Showing posts with label ಹನುಮಂತ ನೀ ಬಲು ಜಯವಂತನಯ್ಯ purandara vittala HANUMANTA NEE BALU JAYAVANTANAYYA. Show all posts
Showing posts with label ಹನುಮಂತ ನೀ ಬಲು ಜಯವಂತನಯ್ಯ purandara vittala HANUMANTA NEE BALU JAYAVANTANAYYA. Show all posts

Tuesday, 5 October 2021

ಹನುಮಂತ ನೀ ಬಲು ಜಯವಂತನಯ್ಯ purandara vittala HANUMANTA NEE BALU JAYAVANTANAYYA



check similar under hayavadana ankita

ಹನುಮಂತ ನೀ ಬಲು ಜಯವಂತನಯ್ಯ |
ಅನುಮಾನವಿಲ್ಲ ಆನಂದತೀರ್ಥರಾಯ 

ರಾಮಸೇವಕನಾಗಿ ರಾವಣನ ಪುರವ 
ನಿರ್ಧೂಮವ ಮಾಡಿದೆ ನಿಮಿಷದೊಳಗೆ ||
ಭೂಮಿಯ ಪುತ್ರಿಗೆ ಮುದ್ರೆಯುಂಗುರವಿತ್ತು |
ಕ್ಷೇಮ ಕುಶಲವ ಶ್ರೀರಾಮ ಪಾದಕರ್ಪಿಸಿದೆ ||

ಕೃಷ್ಣಾವತಾರದಿ ಭೀಮನಾಗಿ ಬಂದುದುಷ್ಟ 
ದೈತ್ಯರನೆಲ್ಲ ಸಂಹರಿಸಿದೆ
|ದೃಷ್ಟಿಹೀನ ಧೃತರಾಷ್ಟ್ರನ ವಂಶವನುಕಷ್ಟವಿಲ್ಲದೆ 
ಕೊಂದು ಶ್ರೀಕೃಷ್ಣಪಾದಕರ್ಪಿಸಿದೆ ||

ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಲು
ಮತಿ ಹೀನರಾದ ಸಜ್ಜನರಿಗೆಲ್ಲ
|ಅತಿ ಬೇಗದಲಿ ಮಧ್ವಯತಿರೂಪಧರಿಸಿ 
ಸದ್ಗತಿಪಾಲಿಸಿದೆಪುರಂದರವಿಠಲನ ದಾಸ||
***

Hanumanta ni balu jayavantanayya |
Anumanavilla anandatirtharaya || pa||

Paramasevakanagi ravanana purava nirdhumava madide nimishadolage ||
Bumiya putrige mudreyunguravittu |kshema kusalava srirama padakarpiside ||1||

Krushnavataradi bimanagi bandudushta daityaranella samhariside |drushtihina dhrutarashtrana vamsavanukashtavillade kondu srikrushnapadakarpiside ||2||

Patita sankara hutti matavella kedisalumati hinarada sajjanarigella |
|ati begadali madhvayatirupadharisi sadgatipaliside purandaravithalana dasa ||3||
***

pallavi

hanumanta nI balu jayavantanayya anumAnavilla Ananda tIrttarAya

caraNam 1

rAma sEvakanAgi rAvaNana purva nirdhUvama mADide nimiSadoLage
bhUmiya putrige mudreyunguravittu kSEma kusha lava shrI rAma pAda karpiside

caraNam 2

krSNAvatAradi bhImanAgi bandu duSTa daityaranella samhariside
drSTi hIna dhrtarASTrana vamshavanu kaSTavillade kondu shrI krSNa pAda karpiside

caraNam 3

patita shankara huTTi matavella keDisalu mati hInarAda sajjanarigella
ati bEgadahali madhva yati rUpa dharisi sadgati pAlisidE purandara viTTalana dAsa
***


ಹನುಮಂತ ನೀ ಬಲವಂತ -

ಜಯವಂತನಯ್ಯಾ ।

ಅನುಮಾನವಿಲ್ಲ ಆನಂದ-

ತೀರ್ಥರಾಯಾ ।। ಪಲ್ಲವಿ ।। 

ರಾಮ ಸೇವಕನಾಗಿ 

ರಾವಣನ ಪುರವ ।

ನಿರ್ಧೂಮವನು 

ಮಾಡಿದಿ ಮುಷದೊಳಗೆ ।

ಭೂಮಿ ಪುತ್ರಿಗೆ 

ಮುದ್ರಿ ಉಂಗುರವಿತ್ತು ।

ಪ್ರೇಮ ಕುಲವನು ಶ್ರೀ ರಾಮ 

ಪದಗರ್ಪಿಸಿದೆ ।। ಚರಣ ।। 

ಕೃಷ್ಣಾವತಾರದಲಿ 

ಭೀಮನಾಗೆವತರಿಸಿ ।

ದುಷ್ಟ ದೈತ್ಯರನೆಲ್ಲ 

ಸಂಹರಿಸೀದೀ ।

ದುಷ್ಟ ಹೀನರ 

ಧೃತರಾಷ್ಟ್ರ ವಂಶವನ್ನು ।

ಕಷ್ಟವಿಲ್ಲದೆ ಕೊಂದು ಶ್ರೀ -

ಕೃಷ್ಣ ಪದಗರ್ಪಿಸಿದೆ ।। ಚರಣ ।। 

ಪತಿತ ಸಂಕರ ಹುಟ್ಟಿ-

ಮತವೆಲ್ಲ ಕೆಡಿಸಾಲು ।

 ಮತಿಹೀನರಾದ ಸಜ್ಜನರಿಗೆಲ್ಲಾ ।

 ಅತಿ ವೇಗದಲಿ ಮಧ್ವ-

ಯತಿ ರೂಪವ ಧರಿಸಿ ।

 ಸದ್ಗತಿಯ ಪಾಲಿಸಿದ 

ಪುರಂದರವಿಠ್ಠಲ ದಾಸಾ ।। ಚರಣ ।।

****