Showing posts with label ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ vijaya vittala. Show all posts
Showing posts with label ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ vijaya vittala. Show all posts

Wednesday, 16 October 2019

ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ankita vijaya vittala

ವಿಜಯದಾಸ
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಪ

ಉಪೇಂದ್ರ ಭಗವಂತ ಪಟುರೂಪ ಧರಿಸಿ
ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ
ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ 1

ಕಮಲವನು ತೊಳಿಯಲಾವೇಗದಿಂದ
ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ
ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ2

ಧ್ರುವಲೋಕಕಿಳಿದು ಅಮರಾಲಯವ ಸಾರಿದೆ
ತವಕದಿಂದಲಿ ಧುಮುಕಿ ಚತುರಭಾಗವಾದೆ
ಭವ ಪರಿಹರಿಸಿ ಭಾಗೀರಥಿ ಎನಿಸಿದೆ 3

ಭವದೊರೆ ಭಗೀರಥಗೆ ಒಲಿದು ಬರುತ
ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ4

ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಉದ್ಧಾರ ನಿಃಸಂದೇಹಾ
ಮಜ್ಜನ ಪೊಳೆವ ವೈಕುಂಠಪುರ ಅವನ ಹೃದಯದಲಿ5

ಕುಲಪ್ರವಹವಾಗಿದ್ದ ಜೀವರ ಪುಣ್ಯವನು
ಹೇಳಿ ಕೇಳುವವನಾರು ಮೂಲೋಕದಿ
ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ
ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು 6

ದೇಶದೇಶದಲಿಂದ ಬಂದ ಸುಜನರ ಪಾಪ
ಮಾಧವ ಚಲುವ ಶ್ರೀನಿವಾಸ ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ 7
*********