Showing posts with label ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು vijaya vittala. Show all posts
Showing posts with label ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು vijaya vittala. Show all posts

Wednesday, 16 October 2019

ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ankita vijaya vittala

ಕೂಗಿತು ತಾಮ್ರದ ಚೂಡ
ಪರ ಇಲ್ಲ್ಲೆಂದು ಪ
ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ
ಸೂಕ್ಕಿದವರ ಎದೆ ಜರ್ಝರಿಸೆ
ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು
ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1

ಒಂದು ಝಾವದಿ ಓಂಕಾರನೆಂದು ಕೂಗೆ
ಇಂದಿರಾಪತಿ ವಿಧಿಜನಕನೆಂದೂ
ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ
ಬಿಂದುಮಾಧವನಲ್ಲದಿಹಪರವಿಲ್ಲವೆಂದು 2

ಎರಡು ಝಾವದಿ ಪುರುಷೋತ್ತಮನೆಂದು
ಗರುಡಾಚಲ ನರಸಿಂಹನೆಂದು
ಮೂರನೆ ಝಾವಕ್ಕೆ ವೀರನಾರಾಯಣ
ಹÀರಿಗಯಾಗದಾಧರನಲ್ಲದಿಲ್ಲವೆಂದು3

ಏಕೋ ನಾರಾಯಣ ದೇವನೆಂದು
ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4

ಯಾಮ ಆರರೊಳು ವ್ಯಾಸಮೂರ್ತಿ ಎಂದು
ರೋಮಕೋಟಿ ಬ್ರಹ್ಮರುದ್ರರೆಂದು
ಸಾಮಗಾಯನ ಕಾವೇರಿ ರಂಗೇಶ
ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5

ಏಳು ಝಾವದಿ ವೇಣಿಮಾಧವನೆಂದು
ಮೇಲಗೋಟೆ ಚಳ್ಳಾಬಳ್ಳನೆಂದು
ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ
ಪರ ಇಲ್ಲೆಂದು6

ಶ್ವೇತ ವರಾಹನೆಂದು
ಮಾವ ಮರ್ದನ ಜನಾದರ್Àನನೆಂದು
ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ
ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
********