Showing posts with label ಮರೆತು ಬಾಳಲಿಬಹುದೆ ಗುರು ರಾಘವೇಂದ್ರರನು krishnavittala. Show all posts
Showing posts with label ಮರೆತು ಬಾಳಲಿಬಹುದೆ ಗುರು ರಾಘವೇಂದ್ರರನು krishnavittala. Show all posts

Monday, 6 September 2021

ಮರೆತು ಬಾಳಲಿಬಹುದೆ ಗುರು ರಾಘವೇಂದ್ರರನು ankita krishnavittala

 ರಾಗ: ಬಿಲಹರಿ ತಾಳ: ತ್ರಿಪುಟ


ಮರೆತು ಬಾಳಲಿಬಹುದೆ ಗುರು ರಾಘವೇಂದ್ರರನು


ಅರಿತು ನೋಡೆಲೋ ಮನುಜ ಬರಿದೆ ಭ್ರಾಂತಿಯದೇಕೋ ಅ.ಪ


ಬೆಳಗೂಬೈಗೂ ಎಂದೂ ಅಳಿದು ಹೋಗೋದು ಕಾಯ

ಬಾಳನಾವೆಯು ಮುರಿದು ಹರಿದು ಹೋಗೋದು ಇರದೆ

ಕಾಳಮೃತ್ಯುವು ಬಿಡದೆ ಸೆಳೆದುಕೊಂಡೊಯ್ಯುವುದು

ಬಾಳಹಸನನುಗೈವ ಗುರುರಾಜರನು ಭಜಿಸೋ 1

ನಂಬದಿರು ಈ ಕಾಯ ಅಂಬುಮೇಲಿನ ಗುಳ್ಳೆ

ತುಂಬಿಬರಲುಕಾಲ ಇಂಬುತೋರುವರಿಲ್ಲ

ಹುಂಬತನವನು ಬಿಟ್ಟು ಅಂಬುಜಾಕ್ಷನಪಾದ

ಇಂಬುತೋರುವ ಗುರುವ ನಂಬಿ ಭಜಿಸೆಲೋ ಮನುಜ 2

ಹಳೆಯ ಅರಿವೆಯು ಇಡದೆ ಕಳೆದು ಬಿಸಡುವ ತೆರದಿ

ಅಳಿದುಹೋಗೋದು ಕಾಯ ತಿಳಿದು ನೋಡೆಲೋ ಮರುಳೆ

ಇಳೆಯೊಳು ಶ್ರೀಕೃಷ್ಣವಿಠಲನ ಚರಣವನು

ತಿಳಿದು ಭಜಿಸುತಲಿನ್ನು ಗುರುಕರುಣ ಪಡೆಯೋ 3

***