ಹರಿನಾಮ ಘೋಷ ಪ
ಎಲ್ಲಿ ಶ್ರೀಹರಿನಾಮ ಘೋಷ ಅಲ್ಲಿ ಸಕಲ ಸುಖ ಸಂತೋಷ ಸುಲಭಲಿಹುದು ಭವಭಯದ ನಾಶ ಹರಿನಾಮ ಘೋಷ 1
ಹರಸುವದಾನಂದದ ಹರುಷ ಹರಿಸುವದು ಕಲಿಮಲ ಕಲುಷ ತ್ವರಿತೋಡಿಸುವದು ಮಹಾಪಾತಕ ದೋಷ ಹರಿನಾಮ ಘೋಷ 2
ಸ್ವಹಿತ ಸಾಧನದ ಸುಉಪದೇಶ ಬಾಹ್ಯಾಂತರದೋರುವ ಪ್ರಕಾಶ ಮಹಿಪತಿಗಿದೆ ನಿತ್ಯವನುಭವದುಲ್ಹಾಸ ಹರಿನಾಮ ಘೋಷ 3
***