Showing posts with label ವೆಂಕಟೇಶ ಭವ ಸಂಕಟ ಪರಿಹರಿಸೋ ನಿನ್ನವರವನೆನಿಸೋ tandeshreepati vittala. Show all posts
Showing posts with label ವೆಂಕಟೇಶ ಭವ ಸಂಕಟ ಪರಿಹರಿಸೋ ನಿನ್ನವರವನೆನಿಸೋ tandeshreepati vittala. Show all posts

Wednesday 1 September 2021

ವೆಂಕಟೇಶ ಭವ ಸಂಕಟ ಪರಿಹರಿಸೋ ನಿನ್ನವರವನೆನಿಸೋ ankita tandeshreepati vittala

 ರಾಗ : ಕಾಂಬೋಧಿ  ತಾಳ : ಆದಿ

ವೆಂಕಟೇಶ ಭವ

ಸಂಕಟ ಪರಿಹರಿಸೋ ।

ನಿನ್ನವರವನೆನಿಸೋ ।

ಪಂಕಜಾಕ್ಷ ಅಕಳಂಕ

ಮಹಿಮ ಹರಿಯೇ ।

ಆಶ್ರಿತರಿಗೆ ಧೊರಿಯೇ ।। ಪಲ್ಲವಿ ।।

ನಾನಾ ಜನುಮಗಳಲಿ

ತೊಳಲಿ ಬಂದೆ ।

ನೀನೆ ಗತಿಯಂದೇ ।

ಜ್ಞಾನಾಜ್ಞಾನ ಕೃತಾ-

ಖಿಳ ದುಷ್ಕರ್ಮ ।

ಅದರಂತೆ ಸುಕರ್ಮಾ ।।

ನಾನಾ ಪರಿಯಲ್ಲಿರು

ತಿರಲನುಭವಿಸೀ ।

ದುರ್ವಿಷಯವ ಬಯಸೀ ।

ಹೀನ ವೃತ್ತಿಯಲಿ ಚರಿಸಿ

ದಿನವು ಕಳದೆ ।

ಈ ಪರಿಯಿಂದುಳದೇ ।। ಚರಣ ।।

ಧಾರುಣಿ ಧನ ವನಿತಾದಿ

ವಿಷಯಗಳಲ್ಲಿ ।

ಕಾಮುಕ ತನದಲ್ಲೀ ।

ಚಾಲುವರಿದೆ ನೀತಿ

ಮಾರ್ಗ ಕಾಣದೆ ನಾನು ।

ಉಪಾಯವಿನ್ನೇನೂ ।।

ದಾರಿಗೆ ಪೇಳೆಲೊ

ಎನ್ನ ವರ್ತಮಾನ ।

ನೀನಿನಿದಾನಾ ।

ತೋರಿಸಿ ಎನ್ನನು

ಬಿಡದೆ ಪಾಲಿಸಪ್ಪಾ ।ಎ

ಣಿಸಾದಿರು ತಪ್ಪಾ ।। ಚರಣ ।।

ಪಾಪಾತ್ಮಕ ನಾನಾ-

ದರೇನೋ ಪೇಳೋ ।

ಪಾವನ ನೀ ಕೇಳೋ ।

ಶ್ರೀ ಪದ್ಮಜ ಭವ

ಪ್ರಮುಖ ನಿರ್ಜರೇಶಾ ।

ನಾ ನಿನ್ನಗೆ ದಾಸಾ ।।

ನೀ ಪಾಲಿಸದಿರೆ ಗತಿ-

ಯಾರೆಲೋ ಮುಂದೆ ।

ಕಾರುಣ್ಯದಿ ತಂದೇ ।

ಶ್ರೀಪತಿ ವಿಠ್ಠಲಕರವ

ಪಿಡಿಯೋ ವೇಗಾ ।

ನೀನುದ್ಧರಿಸೀಗಾ ।। ಚರಣ ।।

***