.
kruti by baddannayyacharyaru ಬಡಣ್ಣಯ್ಯಾಚಾರ್ಯರು
ankita vittala vyasa
ವೀರ ಹನುಮ ಬಹು ಪರಾಕ್ರಮ ಸುಜ್ಞಾನವಿತ್ತು
ಪಾಲಿಸೆನ್ನೆ ಜೀವರೋತ್ತಮ ಪ
ರಾಮದೂತನೆನಿಸಿಕೊಂಡ್ಯೋ ನೀ ರಾಕ್ಷಸರ
ವನವನೆಲ್ಲ ಕೆಡಿಸಿ ಬಂದ್ಯೋ ನೀ
ಭೂಮಿಪುತ್ರಿಗೆ ಮುದ್ರೆಯಿತ್ತು ಜಗತ್ತಿಗೆಲ್ಲ
ಹರುಷವಿತ್ತು ಪ್ರಖ್ಯಾತನಾದ್ಯೋ ನೀ 1
ಗೋಪಿಸುತನ ಪಾದಪೂಜಿಸಿ ಗದೆಯ ಧರಿಸಿ
ಕೌರವಕುಲವ ಸವರಿದ್ಯೋ ನೀ
ದ್ರೌಪದಿಯ ಮೊರೆಯ ಕೇಳಿ ಕಷ್ಟವೆಲ್ಲ
ಬಿಡಿಸಿ ಭೀಮರೂಪನೆನಿಸಿದ್ಯೋ ನೀ 2
ಮದ್ಯಗೇಹದಲ್ಲಿ ಜನಿಸಿ ಬಾಲ್ಯತನದ
ಮಷ್ಕರಿಯ ರೂಪಗೊಂಡ್ಯೋ ನೀ
ವೇದ ವಿಠಲವ್ಯಾಸದಾಸನಾಗಿ ಭಾಷ್ಯವನೋದಿ
ಸನ್ಮುದದಿಂದ ಸಂತೆಬಿದನೂರಿನಲ್ಲಿ ನಿಂತ್ಯೋ ನೀ 3
***