ಸಾವೇರಿ ರಾಗ ತ್ರಿವಿಡೆತಾಳ
ಏನು ಪೇಳುವೆ ಇಂತು ಆ ಮಾನವರೊಡನೆ
ಮೌನದಿ ಮನದೊಳು ನಗುತಿಹನಲ್ಲದೆ ||ಪ||
ವೇದಾಂತ ಶಾಸ್ತ್ರವೆಂತಿರುತಿಹುದೆಂಬ
ಹಾದಿಯ ತಿಳಿಯದೆ ಅವರು ಪರಜೀವರ
ಭೇದದ ಬಗೆಯಿದೆಂಬ ಆವುದರಿಯದ ಮೂಢ
ವಾದದಲಿ ಮುಕ್ತಿಯ ಮೆರೆದಾಡುವವರೊಳು ||೧||
ತನುವಿದೆ ತಾನೆಂದು ಮನೆ ಧನ ತನದೆಂದು
ವನಿತಾದಿಯೊಳಗೆ ಆಸಕ್ತನಾಗುತಲೆ
ತನಗೆಂದು ಸ್ಥಿರವೆಂದು ಭಾವಿಸಿ ಮೋಹದಿ
ಚಿನುಮಯಾತ್ಮಕನನೊಮ್ಮೆ ನೆನೆಯದೆ ಇಹರೊಳು ||೨||
ಹರಿ ಭಜನೆಯ ತಾವು ಮಾಡರು, ಮಾಳ್ಪರೊಳು
ಹಿರಿಯತನದಿ ಬುದ್ಧಿ ತಾವು ಹೇಳುವರು
ಮರುಳೆ ನೀನೀಗಲೆ ಅರಿತೆ ನೀ ರೀತಿಯನು
ಬರಿವಲ್ಲ ನೋಳ್ಪುದು ಸರಿಯಲ್ಲ ಎನಿಪರೊಳು ||೩||
ನಿನ್ನದಿದೆಲ್ಲವು ನೀನೆ ಪಾಲಿಸತಕ್ಕದು
ಇನ್ನು ನೀನೀ ಪರಿ ಮರುಳಹರೆ ಮನುಜ
ಬಣ್ಣ ನೀನದರಿಂದ ತಿಳಿಯದು ಎನಗೆಂದು
ಭಿನ್ನ ಭ್ರಾಂತಿಯೊಳಿಂತು ಮರುಳಾದವರೊಳು ||೪||
ಆಗದಾಗದು ಇಂಥ ಜನರೊಡನಾಡಲು
ಹೇಗಾದರು ಬಿಡರು ಇವರು ಹೀನ ಬುದ್ಧಿಗಳ
ಯೋಗ ಮಾಯಾಧೀಶನಾದ ನಿತ್ಯಾತ್ಮ ನೀ
ಬೇಗದಿ ಎನ್ನನು ತಡಿಗಾಣಿಸಯ್ಯ ||೫||
*******
ಏನು ಪೇಳುವೆ ಇಂತು ಆ ಮಾನವರೊಡನೆ
ಮೌನದಿ ಮನದೊಳು ನಗುತಿಹನಲ್ಲದೆ ||ಪ||
ವೇದಾಂತ ಶಾಸ್ತ್ರವೆಂತಿರುತಿಹುದೆಂಬ
ಹಾದಿಯ ತಿಳಿಯದೆ ಅವರು ಪರಜೀವರ
ಭೇದದ ಬಗೆಯಿದೆಂಬ ಆವುದರಿಯದ ಮೂಢ
ವಾದದಲಿ ಮುಕ್ತಿಯ ಮೆರೆದಾಡುವವರೊಳು ||೧||
ತನುವಿದೆ ತಾನೆಂದು ಮನೆ ಧನ ತನದೆಂದು
ವನಿತಾದಿಯೊಳಗೆ ಆಸಕ್ತನಾಗುತಲೆ
ತನಗೆಂದು ಸ್ಥಿರವೆಂದು ಭಾವಿಸಿ ಮೋಹದಿ
ಚಿನುಮಯಾತ್ಮಕನನೊಮ್ಮೆ ನೆನೆಯದೆ ಇಹರೊಳು ||೨||
ಹರಿ ಭಜನೆಯ ತಾವು ಮಾಡರು, ಮಾಳ್ಪರೊಳು
ಹಿರಿಯತನದಿ ಬುದ್ಧಿ ತಾವು ಹೇಳುವರು
ಮರುಳೆ ನೀನೀಗಲೆ ಅರಿತೆ ನೀ ರೀತಿಯನು
ಬರಿವಲ್ಲ ನೋಳ್ಪುದು ಸರಿಯಲ್ಲ ಎನಿಪರೊಳು ||೩||
ನಿನ್ನದಿದೆಲ್ಲವು ನೀನೆ ಪಾಲಿಸತಕ್ಕದು
ಇನ್ನು ನೀನೀ ಪರಿ ಮರುಳಹರೆ ಮನುಜ
ಬಣ್ಣ ನೀನದರಿಂದ ತಿಳಿಯದು ಎನಗೆಂದು
ಭಿನ್ನ ಭ್ರಾಂತಿಯೊಳಿಂತು ಮರುಳಾದವರೊಳು ||೪||
ಆಗದಾಗದು ಇಂಥ ಜನರೊಡನಾಡಲು
ಹೇಗಾದರು ಬಿಡರು ಇವರು ಹೀನ ಬುದ್ಧಿಗಳ
ಯೋಗ ಮಾಯಾಧೀಶನಾದ ನಿತ್ಯಾತ್ಮ ನೀ
ಬೇಗದಿ ಎನ್ನನು ತಡಿಗಾಣಿಸಯ್ಯ ||೫||
*******