Showing posts with label ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ mahipati. Show all posts
Showing posts with label ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ mahipati. Show all posts

Wednesday, 1 September 2021

ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಪ  


ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 

ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 

ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3

*****