..
kruti by Srida Vittala Dasaru Karjagi Dasappa
ವೆಂಕಟೇಶ ನೀನೆ ಧೊರೀ ಧೊರೀ ಪ
ಸಂಕಟವೆಲ್ಲವ ಪರಿಹರಿಸುವಂಥ ಅ.ಪ.
ಎತ್ತಿನ ಪೆಸರುಳ್ಳ ಮತ್ತ ರಕ್ಕಸನ್ನ
ಕುತ್ತಿಗೆ ಕೊಡಲುತ್ತಮ ಪದವಿತ್ತೆ 1
ಅಂಜನೆಯೆಂಬೊ ಮಂಜುಕಿಸಾಲಿಯ [?]
ಅಂಜದೆ ತಪಿಸಲು ಸಂಜೀವನವಿತ್ತೆ2
ಸಾಸಿರ ಮುಖವುಳ್ಳ ಶೇಷನಹಂಕಾರ
ಸ್ವಸನನ ಕೈಯಿಂದ ನಾಶಮಾಡಿಸಿದಂಥ3
ಮಾಧವ ಮಾದಿಗ ಹಾದಿಯ ಮೆಟ್ಟಲು
ಮೋದದಿಂದುದ್ಧರಿಸಿದೆ ಮಾಧವ ಅವನನ್ನು 4
ಶ್ರೀದವಿಠಲ ನಿನ್ನ ಪಾದಾಶ್ರಿತರ
ಮೋದದಿ ಸಲಹೊ ಆದರಿಸೆನ್ನನು 5
***