..
ಪ್ರಭುರಾಯ ಪ್ರಭುರಾಯ
ಅಭಿನಂದಿಸುವೆನು | ಶುಭಮತಿ ಪಾಲಿಸು ಪ
ಶ್ರೀಶಗುರಪ್ರಾಣೇಶದಾಸರಿಂದ
ಪೋಷಿತನಾದ ಭೂಸುರ ಪ್ರೀಯ 1
ಭಾವÀಭಕ್ತಿಲಿ ಸೇವಿಸಿ ಸಂತಸ
ಶ್ರೀವರದೇಂದ್ರರ | ನೀಮೊಲಿದಘÀನ 2
ಕೋಶಿಗಿ ಗುರು ಉಪದೇಶದಿಂದ ವರ
ದೇಶವಿಠಲನ ದಾಸನೆಂದೆನಿಸಿದ 3
ಕಪ್ಪುಗೊರಳನುತ | ಕುಪ್ಪಿಯ ಭೀಮನ
ತಪ್ಪು ಕ್ಷಮಿಸೆಂದು | ತಪ್ಪದೆ ಸ್ತವಿಸಿದ 4
ಅನ್ಯನಲ್ಲನಾ ನಿನ್ನಾಪ್ತನು ನಿಜ
ವೆನ್ನುತ ಬಿನ್ನಪ ಮನ್ನಿಸಿ ನೋಡೋ 5
ರಾಮಸ್ತವನವನು ನೇಮದಿಗೈಯುವ
ಕೋಮಲಾಂಗದ ಹೇಮಮ ಬಂಧು 6
ನಂದಜ ಶಾಮಸುಂದರವಿಠಲನ
ಪೊಂದಿದವರ ಪದ ಮಂದಜ ಮಧುಪ7
***