Showing posts with label ಅಂಗಜಪಿತನರ್ಧಾಂಗಿ ನೀ ಏಳು ಶೃಂಗಾರದಂಥ ಶುಭಾಂಗಿ ನೀ ಏಳು bheemesha krishna. Show all posts
Showing posts with label ಅಂಗಜಪಿತನರ್ಧಾಂಗಿ ನೀ ಏಳು ಶೃಂಗಾರದಂಥ ಶುಭಾಂಗಿ ನೀ ಏಳು bheemesha krishna. Show all posts

Tuesday, 1 June 2021

ಅಂಗಜಪಿತನರ್ಧಾಂಗಿ ನೀ ಏಳು ಶೃಂಗಾರದಂಥ ಶುಭಾಂಗಿ ನೀ ಏಳು ankita bheemesha krishna

ಅಂಗಜಪಿತನರ್ಧಾಂಗಿ ನೀ ಏಳು

ಶೃಂಗಾರದಂಥ ಶುಭಾಂಗಿ ನೀ ಏಳು

ಕಂಗಳ ನೋಟದ ಕಡು ಚೆಲ್ವೆ ನಿನ್ನ ಪಾ-

ದಂಗಳಿಗೆರಗುವೆ ಎನುತ ಮಾಲಕ್ಷುಮಿ(ಯ?)

ಅಂಗನೆಯರ್ಹಸೆಗೆ ಕರೆದರು 1


ಅಜನಜನಕನರಗಿಳಿಯೆ ನೀ ಏಳು

ಪದಮನಾಭನ ಪಟ್ಟದರಸಿ ನೀ ಏಳು

ತ್ರಿಜಗಭೂಷಿತನೆದೆ ಮ್ಯಾಲೆ ಹೊಂದಿರುವಂಥ

ಮದಗಜಗಮನೆ ಮಾಲಕ್ಷ್ಮಿ ಬಾರೆನುತಲಿ

ಮುದದಿಂದಲಿ ಹಸೆಗೆ ಕರೆದರು 2


ಸೋಮವದನೆ ಸುಗುಣೆ ಜಾಣೆ ನೀ ಏಳು

ಕೋಮಲ ಕೋಕಿಲವಾಣಿ ನೀ ಏಳು

ಹೇಮಮಾಣಿಕ್ಯ ನಾಗವೇಣಿಯೆ ನಮ್ಮ

ಭೀಮೇಶಕೃಷ್ಣನ ನಿಜರಾಣಿ ಮಾಲಕ್ಷುಮಿ

ಪಟ್ಟದರಾಣಿ ಬಾ ಹಸೆಗೆ ಕರೆದರು 3

****