿಯಿತ್ತ ರಾಮಗ ಸ್ಥಳ ವಿಲ್ಲೆಂದರು ಬ್ರಾ | ಹ್ಮರು ಲೋಭಗೆದ್ದ ವನಾರೆಲಮಾ | ಮರುಳ ಕೇಳು ಧನ ತೃಣ ಸಮ ಬಗೆದರು | ಕರ್ಣ ರಲ್ಲೇನು ಮಾ 4
ಬೆಟ್ಟದಿ ಉಡಿಹಾಕಿ ಕೊಳ್ಳಲು ಹೋದನ | ಶಿಷ್ಯ ಮೋಹನ ಗೆಲುವ ನಾರೆಲ ಮಾ | ಮುಟ್ಟಿ ಬೇಡಲುಳಿವ ಮಹನ ತಂದಿಟ್ಟನು | ಸೃಷ್ಟಿ ಮನುಜ ಚಿಲ್ಹಾಳಲ್ಲೇನು ಮಾ 5
ಭ್ರಗು ಮುನಿದಕ್ಷನು ಕಾರ್ತೃ-ವೀರ್ಯಾದಿಯ | ಬಗೆಯದ್ದ ಮದ-ವಳಿ ದಾರೆಲ ಮಾ | ಜಗ ಹೊಡೆತನವಿದ್ದು ಬಾಗಿ ನಡೆದ ನಮ್ಮ | ಸುಗುಣ ಜನಕರಾಯ ನಲ್ಲೇನು ಮಾ 6
ಹುಚ್ಚಾದ ವಶಿಷ್ಟನೊಳು ವಿಶ್ವಾಮಿತ್ರನು | ಮತ್ಸರಿಲ್ಲದವ ನಾರೆಲ ಮಾ | ಎಚ್ಚರಿಸಿದ ಸುಯೋಧನಗ ವಿಜಯತನ | ಸಚ್ಚರಿತ ಧರ್ಮ ನಿಲ್ಲೇನು ಮಾ 7
ಬಗೆ ಬಗೆ ವಿಷಯ ದುಪಾಯಗಳೆನಗುಂಟು | ನಿಗದಿಯ ನಡೆನುಡಿ ಕೇಳೆಲ ಮಾ | ಭಗವದ್ಭಾವ ಸರ್ವ ಭೂತದಿ ನೋಡಲು | ವಿಗುಣವೆ ಸದ್ಗುಣ ಭಾಸುದ ಮಾ 8
ನಿನ್ನ ಬಲವ ಕಂಡೆ ಶರಣವ ಹೊಕ್ಕೆನು | ಬೋಧ ಕೇಳೆಲ ಮಾ | ಸನ್ನುತ ಮಹಿಪತಿ ಸುತ ಪ್ರಭು ನೆಲೆದೋರಿ ಮನ್ನಿಸಿ ಹೊರೆವನು ಬಾರೆಲಮಾ 9
***