Showing posts with label ಲಕ್ಷ್ಮೀ ವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷ mohana vittala LAKSHMEE VALLABHA JAYA PAKSHIVAAHANA JAYA MOKSHA. Show all posts
Showing posts with label ಲಕ್ಷ್ಮೀ ವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷ mohana vittala LAKSHMEE VALLABHA JAYA PAKSHIVAAHANA JAYA MOKSHA. Show all posts

Wednesday, 1 December 2021

ಲಕ್ಷ್ಮೀ ವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷ ankita mohana vittala LAKSHMEE VALLABHA JAYA PAKSHIVAAHANA JAYA MOKSHA

ಲಕ್ಷ್ಮೀವಲ್ಲಭ ಜಯ ಪಕ್ಷಿವಾಹನ ಜಯಮೋಕ್ಷದಾಯಕನೆ ಜಯ ಜಯ ಪ

ಮೋಕ್ಷದಾಯಕನೆ ಮಧುಸೂದನ ಪ-ದ್ಮಾಕ್ಷಗಾರುತಿಯ ಬೆಳಗಿರೇ ಅ.ಪ.

ಜಲದೊಳು ಸಂಚರಿಸಿ ಬಲು ಗಿರಿಯ ಧರಿಸಿದಇಳೆಯ ದಾಡೆಯಿಂದ ನೆಗಹಿದಾ ||ಇಳೆಯ ದಾಡೆಯಿಂದ ನೆಗಹಿದ ನರಹರಿ ಚೆಲುವಗಾರುತಿಯ ಬೆಳಗಿರೆ ಶೋಭಾನೆ 1

ಚಿಕ್ಕ ಬ್ರಾಹ್ಮಣನಾಗಿ ಬಲಿಯ ದಾನವ ಬೇಡಿಆಕ್ರಮಿಸಿದನೆ ತ್ರಿಲೋಕ ||ಆಕ್ರಮಿಸಿ ತ್ರಿಲೋಕನಾಳ್ದ ಶ್ರೀರಾಮಶ್ರೀ ಕೃಷ್ಣಗಾರುತಿಯ ಬೆಳಗಿರೇ 2

ನಗ್ನನಾಗಿ ವ್ರತವಾ ವಿಘ್ನವ ಚರಿಸಿದಅಜ್ಞಾನಿ ಕಲಿಯ ಸದೆದ ||ಅಜ್ಞಾನಿ ಕಲಿಯ ಸದೆದ ಮೋಹನ್ನ ವಿಠ್ಠಲ ಸ-ರ್ವಜ್ಞಗಾರುತಿಯ ಬೆಳಗಿರೇ3

***