ಕಾಖಂಡಕಿ ಶ್ರೀ ಕೃಷ್ಣದಾಸರು
ನಿನಗಿದು ಹಿತವೇ | ಇದು ಹಿತವೇ ಪ
ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1
ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2
ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3
ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4
ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
****