Showing posts with label ಪಾಂತ್ವಸ್ಮಾನ್ ಪುರುಹೂತ by trivikrama panditacharya ಹರಿ ವಾಯು ಸ್ತುತಿಃ PRANTASMAN PURUHOOTA SRI HARI VAYU STUTIH. Show all posts
Showing posts with label ಪಾಂತ್ವಸ್ಮಾನ್ ಪುರುಹೂತ by trivikrama panditacharya ಹರಿ ವಾಯು ಸ್ತುತಿಃ PRANTASMAN PURUHOOTA SRI HARI VAYU STUTIH. Show all posts

Wednesday, 28 October 2020

ಪಾಂತ್ವಸ್ಮಾನ್ ಪುರುಹೂತ by trivikrama panditacharya ಹರಿ ವಾಯು ಸ್ತುತಿಃ SRI HARI VAYU STUTIH



ಶ್ರೀಹರಿ-ವಾಯುಸ್ತುತಿಃ


start with madhwacharya written nrusimha stutih and repeat in the end.

॥ ಅಥ ನರಸಿಂಹನಖಸ್ತುತಿ: ॥

ಪಾಂತ್ವಸ್ಮಾನ್ ಪುರುಹೂತವೈರಿಬಲವನ್ಮಾತಂಗಮಾದ್ಯದ್ಘಟಾ-
ಕುಂಭೋಚ್ಚಾದ್ರಿವಿಪಾಟನಾಧಿಕಪಟುಪ್ರತ್ಯೇಕವಜ್ರಾಯಿತಾ: ।
ಶ್ರೀಮತ್ಕಂಠೀರವಾಸ್ಯ ಪ್ರತತಸುನಖರಾ ದಾರಿತಾರಾತಿದೂರ-
ಪ್ರಧ್ವಸ್ತಧ್ವಾಂತಶಾಂತಪ್ರವಿತತಮನಸಾ ಭಾವಿತಾ ನಾಕಿವೃಂದೈ: ॥೧॥


ಲಕ್ಷ್ಮೀಕಾಂತ ಸಮಂತತೋ ವಿಕಲಯನ್ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮವಸ್ತು ದೂರತರತೋಽಪಾಸ್ತಂ ರಸೋ ಯೋಽಷ್ಟಮ: ।
ಯದ್ರೋಷೋತ್ಕರದಕ್ಷನೇತ್ರಕುಟಿಲಪ್ರಾಂತೋತ್ಥಿತಾಗ್ನಿಸ್ಫುರತ್-
ಖದ್ಯೋತೋಪಮವಿಸ್ಫುಲಿಂಗಭಸಿತಾ ಬ್ರಹ್ಮೇಶಶಕ್ರೋತ್ಕರಾ: ॥೨॥


॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯ ವಿರಚಿತಾ ಶ್ರೀನರಸಿಂಹನಖಸ್ತುತಿ:॥


॥ ಅಥ ಶ್ರೀಹರಿವಾಯುಸ್ತುತಿ: ॥


ಶ್ರೀಮದ್ವಿಷ್ಣ್ವಂಘ್ರಿನಿಷ್ಠಾತಿಗುಣಗುರುತಮಶ್ರೀಮದಾನಂದತೀರ್ಥ-
ತ್ರೈಲೋಕ್ಯಾಚಾರ್ಯಪಾದೋಜ್ಜ್ವಲಜಲಜಲಸತ್ಪಾಂಸವೋಽಸ್ಮಾನ್ ಪುನಂತು ।
ವಾಚಾಂ ಯತ್ರ ಪ್ರಣೇತ್ರೀ ತ್ರಿಭುವನಮಹಿತಾ ಶಾರದಾ ಶಾರದೇಂದು-
ಜ್ಯೋತ್ಸ್ನಾಭದ್ರಸ್ಮಿತಶ್ರೀಧಲಿತಕಕುಭಾ ಪ್ರೇಮಭಾರಂ ಬಭಾರ ॥೧॥


ಉತ್ಕಂಠಾಕುಂಠಕೋಲಾಹಲಜವವಿದಿತಾಜಸ್ರಸೇವಾನುವೃದ್ಧ-
ಪ್ರಾಜ್ಞಾತ್ಮಜ್ಞಾನಧೂತಾಂಧತಮಸಸುಮನೋಮೌಲಿರತ್ನಾವಲೀನಾಮ್ ।
ಭಕ್ತ್ಯುದ್ರೇಕಾವಗಾಢಪ್ರಘಟನಸಘಟಾತ್ಕಾರಸಂಘೃಷ್ಯಮಾಣ-
ಪ್ರಾಂತಪ್ರಾಗ್ರ್ಯಾಂಘ್ರಿಪೀಠೋತ್ಥಿತಕನಕರಜ:ಪಿಂಜರಾರಂಜಿತಾಶಾ: ॥೨॥


ಜನ್ಮಾಧಿವ್ಯಾಧ್ಯುಪಾಧಿಪ್ರತಿಹತಿವಿರಹಪ್ರಾಪಕಾಣಾಂ ಗುಣಾನಾಂ
ಅಗ್ರ್ಯಾಣಾಮರ್ಪಕಾಣಾಂ ಚಿರಮುದಿತಚಿದಾನಂದಸಂದೋಹದಾನಾಮ್ ।
ಏತೇಷಾಮೇಷ ದೋಷಪ್ರಮುಷಿತಮನಸಾಂ ದ್ವೇಷಿಣಾಂ ದೂಷಕಾಣಾಂ
ದೈತ್ಯಾನಾಮಾರ್ತಿಮಂಧೇ ತಮಸಿ ವಿದಧತಾಂ ಸಂಸ್ತವೇ ನಾಸ್ಮಿ ಶಕ್ತ: ॥೩॥


ಅಸ್ಯಾವಿಷ್ಕರ್ತುಕಾಮಂ ಕಲಿಮಲಕಲುಷೇಽಸ್ಮಿನ್ ಜನೇ ಜ್ಞಾನಮಾರ್ಗಂ
ವಂದ್ಯಂ ಚಂದ್ರೇಂದ್ರರುದ್ರದ್ಯುಮಣಿಫಣಿವಯೋನಾಯಕಾದ್ಯೈರಿಹಾದ್ಯ ।
ಮಧ್ವಾಖ್ಯಂ ಮಂತ್ರಸಿದ್ಧಂ ಕಿಮುತ ಕೃತವತೋ ಮಾರುತಸ್ಯಾವತಾರಂ
ಪಾತಾರಂ ಪಾರಮೇಷ್ಠ್ಯಂ ಪದಮಪವಿಪದ: ಪ್ರಾಪ್ತುರಾಪನ್ನಪುಂಸಾಮ್ ॥೪॥


ಉದ್ಯದ್ವಿದ್ಯುತ್ಪ್ರಚಂಡಾಂ ನಿಜರುಚಿನಿಕರವ್ಯಾಪ್ತಲೋಕಾವಕಾಶೋ
ಬಿಭ್ರದ್ಭೀಮೋ ಭುಜೇ ಯೋಽಭ್ಯುದಿತದಿನಕರಾಭಾಂಗದಾಢ್ಯಪ್ರಕಾಂಡೇ ।
ವೀರ್ಯೋದ್ಧಾರ್ಯಾಂ ಗದಾಗ್ರ್ಯಾಮಯಮಿಹ ಸುಮತಿಂ ವಾಯುದೇವೋ ವಿದಧ್ಯಾತ್
ಅಧ್ಯಾತ್ಮಜ್ಞಾನನೇತಾ ಯತಿವರಮಹಿತೋ ಭೂಮಿಭೂಷಾಮಣಿರ್ಮೇ ॥೫॥


ಸಂಸಾರೋತ್ತಾಪನಿತ್ಯೋಪಶಮದಸದಯಸ್ನೇಹಹಾಸಾಂಬುಪೂರ-
ಪ್ರೋದ್ಯದ್ವಿದ್ಯಾನವದ್ಯದ್ಯುತಿಮಣಿಕಿರಣಶ್ರೇಣಿಸಂಪೂರಿತಾಶ: ।
ಶ್ರೀವತ್ಸಾಂಕಾಧಿವಾಸೋಚಿತತರಸರಲ: ಶ್ರೀಮದಾನಂದತೀರ್ಥ-
ಕ್ಷೀರಾಂಭೋಧಿರ್ವಿಭಿಂದ್ಯಾದ್ಭವದನಭಿಮತಂ ಭೂರಿ ಮೇ ಭೂತಿಹೇತು: ॥೬॥

ಮೂರ್ಧನ್ಯೇಷೋಂಽಜಲಿರ್ಮೇ ದೃಢತರಮಿಹ ತೇ ಬಧ್ಯತೇ ಬಂಧಪಾಶ-
ಚ್ಛೇತ್ರೇ ದಾತ್ರೇ ಸುಖಾನಾಂ ಭಜತಿ ಭುವಿ ಭವಿಷ್ಯದ್ವಿಧಾತ್ರೇ ದ್ಯುಭರ್ತ್ರೇ ।
ಅತ್ಯಂತಂ ಸಂತತಂ ತ್ವಂ ಪ್ರದಿಶ ಪದಯುಗೇ ಹಂತ ಸಂತಾಪಭಾಜಾಂ
ಅಸ್ಮಾಕಂ ಭಕ್ತಿಮೇಕಾಂ ಭಗವತ ಉತ ತೇ ಮಾಧವಸ್ಯಾಥ ವಾಯೋ: ॥೭॥


ಸಾಭ್ರೋಷ್ಣಾಭೀಶುಶುಭ್ರಪ್ರಭಮಭಯ ನಭೋ ಭೂರಿಭೂಭೃದ್ವಿಭೂತಿ-
ಭ್ರಾಜಿಷ್ಣುರ್ಭೂರ್ಋಭೂಣಾಂ ಭವನಮಪಿ ವಿಭೋಽಭೇದಿ ಬಭ್ರೇ ಬಭೂವೇ ।
ಯೇನ ಭ್ರೂವಿಭ್ರಮಸ್ತೇ ಭ್ರಮಯತು ಸುಭೃಶಂ ಬಭ್ರುವದ್ದುರ್ಭೃತಾಶಾನ್
ಭ್ರಾಂತಿರ್ಭೇದಾವಭಾಸಸ್ತ್ವಿತಿ ಭಯಮಭಿಭೂರ್ಭೋಕ್ಷ್ಯತೋ ಮಾಯಿಭಿಕ್ಷೂನ್ ॥೮॥


ಯೇಽಮುಂ ಭಾವಂ ಭಜಂತೇ ಸುರಮುಖಸುಜನಾರಾಧಿತಂ ತೇ ತೃತೀಯಂ
ಭಾಸಂತೇ ಭಾಸುರೈಸ್ತೇ ಸಹಚರಚಲಿತೈಶ್ಚಾಮರೈಶ್ಚಾರುವೇಷಾ: ।
ವೈಕುಂಠೇ ಕಂಠಲಗ್ನಾಸ್ಥಿರಶುಚಿವಿಲಸತ್ಕಾಂತಿತಾರುಣ್ಯಲೀಲಾ-
ಲಾವಣ್ಯಾಪೂರ್ಣಕಾಂತಾಕುಚಭರಸುಲಭಾಶ್ಲೇಷಸಂಮೋದಸಾಂದ್ರಾ: ॥೯॥


ಆನಂದಾನ್ ಮಂದಮಂದಾ ದದತಿ ಹಿ ಮರುತ: ಕುಂದಮಂದಾರನಂದ್ಯಾ-
ವರ್ತಾಮೋದಾನ್ ದಧಾನಾ ಮೃದುಪದಮುದಿತೋದ್ಗೀತಕೈ: ಸುಂದರೀಣಾಮ್ ।
ವೃಂದೈರಾವಂದ್ಯಮುಕ್ತೇಂದ್ವಹಿಮಗುಮದನಾಹೀಂದ್ರದೇವೇಂದ್ರಸೇವ್ಯೇ
ಮೌಕುಂದೇ ಮಂದಿರೇಽಸ್ಮಿನ್ನವಿರತಮುದಯನ್ ಮೋದಿನಾಂ ದೇವದೇವ ॥೧೦॥


ಉತ್ತಪ್ತಾತ್ಯುತ್ಕಟತ್ವಿಟ್ಪ್ರಕಟಕಟಕಟಧ್ವಾನಸಂಘಟ್ಟನೋದ್ಯತ್-
ವಿದ್ಯುದ್ವ್ಯೂಢಸ್ಫುಲಿಂಗಪ್ರಕರವಿಕಿರಣೋತ್ಕ್ವಾಥಿತೇ ಬಾಧಿತಾಂಗಾನ್ ।
ಉದ್ಗಾಢಂ ಪಾತ್ಯಮಾನಾ ತಮಸಿ ತತ ಇತ: ಕಿಂಕರೈ: ಪಂಕಿಲೇ ತೇ
ಪಂಕ್ತಿರ್ಗ್ರಾವ್ಣಾಂ ಗರಿಮ್ಣಾ ಗ್ಲಪಯತಿ ಹಿ ಭವದ್ದ್ವೇಷಿಣೋ ವಿದ್ವದಾದ್ಯ ॥೧೧॥


ಅಸ್ಮಿನ್ನಸ್ಮದ್ಗುರೂಣಾಂ ಹರಿಚರಣಚಿರಧ್ಯಾನಸನ್ಮಂಗಲಾನಾಂ
ಯುಷ್ಮಾಕಂ ಪಾರ್ಶ್ವಭೂಮಿಂ ಧೃತರಣರಣಿಕ: ಸ್ವರ್ಗಿಸೇವ್ಯಾಂ ಪ್ರಪನ್ನ: ।
ಯಸ್ತೂದಾಸ್ತೇ ಸ ಆಸ್ತೇಽಧಿಭವಮಸುಲಭಕ್ಲೇಶನಿರ್ಮೋಕಮಸ್ತ-
ಪ್ರಾಯಾನಂದಂ ಕಥಂಚಿನ್ನ ವಸತಿ ಸತತಂ ಪಂಚಕಷ್ಟೇಽತಿಕಷ್ಟೇ ॥೧೨॥


ಕ್ಷುತ್ಕ್ಷಾಮಾನ್ ರೂಕ್ಷರಕ್ಷೋರದಖರನಖರಕ್ಷುಣ್ಣವಿಕ್ಷೋಭಿತಾಕ್ಷಾನ್
ಆಮಗ್ನಾನಂಧಕೂಪೇ ಕ್ಷುರಮುಖಮುಖರೈ: ಪಕ್ಷಿಭಿರ್ವಿಕ್ಷತಾಂಗಾನ್ ।
ಪೂಯಾಸೃಙ್ಮೂತ್ರವಿಷ್ಠಾಕೃಮಿಕುಲಕಲಿಲೇ ತತ್ಕ್ಷಣಾಕ್ಷಿಪ್ತಶಕ್ತ್ಯಾ-
ದ್ಯಸ್ತ್ರವ್ರಾತಾರ್ದಿತಾಂಸ್ತ್ವದ್ದ್ವಿಷ ಉಪಜಿಹತೇ ವಜ್ರಕಲ್ಪಾ ಜಲೂಕಾ: ॥೧೩॥


ಮಾತರ್ಮೇ ಮಾತರಿಶ್ವನ್ ಪಿತರತುಲಗುರೋ ಭ್ರಾತರಿಷ್ಟಾಪ್ತಬಂಧೋ
ಸ್ವಾಮಿನ್ ಸರ್ವಾಂತರಾತ್ಮನ್ನಜರ ಜರಯಿತರ್ಜನ್ಮಮೃತ್ಯಾಮಯಾನಾಮ್ ।
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂ ನಿರ್ನಿಮಿತ್ತಾಂ
ನಿರ್ವ್ಯಾಜಾಂ ನಿಶ್ಚಲಾಂ ಸದ್ಗುಣಗಣಬೃಹತೀಂ ಶಾಶ್ವತೀಮಾಶು ದೇವ ॥೧೪॥


ವಿಷ್ಣೋರತ್ಯುತ್ತಮತ್ವಾದಖಿಲಗುಣಗಣೈಸ್ತತ್ರ ಭಕ್ತಿಂ ಗರಿಷ್ಠಾಂ
ಸಂಶ್ಲಿಷ್ಟೇ ಶ್ರೀಧರಾಭ್ಯಾಮಮುಮಥ ಪರಿವಾರಾತ್ಮನಾ ಸೇವಕೇಷು ।
ಯ: ಸಂಧತ್ತೇ ವಿರಿಂಚಿಶ್ವಸನವಿಹಗಪಾನಂತರುದ್ರೇಂದ್ರಪೂರ್ವೇ-
ಷ್ವಾಧ್ಯಾಯಂಸ್ತಾರತಮ್ಯಂ ಸ್ಫುಟಮವತಿ ಸದಾ ವಾಯುರಸ್ಮದ್ಗುರುಸ್ತಮ್ ॥೧೫॥


ತತ್ತ್ವಜ್ಞಾನ್ ಮುಕ್ತಿಭಾಜ: ಸುಖಯಸಿ ಹಿ ಗುರೋ ಯೋಗ್ಯತಾತಾರತಮ್ಯಾ-
ದಾಧತ್ಸೇ ಮಿಶ್ರಬುದ್ಧೀಂಸ್ತ್ರಿದಿವನಿರಯಭೂಗೋಚರಾನ್ ನಿತ್ಯಬದ್ಧಾನ್ ।
ತಾಮಿಸ್ರಾಂಧಾದಿಕಾಖ್ಯೇ ತಮಸಿ ಸುಬಹುಲಂ ದು:ಖಯಸ್ಯನ್ಯಥಾಜ್ಞಾನ್
ವಿಷ್ಣೋರಾಜ್ಞಾಭಿರಿತ್ಥಂ ಶ್ರುತಿಶತಮಿತಿಹಾಸಾದಿ ಚಾಽಕರ್ಣಯಾಮ: ॥೧೬॥


ವಂದೇಽಹಂ ತಂ ಹನೂಮಾನಿತಿ ಮಹಿತಮಹಾಪೌರುಷೋ ಬಾಹುಶಾಲೀ
ಖ್ಯಾತಸ್ತೇಽಗ್ರ್ಯೋಽವತಾರ: ಸಹಿತ ಇಹ ಬಹುಬ್ರಹ್ಮಚರ್ಯಾದಿಧರ್ಮೈ: ।
ಸಸ್ನೇಹಾನಾಂ ಸಹಸ್ವಾನಹರಹರಹಿತಂ ನಿರ್ದಹನ್ ದೇಹಭಾಜಾಂ
ಅಂಹೋಮೋಹಾಪಹೋ ಯ: ಸ್ಪೃಹಯತಿ ಮಹತೀಂ ಭಕ್ತಿಮದ್ಯಾಪಿ ರಾಮೇ ॥೧೭॥


ಪ್ರಾಕ್ಪಂಚಾಶತ್ಸಹಸ್ರೈರ್ವ್ಯವಹಿತಮಮಿತಂ ಯೋಜನೈ: ಪರ್ವತಂ ತ್ವಂ
ಯಾವತ್ಸಂಜೀವನಾದ್ಯೌಷಧನಿಧಿಮಧಿಕ ಪ್ರಾಣ ಲಂಕಾಮನೈಷೀ: ।
ಅದ್ರಾಕ್ಷೀದುತ್ಪತಂತಂ ತತ ಉತ ಗಿರಿಮುತ್ಪಾಟಯಂತಂ ಗೃಹೀತ್ವಾಽಽ-
ಯಾಂತಂ ಖೇ ರಾಘವಾಂಘ್ರೌ ಪ್ರಣತಮಪಿ ತದೈಕಕ್ಷಣೇ ತ್ವಾಂ ಹಿ ಲೋಕ: ॥೧೮॥


ಕ್ಷಿಪ್ತ: ಪಶ್ಚಾತ್ ಸಲೀಲಂ ಶತಮತುಲಮತೇ ಯೋಜನಾನಾಂ ಸ ಉಚ್ಚಃ
ತಾವದ್ವಿಸ್ತಾರವಾಂಶ್ಚಾಪ್ಯುಪಲಲವ ಇವ ವ್ಯಗ್ರಬುಧ್ದ್ಯಾ ತ್ವಯಾಽತ: ।
ಸ್ವಸ್ವಸ್ಥಾನಸ್ಥಿತಾತಿಸ್ಥಿರಶಕಲಶಿಲಾಜಾಲಸಂಶ್ಲೇಷನಷ್ಟ-
ಚ್ಛೇದಾಂಕ: ಪ್ರಾಗಿವಾಭೂತ್ ಕಪಿವರವಪುಷಸ್ತೇ ನಮ: ಕೌಶಲಾಯ ॥೧೯॥


ದೃಷ್ಟ್ವಾ ದುಷ್ಟಾಧಿಪೋರ: ಸ್ಫುಟಿತಕನಕಸದ್ವರ್ಮಘೃಷ್ಟಾಸ್ಥಿಕೂಟಂ
ನಿಷ್ಪಿಷ್ಟಂ ಹಾಟಕಾದ್ರಿಪ್ರಕಟತಟತಟಾಕಾತಿಶಂಕೋ ಜನೋಽಭೂತ್ ।
ಯೇನಾಽಜೌ ರಾವಣಾರಿಪ್ರಿಯನಟನಪಟುರ್ಮುಷ್ಟಿರಿಷ್ಟಂ ಪ್ರದೇಷ್ಟುಂ
ಕಿಂ ನೇಷ್ಟೇ ಮೇ ಸ ತೇಽಷ್ಟಾಪದಕಟಕತಟಿತ್ಕೋಟಿಭಾಮೃಷ್ಟಕಾಷ್ಠ: ॥೨೦॥


ದೇವ್ಯಾದೇಶಪ್ರಣೀತಿದ್ರುಹಿಣಹರವರಾವಧ್ಯರಕ್ಷೋವಿಘಾತಾ-
ದ್ಯಾಸೇವ್ಯೋದ್ಯದ್ದಯಾರ್ದ್ರ: ಸಹಭುಜಮಕರೋದ್ರಾಮನಾಮಾ ಮುಕುಂದ: ।
ದುಷ್ಪ್ರಾಪೇ ಪಾರಮೇಷ್ಠ್ಯೇ ಕರತಲಮತುಲಂ ಮೂರ್ಧ್ನಿ ವಿನ್ಯಸ್ಯ ಧನ್ಯಂ
ತನ್ವನ್ ಭೂಯ: ಪ್ರಭೂತಪ್ರಣಯವಿಕಸಿತಾಬ್ಜೇಕ್ಷಣಸ್ತ್ವೇಕ್ಷಮಾಣ: ॥೨೧॥


ಜಘ್ನೇ ನಿಘ್ನೇನ ವಿಘ್ನೋ ಬಹುಲಬಲಬಕಧ್ವಂಸನಾದ್ಯೇನ ಶೋಚತ್
ವಿಪ್ರಾನುಕ್ರೋಶಪಾಶೈರಸುವಿಧೃತಿಸುಖಸ್ಯೈಕಚಕ್ರಾಜನಾನಾಮ್ ।
ತಸ್ಮೈ ತೇ ದೇವ ಕುರ್ಮ: ಕುರುಕುಲಪತಯೇ ಕರ್ಮಣಾ ಚ ಪ್ರಣಾಮಾನ್
ಕಿರ್ಮೀರಂ ದುರ್ಮತೀನಾಂ ಪ್ರಥಮಮಥ ಚ ಯೋ ನರ್ಮಣಾ ನಿರ್ಮಮಾಥ ॥೨೨॥


ನಿರ್ಮೃದ್ನನ್ನತ್ಯಯತ್ನಂ ವಿಜರವರ ಜರಾಸಂಧಕಾಯಾಸ್ಥಿಸಂಧೀನ್
ಯುದ್ಧೇ ತ್ವಂ ಸ್ವಧ್ವರೇ ವಾ ಪಶುಮಿವ ದಮಯನ್ ವಿಷ್ಣುಪಕ್ಷದ್ವಿಡೀಶಮ್ ।
ಯಾವತ್ ಪ್ರತ್ಯಕ್ಷಭೂತಂ ನಿಖಿಲಮಖಭುಜಂ ತರ್ಪಯಾಮಾಸಿಥಾಸೌ
ತಾವತ್ಯಾಽಯೋಜಿ ತೃಪ್ತ್ಯಾ ಕಿಮು ವದ ಭಗವನ್ ರಾಜಸೂಯಾಶ್ವಮೇಧೇ ॥೨೩॥


ಕ್ಷ್ವೇಲಾಕ್ಷೀಣಾಟ್ಟಹಾಸಂ ತವ ರಣಮರಿಹನ್ನುದ್ಗದೋದ್ದಾಮಬಾಹೋ
ಬಹ್ವಕ್ಷೌಹಿಣ್ಯನೀಕಕ್ಷಪಣಸುನಿಪುಣಂ ಯಸ್ಯ ಸರ್ವೋತ್ತಮಸ್ಯ ।
ಶುಶ್ರೂಷಾರ್ಥಂ ಚಕರ್ಥ ಸ್ವಯಮಯಮಥ ಸಂವಕ್ತುಮಾನಂದತೀರ್ಥ-
ಶ್ರೀಮನ್ನಾಮನ್ ಸಮರ್ಥಸ್ತ್ವಮಪಿ ಹಿ ಯುವಯೋ: ಪಾದಪದ್ಮಂ ಪ್ರಪದ್ಯೇ ॥೨೪॥


ದ್ರುಹ್ಯಂತೀಂ ಹೃದ್ರುಹಂ ಮಾಂ ದ್ರುತಮನಿಲಬಲಾದ್ದ್ರಾವಯಂತೀಮವಿದ್ಯಾ-
ನಿದ್ರಾಂ ವಿದ್ರಾವ್ಯ ಸದ್ಯೋರಚನಪಟುಮಥಾಽಪಾದ್ಯ ವಿದ್ಯಾಸಮುದ್ರ ।
ವಾಗ್ದೇವೀ ಸಾ ಸುವಿದ್ಯಾದ್ರವಿಣದವಿದಿತಾ ದ್ರೌಪದೀ ರುದ್ರಪತ್ನ್ಯಾತ್
ದ್ಯುದ್ರಿಕ್ತಾ ದ್ರಾಗಭದ್ರಾದ್ರಹಯತು ದಯಿತಾ ಪೂರ್ವಭೀಮಾಜ್ಞಯಾ ತೇ ॥೨೫॥


ಯಾಭ್ಯಾಂ ಶುಶ್ರೂಷುರಾಸೀ: ಕುರುಕುಲಜನನೇ ಕ್ಷತ್ರವಿಪ್ರೋದಿತಾಭ್ಯಾಂ
ಬ್ರಹ್ಮಭ್ಯಾಂ ಬೃಂಹಿತಾಭ್ಯಾಂ ಚಿತಿಸುಖವಪುಷಾ ಕೃಷ್ಣನಾಮಾಸ್ಪದಾಭ್ಯಾಮ್ ।
ನಿರ್ಭೇದಾಭ್ಯಾಂ ವಿಶೇಷಾದ್ದ್ವಿವಚನವಿಷಯಾಭ್ಯಾಮುಭಾಭ್ಯಾಮಮೂಭ್ಯಾಂ
ತುಭ್ಯಂ ಚ ಕ್ಷೇಮದೇಭ್ಯ: ಸರಸಿಜವಿಲಸಲ್ಲೋಚನೇಭ್ಯೋ ನಮೋಽಸ್ತು ॥೨೬॥


ಗಚ್ಛನ್ ಸೌಗಂಧಿಕಾರ್ಥಂ ಪಥಿ ಸ ಹನುಮತ: ಪುಚ್ಛಮಚ್ಛಸ್ಯ ಭೀಮ:
ಪ್ರೋದ್ಧರ್ತುಂ ನಾಶಕತ್ ಸ ತ್ವಮುಮುರುವಪುಷಾ ಭೀಷಯಾಮಾಸ ಚೇತಿ ।
ಪೂರ್ಣಜ್ಞಾನೌಜಸೋಸ್ತೇ ಗುರುತಮವಪುಷೋ: ಶ್ರೀಮದಾನಂದತೀರ್ಥ
ಕ್ರೀಡಾಮಾತ್ರಂ ತದೇತತ್ಪ್ರಮದದ ಸುಧಿಯಾಂ ಮೋಹಕ ದ್ವೇಷಭಾಜಾಮ್ ॥೨೭॥


ಬಹ್ವೀ: ಕೋಟೀರಟೀಕ: ಕುಟಿಲಕಟುಮತೀನುತ್ಕಟಾಟೋಪಕೋಪಾನ್
ದ್ರಾಕ್ ಚ ತ್ವಂ ಸತ್ವರತ್ವಾಚ್ಛರಣದ ಗದಯಾ ಪೋಥಯಾಮಾಸಿಥಾರೀನ್ ।
ಉನ್ಮಥ್ಯಾತಥ್ಯಮಿಥ್ಯಾತ್ವವಚನವಚನಾನುತ್ಪಥಸ್ಥಾಂಸ್ತಥಾಽನ್ಯಾನ್
ಪ್ರಾಯಚ್ಛ: ಸ್ವಪ್ರಿಯಾಯೈ ಪ್ರಿಯತಮ ಕುಸುಮಂ ಪ್ರಾಣ ತಸ್ಮೈ ನಮಸ್ತೇ ॥೨೮॥


ದೇಹಾದುತ್ಕ್ರಾಮಿತಾನಾಮಧಿಪತಿರಸತಾಮಕ್ರಮಾದ್ವಕ್ರಬುದ್ಧಿ:
ಕ್ರುದ್ಧ: ಕ್ರೋಧೈಕವಶ್ಯ: ಕೃಮಿರಿವ ಮಣಿಮಾನ್ ದುಷ್ಕೃತೀ ನಿಷ್ಕ್ರಿಯಾರ್ಥಮ್ ।
ಚಕ್ರೇ ಭೂಚಕ್ರಮೇತ್ಯ ಕ್ರಕಚಮಿವ ಸತಾಂ ಚೇತಸ: ಕಷ್ಟಶಾಸ್ತ್ರಂ
ದುಸ್ತರ್ಕಂ ಚಕ್ರಪಾಣೇರ್ಗುಣಗಣವಿರಹಂ ಜೀವತಾಂ ಚಾಧಿಕೃತ್ಯ ॥೨೯॥


ತದ್ದುಷ್ಪ್ರೇಕ್ಷಾನುಸಾರಾತ್ ಕತಿಪಯಕುನರೈರಾದೃತೋಽನ್ಯೈರ್ವಿಸೃಷ್ಟೋ
ಬ್ರಹ್ಮಾಽಹಂ ನಿರ್ಗುಣೋಽಹಂ ವಿತಥಮಿದಮಿತಿ ಹ್ಯೇಷ ಪಾಷಂಡವಾದ: ।
ತದ್ಯುಕ್ತ್ಯಾಭಾಸಜಾಲಪ್ರಸರವಿಷತರೂದ್ದಾಹದಕ್ಷಪ್ರಮಾಣ-
ಜ್ವಾಲಾಮಾಲಾಧರೋಽಗ್ನಿ: ಪವನ ವಿಜಯತೇ ತೇಽವತಾರಸ್ತೃತೀಯ: ॥೩೦॥


ಆಕ್ರೋಶಂತೋ ನಿರಾಶಾ ಭಯಭರವಿವಶಸ್ವಾಶಯಾಶ್ಛಿನ್ನದರ್ಪಾ
ವಾಶಂತೋ ದೇಶನಾಶಸ್ತ್ವಿತಿ ಬತ ಕುಧಿಯಾಂ ನಾಶಮಾಶಾದಶಾಶು ।
ಧಾವಂತೋಽಶ್ಲೀಲಶೀಲಾ ವಿತಥಶಪಥಶಾಪಾಶಿವಾ: ಶಾಂತಶೌರ್ಯಾಃ
ತ್ವದ್ವ್ಯಾಖ್ಯಾಸಿಂಹನಾದೇ ಸಪದಿ ದದೃಶಿರೇ ಮಾಯಿಗೋಮಾಯವಸ್ತೇ ॥೩೧॥


ತ್ರಿಷ್ವಪ್ಯೇವಾವತಾರೇಷ್ವರಿಭಿರಪಘೃಣಂ ಹಿಂಸಿತೋ ನಿರ್ವಿಕಾರ:
ಸರ್ವಜ್ಞ: ಸರ್ವಶಕ್ತಿ: ಸಕಲಗುಣಗಣಾಪೂರ್ಣರೂಪಪ್ರಗಲ್ಭ: ।
ಸ್ವಚ್ಛ: ಸ್ವಚ್ಛಂದಮೃತ್ಯು: ಸುಖಯಸಿ ಸುಜನಂ ದೇವ ಕಿಂ ಚಿತ್ರಮತ್ರ
ತ್ರಾತಾ ಯಸ್ಯ ತ್ರಿಧಾಮಾ ಜಗದುತ ವಶಗಂ ಕಿಂಕರಾ: ಶಂಕರಾದ್ಯಾ: ॥೩೨॥


ಉದ್ಯನ್ಮಂದಸ್ಮಿತಶ್ರೀಮೃದುಮಧುಮಧುರಾಲಾಪಪೀಯೂಷಧಾರಾ-
ಪೂರಾಸೇಕೋಪಶಾಂತಾಸುಖಸುಜನಮನೋಲೋಚನಾಪೀಯಮಾನಮ್ ।
ಸಂದ್ರಕ್ಷ್ಯೇ ಸುಂದರಂ ಸಂದುಹದಿಹ ಮಹದಾನಂದಮಾನಂದತೀರ್ಥ
ಶ್ರೀಮದ್ವಕ್ತ್ರೇಂದುಬಿಂಬಂ ದುರಿತನುದುದಿತಂ ನಿತ್ಯದಾಽಹಂ ಕದಾ ನು ॥೩೩॥


ಪ್ರಾಚೀನಾಚೀರ್ಣಪುಣ್ಯೋಚ್ಚಯಚತುರತರಾಚಾರತಶ್ಚಾರುಚಿತ್ತಾನ್
ಅತ್ಯುಚ್ಚಾಂ ರೋಚಯಂತೀಂ ಶ್ರುತಿಚಿತವಚನಾಂಛ್ರಾವಕಾಂಶ್ಚೋದ್ಯಚಂಚೂನ್ ।
ವ್ಯಾಖ್ಯಾಮುತ್ಖಾತದು:ಖಾಂ ಚಿರಮುಚಿತಮಹಾಚಾರ್ಯ ಚಿಂತಾರತಾಂಸ್ತೇ
ಚಿತ್ರಾಂ ಸಚ್ಛಾಸ್ತ್ರಕರ್ತಶ್ಚರಣಪರಿಚರಾನ್ ಶ್ರಾವಯಾಸ್ಮಾಂಶ್ಚ ಕಿಂಚಿತ್ ॥೩೪॥


ಪೀಠೇ ರತ್ನೋಪಕ್ಲೃಪ್ತೇ ರುಚಿರರುಚಿಮಣಿಜ್ಯೋತಿಷಾ ಸನ್ನಿಷಣ್ಣಂ
ಬ್ರಹ್ಮಾಣಂ ಭಾವಿನಂ ತ್ವಾಂ ಜ್ವಲತಿ ನಿಜಪದೇ ವೈದಿಕಾದ್ಯಾ ಹಿ ವಿದ್ಯಾ: ।
ಸೇವಂತೇ ಮೂರ್ತಿಮತ್ಯ: ಸುಚರಿತ ಚರಿತಂ ಭಾತಿ ಗಂಧರ್ವಗೀತಂ
ಪ್ರತ್ಯೇಕಂ ದೇವಸಂಸತ್ಸ್ವಪಿ ತವ ಭಗವನ್ ನರ್ತಿತದ್ಯೋವಧೂಷು ॥೩೫॥


ಸಾನುಕ್ರೋಶೈರಜಸ್ರಂ ಜನಿಮೃತಿನಿರಯಾದ್ಯೂರ್ಮಿಮಾಲಾವಿಲೇಽಸ್ಮಿನ್
ಸಂಸಾರಾಬ್ಧೌ ನಿಮಗ್ನಾನ್ ಶರಣಮಶರಣಾನಿಚ್ಛತೋ ವೀಕ್ಷ್ಯ ಜಂತೂನ್ ।
ಯುಷ್ಮಾಭಿ: ಪ್ರಾರ್ಥಿತ: ಸನ್ ಜಲನಿಧಿಶಯನ: ಸತ್ಯವತ್ಯಾಂ ಮಹರ್ಷೇಃ
ವ್ಯಕ್ತಶ್ಚಿನ್ಮಾತ್ರಮೂರ್ತಿರ್ನ ಖಲು ಭಗವತ: ಪ್ರಾಕೃತೋ ಜಾತು ದೇಹ: ॥೩೬॥


ಅಸ್ತವ್ಯಸ್ತಂ ಸಮಸ್ತಶ್ರುತಿಗತಮಧಮೈ ರತ್ನಪೂಗಂ ಯಥಾಂಽಧೈಃ
ಅರ್ಥಂ ಲೋಕೋಪಕೃತ್ಯೈ ಗುಣಗಣಣನಿಲಯ: ಸೂತ್ರಯಾಮಾಸ ಕೃತ್ಸ್ನಮ್ ।
ಯೋಽಸೌ ವ್ಯಾಸಾಭಿಧಾನಸ್ತಮಹಮಹರಹರ್ಭಕ್ತಿತಸ್ತ್ವತ್ಪ್ರಸಾದಾತ್
ಸದ್ಯೋ ವಿದ್ಯೋಪಲಬ್ಧ್ಯೈ ಗುರುತಮಮಗುರುಂ ದೇವದೇವಂ ನಮಾಮಿ ॥೩೭॥


ಆಜ್ಞಾಮನ್ಯೈರಧಾರ್ಯಾಂ ಶಿರಸಿ ಪರಿಸರದ್ರಶ್ಮಿಕೋಟೀರಕೋಟೌ
ಕೃಷ್ಣಸ್ಯಾಕ್ಲಿಷ್ಟಕರ್ಮಾ ದಧದನುಸರಣಾದರ್ಥಿತೋ ದೇವಸಂಘೈ: ।
ಭೂಮಾವಾಗತ್ಯ ಭೂಮನ್ನಸುಕರಮಕರೋಬ್ರಹ್ಮಸೂತ್ರಸ್ಯ ಭಾಷ್ಯಂ
ದುರ್ಭಾಷ್ಯಂ ವ್ಯಸ್ಯ ದಸ್ಯೋರ್ಮಣಿಮತ ಉದಿತಂ ವೇದ ಸದ್ಯುಕ್ತಿಭಿಸ್ತ್ವಮ್ ॥೩೮॥


ಭೂತ್ವಾ ಕ್ಷೇತ್ರೇ ವಿಶುದ್ಧೇ ದ್ವಿಜಗಣನಿಲಯೇ ರೂಪ್ಯಪೀಠಾಭಿಧಾನೇ
ತತ್ರಾಪಿ ಬ್ರಹ್ಮಜಾತಿಸ್ತ್ರಿಭುವನವಿಶದೇ ಮಧ್ಯಗೇಹಾಖ್ಯಗೇಹೇ ।
ಪಾರಿವ್ರಾಜ್ಯಾಧಿರಾಜ: ಪುನರಪಿ ಬದರೀಂ ಪ್ರಾಪ್ಯ ಕೃಷ್ಣಂ ಚ ನತ್ವಾ
ಕೃತ್ವಾ ಭಾಷ್ಯಾಣಿ ಸಮ್ಯಗ್ ವ್ಯತನುತ ಚ ಭವಾನ್ ಭಾರತಾರ್ಥಪ್ರಕಾಶಮ್
॥೩೯॥


ವಂದೇ ತಂ ತ್ವಾ ಸುಪೂರ್ಣಪ್ರಮತಿಮನುದಿನಾಸೇವಿತಂ ದೇವವೃಂದೈಃ
ವಂದೇ ವಂದಾರುಮೀಶೇ ಶ್ರಿಯ ಉತ ನಿಯತಂ ಶ್ರೀಮದಾನಂದತೀರ್ಥಮ್ ।
ವಂದೇ ಮಂದಾಕಿನೀಸತ್ಸರಿದಮಲಜಲಾಸೇಕಸಾಧಿಕ್ಯಸಂಗಂ
ವಂದೇಽಹಂ ದೇವ ಭಕ್ತ್ಯಾ ಭವಭಯದಹನಂ ಸಜ್ಜನಾನ್ಮೋದಯಂತಮ್ ॥೪೦॥


ಸುಬ್ರಹ್ಮಣ್ಯಾಖ್ಯಸೂರೇ: ಸುತ ಇತಿ ಸುಭೃಶಂ ಕೇಶವಾನಂದತೀರ್ಥ-
ಶ್ರೀಮತ್ಪಾದಾಬ್ಜಭಕ್ತ: ಸ್ತುತಿಮಕೃತ ಹರೇರ್ವಾಯುದೇವಸ್ಯ ಚಾಸ್ಯ ।
ತತ್ಪಾದಾರ್ಚಾದರೇಣ ಗ್ರಥಿತಪದಲಸನ್ಮಾಲಯಾ ತ್ವೇತಯಾ ಯೇ
ಸಂರಾಧ್ಯಾಮೂ ನಮಂತಿ ಪ್ರತತಮತಿಗುಣಾ ಮುಕ್ತಿಮೇತೇ ವ್ರಜಂತಿ ॥೪೧॥

॥ ಅಥ ನರಸಿಂಹನಖಸ್ತುತಿ: ॥

ಪಾಂತ್ವಸ್ಮಾನ್ ಪುರುಹೂತವೈರಿಬಲವನ್ಮಾತಂಗಮಾದ್ಯದ್ಘಟಾ-
ಕುಂಭೋಚ್ಚಾದ್ರಿವಿಪಾಟನಾಧಿಕಪಟುಪ್ರತ್ಯೇಕವಜ್ರಾಯಿತಾ: ।
ಶ್ರೀಮತ್ಕಂಠೀರವಾಸ್ಯ ಪ್ರತತಸುನಖರಾ ದಾರಿತಾರಾತಿದೂರ-
ಪ್ರಧ್ವಸ್ತಧ್ವಾಂತಶಾಂತಪ್ರವಿತತಮನಸಾ ಭಾವಿತಾ ನಾಕಿವೃಂದೈ: ॥೧॥


ಲಕ್ಷ್ಮೀಕಾಂತ ಸಮಂತತೋ ವಿಕಲಯನ್ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮವಸ್ತು ದೂರತರತೋಽಪಾಸ್ತಂ ರಸೋ ಯೋಽಷ್ಟಮ: ।
ಯದ್ರೋಷೋತ್ಕರದಕ್ಷನೇತ್ರಕುಟಿಲಪ್ರಾಂತೋತ್ಥಿತಾಗ್ನಿಸ್ಫುರತ್-
ಖದ್ಯೋತೋಪಮವಿಸ್ಫುಲಿಂಗಭಸಿತಾ ಬ್ರಹ್ಮೇಶಶಕ್ರೋತ್ಕರಾ: ॥೨॥


॥ ಇತಿ ಶ್ರೀತ್ರಿವಿಕ್ರಮಪಂಡಿತಾಚಾರ್ಯವಿರಚಿತಾ ಶ್ರೀಹರಿವಾಯುಸ್ತುತಿ: ॥
***********


॥ अथ नरसिंहनखस्तुति: ॥

पांत्वस्मान् पुरुहूतवैरिबलवन्मातंगमाद्यद्घटा-
कुंभोच्चाद्रिविपाटनाधिकपटुप्रत्येकवज्रायिता: ।
श्रीमत्कंठीरवास्य प्रततसुनखरा दारितारातिदूर-
प्रध्वस्तध्वांतशांतप्रविततमनसा भाविता नाकिवृंदै: ॥१॥


लक्ष्मीकांत समंततो विकलयन्नैवेशितुस्ते समं
पश्याम्युत्तमवस्तु दूरतरतोऽपास्तं रसो योऽष्टम: ।
यद्रोषोत्करदक्षनेत्रकुटिलप्रांतोत्थिताग्निस्फुरत्-
खद्योतोपमविस्फुलिंगभसिता ब्रह्मेशशक्रोत्करा: ॥२॥


॥ इति श्रीमदानंदतीर्थभगवत्पादाचार्यविरचिता श्रीनरसिंहनखस्तुति:॥


॥ अथ श्री हरि वायु स्तुति: ॥


श्रीमद्विष्ण्वंघ्रिनिष्ठातिगुणगुरुतमश्रीमदानंदतीर्थ-
त्रैलोक्याचार्यपादोज्ज्वलजलजलसत्पांसवोऽस्मान् पुनंतु ।
वाचां यत्र प्रणेत्री त्रिभुवनमहिता शारदा शारदेंदु-
ज्योत्स्नाभद्रस्मितश्रीधलितककुभा प्रेमभारं बभार ॥१॥


उत्कंठाकुंठकोलाहलजवविदिताजस्रसेवानुवृद्ध-
प्राज्ञात्मज्ञानधूतांधतमससुमनोमौलिरत्नावलीनाम् ।
भक्त्युद्रेकावगाढप्रघटनसघटात्कारसंघृष्यमाण-
प्रांतप्राग्र्यांघ्रिपीठोत्थितकनकरज:पिंजरारंजिताशा: ॥२॥


जन्माधिव्याध्युपाधिप्रतिहतिविरहप्रापकाणां गुणानां
अग्र्याणामर्पकाणां चिरमुदितचिदानंदसंदोहदानाम् ।
एतेषामेष दोषप्रमुषितमनसां द्वेषिणां दूषकाणां
दैत्यानामार्तिमंधे तमसि विदधतां संस्तवे नास्मि शक्त: ॥३॥


अस्याविष्कर्तुकामं कलिमलकलुषेऽस्मिन् जने ज्ञानमार्गं
वंद्यं चंद्रेंद्ररुद्रद्युमणिफणिवयोनायकाद्यैरिहाद्य ।
मध्वाख्यं मंत्रसिद्धं किमुत कृतवतो मारुतस्यावतारं
पातारं पारमेष्ठ्यं पदमपविपद: प्राप्तुरापन्नपुंसाम् ॥४॥


उद्यद्विद्युत्प्रचंडां निजरुचिनिकरव्याप्तलोकावकाशो
बिभ्रद्भीमो भुजे योऽभ्युदितदिनकराभांगदाढ्यप्रकांडे ।
वीर्योद्धार्यां गदाग्र्यामयमिह सुमतिं वायुदेवो विदध्यात्
अध्यात्मज्ञाननेता यतिवरमहितो भूमिभूषामणिर्मे ॥५॥


संसारोत्तापनित्योपशमदसदयस्नेहहासांबुपूर-
प्रोद्यद्विद्यानवद्यद्युतिमणिकिरणश्रेणिसंपूरिताश: ।
श्रीवत्सांकाधिवासोचिततरसरल: श्रीमदानंदतीर्थ-
क्षीरांभोधिर्विभिंद्याद्भवदनभिमतं भूरि मे भूतिहेतु: ॥६॥


मूर्धन्येषोंऽजलिर्मे दृढतरमिह ते बध्यते बंधपाश-
च्छेत्रे दात्रे सुखानां भजति भुवि भविष्यद्विधात्रे द्युभर्त्रे ।
अत्यंतं संततं त्वं प्रदिश पदयुगे हंत संतापभाजां
अस्माकं भक्तिमेकां भगवत उत ते माधवस्याथ वायो: ॥७॥


साभ्रोष्णाभीशुशुभ्रप्रभमभय नभो भूरिभूभृद्विभूति-
भ्राजिष्णुर्भूर्ऋभूणां भवनमपि विभोऽभेदि बभ्रे बभूवे ।
येन भ्रूविभ्रमस्ते भ्रमयतु सुभृशं बभ्रुवद्दुर्भृताशान्
भ्रांतिर्भेदावभासस्त्विति भयमभिभूर्भोक्ष्यतो मायिभिक्षून् ॥८॥


येऽमुं भावं भजंते सुरमुखसुजनाराधितं ते तृतीयं
भासंते भासुरैस्ते सहचरचलितैश्चामरैश्चारुवेषा: ।
वैकुंठे कंठलग्नास्थिरशुचिविलसत्कांतितारुण्यलीला-
लावण्यापूर्णकांताकुचभरसुलभाश्लेषसंमोदसांद्रा: ॥९॥


आनंदान् मंदमंदा ददति हि मरुत: कुंदमंदारनंद्या-
वर्तामोदान् दधाना मृदुपदमुदितोद्गीतकै: सुंदरीणाम् ।
वृंदैरावंद्यमुक्तेंद्वहिमगुमदनाहींद्रदेवेंद्रसेव्ये
मौकुंदे मंदिरेऽस्मिन्नविरतमुदयन् मोदिनां देवदेव ॥१०॥


उत्तप्तात्युत्कटत्विट्प्रकटकटकटध्वानसंघट्टनोद्यत्-
विद्युद्व्यूढस्फुलिंगप्रकरविकिरणोत्क्वाथिते बाधितांगान् ।
उद्गाढं पात्यमाना तमसि तत इत: किंकरै: पंकिले ते
पंक्तिर्ग्राव्णां गरिम्णा ग्लपयति हि भवद्द्वेषिणो विद्वदाद्य ॥११॥


अस्मिन्नस्मद्गुरूणां हरिचरणचिरध्यानसन्मंगलानां
युष्माकं पार्श्वभूमिं धृतरणरणिक: स्वर्गिसेव्यां प्रपन्न: ।
यस्तूदास्ते स आस्तेऽधिभवमसुलभक्लेशनिर्मोकमस्त-
प्रायानंदं कथंचिन्न वसति सततं पंचकष्टेऽतिकष्टे ॥१२॥


क्षुत्क्षामान् रूक्षरक्षोरदखरनखरक्षुण्णविक्षोभिताक्षान्
आमग्नानंधकूपे क्षुरमुखमुखरै: पक्षिभिर्विक्षतांगान् ।
पूयासृङ्मूत्रविष्ठाकृमिकुलकलिले तत्क्षणाक्षिप्तशक्त्या-
द्यस्त्रव्रातार्दितांस्त्वद्द्विष उपजिहते वज्रकल्पा जलूका: ॥१३॥


मातर्मे मातरिश्वन् पितरतुलगुरो भ्रातरिष्टाप्तबंधो
स्वामिन् सर्वांतरात्मन्नजर जरयितर्जन्ममृत्यामयानाम् ।
गोविंदे देहि भक्तिं भवति च भगवन्नूर्जितां निर्निमित्तां
निर्व्याजां निश्चलां सद्गुणगणबृहतीं शाश्वतीमाशु देव ॥१४॥


विष्णोरत्युत्तमत्वादखिलगुणगणैस्तत्र भक्तिं गरिष्ठां
संश्लिष्टे श्रीधराभ्याममुमथ परिवारात्मना सेवकेषु ।
य: संधत्ते विरिंचिश्वसनविहगपानंतरुद्रेंद्रपूर्वे-
ष्वाध्यायंस्तारतम्यं स्फुटमवति सदा वायुरस्मद्गुरुस्तम् ॥१५॥


तत्त्वज्ञान् मुक्तिभाज: सुखयसि हि गुरो योग्यतातारतम्या-
दाधत्से मिश्रबुद्धींस्त्रिदिवनिरयभूगोचरान् नित्यबद्धान् ।
तामिस्रांधादिकाख्ये तमसि सुबहुलं दु:खयस्यन्यथाज्ञान्
विष्णोराज्ञाभिरित्थं श्रुतिशतमितिहासादि चाऽकर्णयाम: ॥१६॥


वंदेऽहं तं हनूमानिति महितमहापौरुषो बाहुशाली
ख्यातस्तेऽग्र्योऽवतार: सहित इह बहुब्रह्मचर्यादिधर्मै: ।
सस्नेहानां सहस्वानहरहरहितं निर्दहन् देहभाजां
अंहोमोहापहो य: स्पृहयति महतीं भक्तिमद्यापि रामे ॥१७॥


प्राक्पंचाशत्सहस्रैर्व्यवहितममितं योजनै: पर्वतं त्वं
यावत्संजीवनाद्यौषधनिधिमधिक प्राण लंकामनैषी: ।
अद्राक्षीदुत्पतंतं तत उत गिरिमुत्पाटयंतं गृहीत्वाऽऽ-
यांतं खे राघवांघ्रौ प्रणतमपि तदैकक्षणे त्वां हि लोक: ॥१८॥


क्षिप्त: पश्चात् सलीलं शतमतुलमते योजनानां स उच्चः
तावद्विस्तारवांश्चाप्युपललव इव व्यग्रबुध्द्या त्वयाऽत: ।
स्वस्वस्थानस्थितातिस्थिरशकलशिलाजालसंश्लेषनष्ट-
च्छेदांक: प्रागिवाभूत् कपिवरवपुषस्ते नम: कौशलाय ॥१९॥


दृष्ट्वा दुष्टाधिपोर: स्फुटितकनकसद्वर्मघृष्टास्थिकूटं
निष्पिष्टं हाटकाद्रिप्रकटतटतटाकातिशंको जनोऽभूत् ।
येनाऽजौ रावणारिप्रियनटनपटुर्मुष्टिरिष्टं प्रदेष्टुं
किं नेष्टे मे स तेऽष्टापदकटकतटित्कोटिभामृष्टकाष्ठ: ॥२०॥


देव्यादेशप्रणीतिद्रुहिणहरवरावध्यरक्षोविघाता-
द्यासेव्योद्यद्दयार्द्र: सहभुजमकरोद्रामनामा मुकुंद: ।
दुष्प्रापे पारमेष्ठ्ये करतलमतुलं मूर्ध्नि विन्यस्य धन्यं
तन्वन् भूय: प्रभूतप्रणयविकसिताब्जेक्षणस्त्वेक्षमाण: ॥२१॥


जघ्ने निघ्नेन विघ्नो बहुलबलबकध्वंसनाद्येन शोचत्
विप्रानुक्रोशपाशैरसुविधृतिसुखस्यैकचक्राजनानाम् ।
तस्मै ते देव कुर्म: कुरुकुलपतये कर्मणा च प्रणामान्
किर्मीरं दुर्मतीनां प्रथममथ च यो नर्मणा निर्ममाथ ॥२२॥


निर्मृद्नन्नत्ययत्नं विजरवर जरासंधकायास्थिसंधीन्
युद्धे त्वं स्वध्वरे वा पशुमिव दमयन् विष्णुपक्षद्विडीशम् ।
यावत् प्रत्यक्षभूतं निखिलमखभुजं तर्पयामासिथासौ
तावत्याऽयोजि तृप्त्या किमु वद भगवन् राजसूयाश्वमेधे ॥२३॥


क्ष्वेलाक्षीणाट्टहासं तव रणमरिहन्नुद्गदोद्दामबाहो
बह्वक्षौहिण्यनीकक्षपणसुनिपुणं यस्य सर्वोत्तमस्य ।
शुश्रूषार्थं चकर्थ स्वयमयमथ संवक्तुमानंदतीर्थ-
श्रीमन्नामन् समर्थस्त्वमपि हि युवयो: पादपद्मं प्रपद्ये ॥२४॥


द्रुह्यंतीं हृद्रुहं मां द्रुतमनिलबलाद्द्रावयंतीमविद्या-
निद्रां विद्राव्य सद्योरचनपटुमथाऽपाद्य विद्यासमुद्र ।
वाग्देवी सा सुविद्याद्रविणदविदिता द्रौपदी रुद्रपत्न्यात्
द्युद्रिक्ता द्रागभद्राद्रहयतु दयिता पूर्वभीमाज्ञया ते ॥२५॥


याभ्यां शुश्रूषुरासी: कुरुकुलजनने क्षत्रविप्रोदिताभ्यां
ब्रह्मभ्यां बृंहिताभ्यां चितिसुखवपुषा कृष्णनामास्पदाभ्याम् ।
निर्भेदाभ्यां विशेषाद्द्विवचनविषयाभ्यामुभाभ्याममूभ्यां
तुभ्यं च क्षेमदेभ्य: सरसिजविलसल्लोचनेभ्यो नमोऽस्तु ॥२६॥


गच्छन् सौगंधिकार्थं पथि स हनुमत: पुच्छमच्छस्य भीम:
प्रोद्धर्तुं नाशकत् स त्वमुमुरुवपुषा भीषयामास चेति ।
पूर्णज्ञानौजसोस्ते गुरुतमवपुषो: श्रीमदानंदतीर्थ
क्रीडामात्रं तदेतत्प्रमदद सुधियां मोहक द्वेषभाजाम् ॥२७॥


बह्वी: कोटीरटीक: कुटिलकटुमतीनुत्कटाटोपकोपान्
द्राक् च त्वं सत्वरत्वाच्छरणद गदया पोथयामासिथारीन् ।
उन्मथ्यातथ्यमिथ्यात्ववचनवचनानुत्पथस्थांस्तथाऽन्यान्
प्रायच्छ: स्वप्रियायै प्रियतम कुसुमं प्राण तस्मै नमस्ते ॥२८॥


देहादुत्क्रामितानामधिपतिरसतामक्रमाद्वक्रबुद्धि:
क्रुद्ध: क्रोधैकवश्य: कृमिरिव मणिमान् दुष्कृती निष्क्रियार्थम् ।
चक्रे भूचक्रमेत्य क्रकचमिव सतां चेतस: कष्टशास्त्रं
दुस्तर्कं चक्रपाणेर्गुणगणविरहं जीवतां चाधिकृत्य ॥२९॥


तद्दुष्प्रेक्षानुसारात् कतिपयकुनरैरादृतोऽन्यैर्विसृष्टो
ब्रह्माऽहं निर्गुणोऽहं वितथमिदमिति ह्येष पाषंडवाद: ।
तद्युक्त्याभासजालप्रसरविषतरूद्दाहदक्षप्रमाण-
ज्वालामालाधरोऽग्नि: पवन विजयते तेऽवतारस्तृतीय: ॥३०॥


आक्रोशंतो निराशा भयभरविवशस्वाशयाश्छिन्नदर्पा
वाशंतो देशनाशस्त्विति बत कुधियां नाशमाशादशाशु ।
धावंतोऽश्लीलशीला वितथशपथशापाशिवा: शांतशौर्याः
त्वद्व्याख्यासिंहनादे सपदि ददृशिरे मायिगोमायवस्ते ॥३१॥


त्रिष्वप्येवावतारेष्वरिभिरपघृणं हिंसितो निर्विकार:
सर्वज्ञ: सर्वशक्ति: सकलगुणगणापूर्णरूपप्रगल्भ: ।
स्वच्छ: स्वच्छंदमृत्यु: सुखयसि सुजनं देव किं चित्रमत्र
त्राता यस्य त्रिधामा जगदुत वशगं किंकरा: शंकराद्या: ॥३२॥


उद्यन्मंदस्मितश्रीमृदुमधुमधुरालापपीयूषधारा-
पूरासेकोपशांतासुखसुजनमनोलोचनापीयमानम् ।
संद्रक्ष्ये सुंदरं संदुहदिह महदानंदमानंदतीर्थ
श्रीमद्वक्त्रेंदुबिंबं दुरितनुदुदितं नित्यदाऽहं कदा नु ॥३३॥


प्राचीनाचीर्णपुण्योच्चयचतुरतराचारतश्चारुचित्तान्
अत्युच्चां रोचयंतीं श्रुतिचितवचनांछ्रावकांश्चोद्यचंचून् ।
व्याख्यामुत्खातदु:खां चिरमुचितमहाचार्य चिंतारतांस्ते
चित्रां सच्छास्त्रकर्तश्चरणपरिचरान् श्रावयास्मांश्च किंचित् ॥३४॥


पीठे रत्नोपक्लृप्ते रुचिररुचिमणिज्योतिषा सन्निषण्णं
ब्रह्माणं भाविनं त्वां ज्वलति निजपदे वैदिकाद्या हि विद्या: ।
सेवंते मूर्तिमत्य: सुचरित चरितं भाति गंधर्वगीतं
प्रत्येकं देवसंसत्स्वपि तव भगवन् नर्तितद्योवधूषु ॥३५॥


सानुक्रोशैरजस्रं जनिमृतिनिरयाद्यूर्मिमालाविलेऽस्मिन्
संसाराब्धौ निमग्नान् शरणमशरणानिच्छतो वीक्ष्य जंतून् ।
युष्माभि: प्रार्थित: सन् जलनिधिशयन: सत्यवत्यां महर्षेः
व्यक्तश्चिन्मात्रमूर्तिर्न खलु भगवत: प्राकृतो जातु देह: ॥३६॥


अस्तव्यस्तं समस्तश्रुतिगतमधमै रत्नपूगं यथांऽधैः
अर्थं लोकोपकृत्यै गुणगणणनिलय: सूत्रयामास कृत्स्नम् ।
योऽसौ व्यासाभिधानस्तमहमहरहर्भक्तितस्त्वत्प्रसादात्
सद्यो विद्योपलब्ध्यै गुरुतममगुरुं देवदेवं नमामि ॥३७॥


आज्ञामन्यैरधार्यां शिरसि परिसरद्रश्मिकोटीरकोटौ
कृष्णस्याक्लिष्टकर्मा दधदनुसरणादर्थितो देवसंघै: ।
भूमावागत्य भूमन्नसुकरमकरोब्रह्मसूत्रस्य भाष्यं
दुर्भाष्यं व्यस्य दस्योर्मणिमत उदितं वेद सद्युक्तिभिस्त्वम् ॥३८॥


भूत्वा क्षेत्रे विशुद्धे द्विजगणनिलये रूप्यपीठाभिधाने
तत्रापि ब्रह्मजातिस्त्रिभुवनविशदे मध्यगेहाख्यगेहे ।
पारिव्राज्याधिराज: पुनरपि बदरीं प्राप्य कृष्णं च नत्वा
कृत्वा भाष्याणि सम्यग् व्यतनुत च भवान् भारतार्थप्रकाशम् ॥३९॥


वंदे तं त्वा सुपूर्णप्रमतिमनुदिनासेवितं देववृंदैः
वंदे वंदारुमीशे श्रिय उत नियतं श्रीमदानंदतीर्थम् ।
वंदे मंदाकिनीसत्सरिदमलजलासेकसाधिक्यसंगं
वंदेऽहं देव भक्त्या भवभयदहनं सज्जनान्मोदयंतम् ॥४०॥


सुब्रह्मण्याख्यसूरे: सुत इति सुभृशं केशवानंदतीर्थ-
श्रीमत्पादाब्जभक्त: स्तुतिमकृत हरेर्वायुदेवस्य चास्य ।
तत्पादार्चादरेण ग्रथितपदलसन्मालया त्वेतया ये
संराध्यामू नमंति प्रततमतिगुणा मुक्तिमेते व्रजंति ॥४१॥


पांत्वस्मान् पुरुहूतवैरिबलवन्मातंगमाद्यद्घटा-
कुंभोच्चाद्रिविपाटनाधिकपटुप्रत्येकवज्रायिता: ।
श्रीमत्कंठीरवास्य प्रततसुनखरा दारितारातिदूर-
प्रध्वस्तध्वांतशांतप्रविततमनसा भाविता नाकिवृंदै: ॥१॥


लक्ष्मीकांत समंततो विकलयन्नैवेशितुस्ते समं
पश्याम्युत्तमवस्तु दूरतरतोऽपास्तं रसो योऽष्टम: ।
यद्रोषोत्करदक्षनेत्रकुटिलप्रांतोत्थिताग्निस्फुरत्-
खद्योतोपमविस्फुलिंगभसिता ब्रह्मेशशक्रोत्करा: ॥२॥


॥ इति श्रीत्रिविक्रमपंडिताचार्यविरचिता श्रीहरिवायुस्तुति: ॥
***********

ಶ್ರೀನರಸಿಂಹ-ನಖ-ಸ್ತುತಿಃ (start)

ಪಾಂತ್ವಸ್ಮಾನ್ ಪುರುಹೂತ-ವೈರಿ-ಬಲವನ್-ಮಾತಂಗ-ಮಾದ್ಯದ್-ಘಟಾ-
ಕುಂಭೋಚ್ಚಾದ್ರಿ-ವಿಪಾಟನಾಧಿಕ-ಪಟು-ಪ್ರತ್ಯೇಕ-ವಜ್ರಾಯಿತಾಃ |
ಶ್ರೀಮತ್-ಕಂಠೀರವಾಸ್ಯ-ಪ್ರತತ-ಸು-ನಖರಾ ದಾರಿತಾರಾತಿ-ದೂರ-
ಪ್ರಧ್ವಸ್ತ-ಧ್ವಾಂತ-ಶಾಂತ-ಪ್ರವಿತತ-ಮನಸಾ ಭಾವಿತಾ ನಾಕಿವೃಂದೈಃ (ಭೂರಿ-ಭಾಗೈಃ) || ೧ ||

ಲಕ್ಷ್ಮೀ-ಕಾಂತ ಸಮಂತತೋಽಪಿ ಕಲಯನ್ ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮ-ವಸ್ತು ದೂರ-ತರತೋಽಪಾಸ್ತಂ ರಸೋ ಯೋಽಷ್ಟಮಃ |
ಯದ್-ರೋಷೋತ್ಕರ-ದಕ್ಷ-ನೇತ್ರ-ಕುಟಿಲ-ಪ್ರಾಂತೋತ್ಥಿತಾಗ್ನಿ-ಸ್ಫುರತ್-
ಖದ್ಯೋತೋಪಮ-ವಿಸ್ಫುಲಿಂಗ-ಭಸಿತಾ ಬ್ರಹ್ಮೇಶ-ಶಕ್ರೋತ್ಕರಾಃ || ೨ ||


|| ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಂ ಶ್ರೀನರಸಿಂಹನಖಸ್ತುತಿಃ ಸಂಪೂರ್ಣಾ ||

[ ಶ್ರೀಮುಖ್ಯಪ್ರಾಣಧ್ಯಾನಮ್
ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ
ಸ್ವಾಸೀನಮಸ್ಯ ನುತಿನಿತ್ಯವಚಃಪ್ರವೃತ್ತಿಮ್ |
ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ
ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ || ]

ಶ್ರೀವಾಯು-ಸ್ತುತಿಃ

ಶ್ರೀಮದ್-ವಿಷ್ಣ್ವಂಘ್ರಿ-ನಿಷ್ಠಾತಿಗುಣ-ಗುರು-ತಮ-ಶ್ರೀಮದಾನಂದ-ತೀರ್ಥ-
ತ್ರೈಲೋಕ್ಯಾಚಾರ್ಯ-ಪಾದೋಜ್ಜ್ವಲ-ಜಲಜ-ಲಸತ್-ಪಾಂಸವೋಽಸ್ಮಾನ್-ಪುನಂತು |
ವಾಚಾಂ ಯತ್ರ ಪ್ರಣೇತ್ರೀ ತ್ರಿ-ಭುವನ-ಮಹಿತಾ ಶಾರದಾ ಶಾರದೇಂದು-
ಜ್ಯೋತ್ಸ್ನಾ-ಭದ್ರ-ಸ್ಮಿತ-ಶ್ರೀ-ಧವಳಿತ-ಕಕುಭಾ ಪ್ರೇಮ-ಭಾರಂ ಬಭಾರ || ೧ ||

ಉತ್ಕಂಠಾಕುಂಠ-ಕೋಲಾಹಲ-ಜವ-ವಿಜಿತಾಜಸ್ರ-ಸೇವಾನು-ವೃದ್ಧ-
ಪ್ರಾಜ್ಞಾತ್ಮ-ಜ್ಞಾನ-ಧೂತಾಂಧ-ತಮಸ-ಸು-ಮನೋ-ಮೌಳಿ-ರತ್ನಾವಲೀನಾಮ್ |
ಭಕ್ತ್ಯುದ್ರೇಕಾವ-ಗಾಢ-ಪ್ರ-ಘಟನ-ಸ-ಘಟಾತ್-ಕಾರ-ಸಂಘೃಷ್ಯಮಾಣ-
ಪ್ರಾಂತ-ಪ್ರಾಗ್ರ್ಯಾಂಘ್ರಿ-ಪೀಠೋತ್ಥಿತ-ಕನಕ-ರಜಃ-ಪಿಂಜರಾರಂಜಿತಾಶಾಃ || ೨ ||

ಜನ್ಮಾಧಿ-ವ್ಯಾಧ್ಯುಪಾಧಿ-ಪ್ರತಿ-ಹತಿ-ವಿರಹ-ಪ್ರಾಪಕಾಣಾಂ ಗುಣಾನಾಂ
ಅಗ್ರ್ಯಾಣಾಮರ್ಪಕಾಣಾಂ ಚಿರಮುದಿತ-ಚಿದಾನಂದ-ಸಂದೋಹ-ದಾನಾಮ್ |
ಏತೇಷಾಮೇಷ ದೋಷ-ಪ್ರಮುಷಿತ-ಮನಸಾಂ ದ್ವೇಷಿಣಾಂ ದೂಷಕಾಣಾಂ
ದೈತ್ಯಾನಾಮಾರ್ತಿಮಂಧೇ ತಮಸಿ ವಿ-ದಧತಾಂ ಸಂ-ಸ್ತವೇ ನಾಸ್ಮಿ ಶಕ್ತಃ || ೩ ||

ಅಸ್ಯಾವಿಷ್ಕರ್ತುಕಾಮಂ ಕಲಿ-ಮಲ-ಕಲುಷೇಽಸ್ಮಿನ್ ಜನೇ ಜ್ಞಾನ-ಮಾರ್ಗಂ
ವಂದ್ಯಂ ಚಂದ್ರೇಂದ್ರ-ರುದ್ರ-ದ್ಯು-ಮಣಿ-ಫಣಿ-ವಯೋ-ನಾಯಕಾದ್ಯೈರಿಹಾದ್ಯ |
ಮಧ್ವಾಖ್ಯಂ ಮಂತ್ರ-ಸಿದ್ಧಂ ಕಿಮುತ ಕೃತವತೋ ಮಾರುತಸ್ಯಾವ-ತಾರಂ
ಪಾತಾರಂ ಪಾರಮೇಷ್ಠ್ಯಂ ಪದಮಪ-ವಿಪದಃ ಪ್ರಾಪ್ತುರಾಪನ್ನ-ಪುಂಸಾಮ್ || ೪ ||

ಉದ್ಯದ್-ವಿ-ದ್ಯುತ್-ಪ್ರ-ಚಂಡಾಂ ನಿಜ-ರುಚಿ-ನಿಕರ-ವ್ಯಾಪ್ತ-ಲೋಕಾವ-ಕಾಶೋ
ಬಿಭ್ರದ್-ಭೀಮೋ ಭುಜೇ ಯೋಽಭ್ಯುದಿತ-ದಿನ-ಕರಾಭಾಂಗ-ದಾಢ್ಯ-ಪ್ರಕಾಂಡೇ |
ವೀರ್ಯೋದ್ಧಾರ್ಯಾ೦ ಗದಾಗ್ರ್ಯಾಮಯಮಿಹ ಸು-ಮತಿಂ ವಾಯು-ದೇವೋ ವಿ-ದಧ್ಯಾತ್
ಅಧ್ಯಾತ್ಮ-ಜ್ಞಾನ-ನೇತಾ ಯತಿ-ವರ-ಮಹಿತೋ ಭೂಮಿ-ಭೂಷಾ-ಮಣಿರ್ಮೇ || ೫ ||

ಸಂ-ಸಾರೋತ್ತಾಪ-ನಿತ್ಯೋಪ-ಶಮ-ದ-ಸ-ದಯ-ಸ್ನೇಹ-ಹಾಸಾಂಬು-ಪೂರ-
ಪ್ರೋದ್ಯದ್-ವಿದ್ಯಾನವದ್ಯ-ದ್ಯುತಿ-ಮಣಿ-ಕಿರಣ-ಶ್ರೇಣಿ-ಸಂ-ಪೂರಿತಾಶಃ |
ಶ್ರೀ-ವತ್ಸಾಂಕಾಧಿ-ವಾಸೋಚಿತ-ತರ-ಸರಳ-ಶ್ರೀ-ಮದಾನಂದ-ತೀರ್ಥ-
ಕ್ಷೀರಾಂಭೋಧಿರ್ವಿ-ಭಿಂದ್ಯಾದ್ ಭವದನಭಿ-ಮತಂ ಭೂರಿ ಮೇ ಭೂತಿ-ಹೇತುಃ || ೬ ||

ಮೂರ್ಧನ್ಯೇಷೋಽ೦ಜಲಿರ್ಮೇ ದೃಢ-ತರಮಿಹ ತೇ ಬದ್ಧ್ಯತೇ ಬಂಧ-ಪಾಶ-
ಚ್ಛೇತ್ರೇ ದಾತ್ರೇ ಸುಖಾನಾಂ ಭಜತಿ ಭುವಿ ಭವಿಷ್ಯದ್-ವಿ-ಧಾತ್ರೇ ದ್ಯು-ಭರ್ತ್ರೇ |
ಅತ್ಯಂತಂ ಸಂ-ತತಂ ತ್ವಂ ಪ್ರ-ದಿಶ ಪದ-ಯುಗೇ ಹಂತ ಸಂ-ತಾಪ-ಭಾಜಾಂ
ಅಸ್ಮಾಕಂ ಭಕ್ತಿಮೇಕಾಂ ಭಗವತ ಉತ ತೇ ಮಾಧವಸ್ಯಾಥ ವಾಯೋಃ || ೭ ||

ಸಾಭ್ರೋಷ್ಣಾಭೀಶು-ಶುಭ್ರ-ಪ್ರಭಮಭಯ ನಭೋ ಭೂರಿ-ಭೂ-ಭೃದ್-ವಿಭೂತಿ-
ಭ್ರಾಜಿಷ್ಣುರ್ಭೂರ್-ಋಭೂಣಾಂ ಭವನಮಪಿ ವಿಭೋಽಭೇದಿ ಬಭ್ರೇ ಬಭೂವೇ |
ಯೇನ ಭ್ರೂ-ವಿ-ಭ್ರಮಸ್ತೇ ಭ್ರಮಯತು ಸು-ಭೃಶಂ ಬಭ್ರುವದ್ ದುರ್ಭೃತಾಶಾನ್
ಭ್ರಾಂತಿರ್ಭೇದಾವ-ಭಾಸಸ್ತ್ವಿತಿ ಭಯಮಭಿ-ಭೂರ್ಭೋಕ್ಷ್ಯತೋ ಮಾಯಿ-ಭಿಕ್ಷೂನ್ || ೮ ||

ಯೇಽಮುಂ ಭಾವಂ ಭಜಂತೇ ಸುರ-ಮುಖ-ಸುಜನಾರಾಧಿತಂ ತೇ ತೃತೀಯಂ
ಭಾಸಂತೇ ಭಾಸುರೈಸ್ತೇ ಸಹ-ಚರ-ಚಲಿತೈಶ್ಚಾಮರೈಶ್ಚಾರು-ವೇಷಾಃ |
ವೈಕುಂಠೇ ಕಂಠ-ಲಗ್ನ-ಸ್ಥಿರ-ಶುಚಿ-ವಿಲಸತ್-ಕಾಂತಿ-ತಾರುಣ್ಯ-ಲೀಲಾ-
ಲಾವಣ್ಯಾಪೂರ್ಣ-ಕಾಂತಾ-ಕುಚ-ಭರ-ಸು-ಲಭಾಶ್ಲೇಷ-ಸಮ್ಮೋದ-ಸಾಂದ್ರಾಃ || ೯ ||

ಆನಂದಾನ್ ಮಂದ-ಮಂದಾ ದದತಿ ಹಿ ಮರುತಃ ಕುಂದ-ಮಂದಾರ-ನಂದ್ಯಾ-
ವರ್ತಾಮೋದಾನ್ ದಧಾನಾ ಮೃದು-ಪದಮುದಿತೋದ್-ಗೀತಕೈಃ ಸುಂದರೀಣಾಮ್ |
ವೃಂದೈರಾ-ವಂದ್ಯ-ಮುಕ್ತೇಂದ್ವಹಿಮ-ಗು-ಮದನಾಹೀಂದ್ರ-ದೇವೇಂದ್ರ-ಸೇವ್ಯೇ
ಮೌಕುಂದೇ ಮಂದಿರೇಽಸ್ಮಿನ್ನವಿರತಮುದಯನ್ಮೋದಿನಾಂ ದೇವ-ದೇವ || ೧೦ ||

ಉತ್ತಪ್ತಾಽತ್ಯುತ್ಕಟ-ತ್ವಿಟ್ ಪ್ರಕಟ-ಕಟಕಟ-ಧ್ವಾನ-ಸಂ-ಘಟ್ಟನೋದ್ಯದ್-
ವಿದ್ಯುದ್-ವ್ಯೂಢ-ಸ್ಫುಲಿಂಗ-ಪ್ರಕರ-ವಿ-ಕಿರಣೋತ್-ಕ್ವಾಥಿತೇ ಬಾಧಿತಾಂಗಾನ್ |
ಉದ್-ಗಾಢಂ ಪಾತ್ಯಮಾನಾ ತಮಸಿ ತತ-ಇತಃ ಕಿಂಕರೈಃ ಪಂಕಿಲೇ ತೇ
ಪಂಕ್ತಿರ್ಗ್ರಾವ್ಣಾಂ ಗರಿಮ್ಣಾ ಗ್ಲಪಯತಿ ಹಿ ಭವದ್-ದ್ವೇಷಿಣೋ ವಿದ್ವದಾದ್ಯ || ೧೧ ||

ಅಸ್ಮಿನ್ನಸ್ಮದ್-ಗುರೂಣಾಂ ಹರಿ-ಚರಣ-ಚಿರ-ಧ್ಯಾನ-ಸನ್ಮಂಗಲಾನಾಂ
ಯುಷ್ಮಾಕಂ ಪಾರ್ಶ್ವ-ಭೂಮಿಂ ಧೃತ-ರಣರಣಿಕ-ಸ್ವರ್ಗಿ-ಸೇವ್ಯಾಂ ಪ್ರಪನ್ನಃ |
ಯಸ್ತೂದಾಸ್ತೇ ಸ ಆಸ್ತೇಽಧಿ-ಭವಮ-ಸುಲಭ-ಕ್ಲೇಶ-ನಿರ್ಮೋಕಮಸ್ತ-
ಪ್ರಾಯಾನಂದಂ ಕಥಂಚಿನ್ನ ವಸತಿ ಸತತಂ ಪಂಚ-ಕಷ್ಟೇಽತಿಕಷ್ಟೇ || ೧೨ ||

ಕ್ಷುತ್-ಕ್ಷಾಮಾನ್ ರೂಕ್ಷ-ರಕ್ಷೋ-ರದ-ಖರ-ನಖರ-ಕ್ಷುಣ್ಣ-ವಿಕ್ಷೋಭಿತಾಕ್ಷಾನ್
ಆ-ಮಗ್ನಾನಂಧ-ಕೂಪೇ ಕ್ಷುರ-ಮುಖ-ಮುಖಿರೈಃ ಪಕ್ಷಿಭಿರ್ವಿ-ಕ್ಷತಾಂಗಾನ್ |
ಪೂಯಾಸೃಙ್-ಮೂತ್ರ-ವಿಷ್ಠಾ-ಕೃಮಿ-ಕುಲ-ಕಲಿಲೇ ತತ್-ಕ್ಷಣ-ಕ್ಷಿಪ್ತ-ಶಕ್ತ್ಯಾ-
ದ್ಯಸ್ತ್ರ-ವ್ರಾತಾರ್ದಿತಾಂಸ್ತ್ವದ್-ದ್ವಿಷ ಉಪ-ಜಿಹತೇ ವಜ್ರ-ಕಲ್ಪಾ ಜಳೂಕಾಃ || ೧೩ ||

ಮಾತರ್ಮೇ ಮಾತರಿಶ್ವನ್ ಪಿತರತುಲ-ಗುರೋ ಭ್ರಾತರಿಷ್ಟಾಪ್ತ-ಬಂಧೋ
ಸ್ವಾಮಿನ್ ಸರ್ವಾಂತರಾತ್ಮನ್ನಜರ ಜರಯಿತರ್ಜನ್ಮ-ಮೃತ್ಯಾಮಯಾನಾಮ್ |
ಗೋವಿಂದೇ ದೇಹಿ ಭಕ್ತಿಂ ಭವತಿ ಚ ಭಗವನ್ನೂರ್ಜಿತಾಂ ನಿರ್ನಿಮಿತ್ತಾಂ
ನಿರ್ವ್ಯಾಜಾಂ ನಿಶ್ಚಲಾಂ ಸದ್-ಗುಣ-ಗಣ-ಬೃಹತೀಂ ಶಾಶ್ವತೀಮಾಶು ದೇವ || ೧೪ ||

ವಿಷ್ಣೋರತ್ಯುತ್ತಮ-ತ್ವಾದಖಿಲ-ಗುಣ-ಗಣೈಸ್ತತ್ರ ಭಕ್ತಿಂ ಗರಿಷ್ಟಾಂ
ಆಶ್ಲಿಷ್ಟೇ ಶ್ರೀ-ಧರಾಭ್ಯಾಮಮುಮಥ ಪರಿ-ವಾರಾತ್ಮನಾ ಸೇವಕೇಷು |
ಯಃ ಸಂ-ಧತ್ತೇ ವಿರಿಂಚ-ಶ್ವಸನ-ವಿಹಗ-ಪಾನಂತ-ರುದ್ರೇಂದ್ರ-ಪೂರ್ವೇ-
ಷ್ವಾಧ್ಯಾಯಂಸ್ತಾರತಮ್ಯಂ ಸ್ಫುಟಮವತಿ ಸದಾ ವಾಯುರಸ್ಮದ್-ಗುರುಸ್ತಮ್ || ೧೫ ||

ತತ್ತ್ವ-ಜ್ಞಾನ್ ಮುಕ್ತಿ-ಭಾಜಃ ಸುಖಯಸಿ ಹಿ ಗುರೋ ಯೋಗ್ಯತಾ-ತಾರತಮ್ಯಾತ್
ಆ-ಧತ್ಸೇ ಮಿಶ್ರ-ಬುದ್ಧೀಂಸ್ತ್ರಿದಿವ-ನಿರಯ-ಭೂ-ಗೋ-ಚರಾನ್ ನಿತ್ಯ-ಬದ್ಧಾನ್ |
ತಾಮಿಸ್ರಾಂಧಾದಿಕಾಖ್ಯೇ ತಮಸಿ ಸು-ಬಹುಲಂ ದುಃಖಯಸ್ಯನ್ಯಥಾ-ಜ್ಞಾನ್
ವಿಷ್ಣೋರಾಜ್ಞಾಭಿರಿತ್ಥಂ ಶ್ರುತಿ-ಶತಮಿತಿ-ಹಾಸಾದಿ ಚಾಽಕರ್ಣಯಾಮಃ || ೧೬ ||

ವಂದೇಽಹಂ ತಂ ಹನೂಮಾನಿತಿ ಮಹಿತ-ಮಹಾ-ಪೌರುಷೋ ಬಾಹು-ಶಾಲೀ
ಖ್ಯಾತಸ್ತೇಽಗ್ರ್ಯೋಽವ-ತಾರಃ ಸಹಿತ ಇಹ ಬಹು-ಬ್ರಹ್ಮ-ಚರ್ಯಾದಿ-ಧರ್ಮೈಃ |
ಸ-ಸ್ನೇಹಾನಾಂ ಸಹಸ್ವಾನಹರಹರಿತಂ ನಿರ್ದಹನ್ ದೇಹ-ಭಾಜಾಂ
ಅಂಹೋ-ಮೋಹಾಪಹೋ ಯಃ ಸ್ಪೃಹಯತಿ ಮಹತೀಂ ಭಕ್ತಿಮದ್ಯಾಪಿರಾಮೇ || ೧೭ ||

ಪ್ರಾಕ್ ಪಂಚಾಶತ್-ಸಹಸ್ರೈರ್ವ್ಯವಹಿತಮಹಿತಂ ಯೋಜನೈಃ ಪರ್ವತಂ ತ್ವಂ
ಯಾವತ್ ಸಂ-ಜೀವನಾದ್ಯೌಷಧ-ನಿಧಿಮಧಿಕ-ಪ್ರಾಣ ಲಂಕಾಮನೈಷೀಃ |
ಅದ್ರಾಕ್ಷೀದುತ್-ಪತಂತಂ ತತ ಉತ ಗಿರಿಮುತ್-ಪಾಟಯಂತಂ ಗೃಹೀತ್ವಾ
ಯಾಂತಂ ಖೇ ರಾಘವಾಂಘ್ರೌ ಪ್ರಣತಮಪಿ ತದೈಕ-ಕ್ಷಣೇ ತ್ವಾಂ ಹಿ ಲೋಕಃ || ೧೮ ||

ಕ್ಷಿಪ್ತಂ ಪಶ್ಚಾತ್ ಸ-ಲೀಲಂ ಶತಮತುಲ-ಮತೇ ಯೋಜನಾನಾಂ ಸ ಉಚ್ಚಃ
ತಾವದ್ ವಿಸ್ತಾರವಾಂಶ್ಚಾಪ್ಯುಪಲ-ಲವ ಇವ ವ್ಯಗ್ರ-ಬುದ್ಧ್ಯಾ ತ್ವಾಯಾಽತಃ |
ಸ್ವ-ಸ್ವ-ಸ್ಥಾನ-ಸ್ಥಿತಾತಿ-ಸ್ಥಿರ-ಶಕಲ-ಶಿಲಾ-ಜಾಲ-ಸಂಶ್ಲೇಷ-ನಷ್ಟ-
ಚ್ಛೇದಾಂಕಃ ಪ್ರಾಗಿವಾಭೂತ್ ಕಪಿ-ವರ-ವಪುಷಸ್ತೇ ನಮಃ ಕೌಶಲಾಯ || ೧೯ ||

ದೃಷ್ಟ್ವಾ ದುಷ್ಟಾಧಿಪೂರಃ ಸ್ಫುಟಿತ-ಕನಕ-ಸದ್-ವರ್ಮ-ಘೃಷ್ಟಾಸ್ಥಿ-ಕೂಟಂ
ನಿಷ್ಪಿಷ್ಟಂ ಹಾಟಕಾದ್ರಿ-ಪ್ರಕಟ-ತಟ-ತಟಾಕಾತಿ-ಶಂಕೋ ಜನೋಽಭೂತ್ |
ಯೇನಾಽಜೌ ರಾವಣಾರಿ-ಪ್ರಿಯ-ನಟನ-ಪಟುರ್ಮುಷ್ಟಿರಿಷ್ಟಂ ಪ್ರದೇಷ್ಟುಂ
ಕಿಂ ನೇಷ್ಟೇ ಮೇ ಸ ತೇಽಷ್ಟಾಪದ-ಕಟಕ-ತಟಿತ್-ಕೋಟಿ-ಭಾಮೃಷ್ಟ-ಕಾಷ್ಟಃ || ೨೦ ||

ದೇವ್ಯಾದೇಶ-ಪ್ರಣೀತಿ-ದ್ರುಹಿಣ-ಹರ-ವರಾವದ್ಯ-ರಕ್ಷೋ-ವಿಘಾತಾ-
ದ್ಯಾಸೇವೋದ್ಯದ್-ದಯಾರ್ದ್ರಃ ಸಹ-ಭುಜಮಕರೋದ್ ರಾಮ-ನಾಮಾ ಮುಕುಂದಃ |
ದುಷ್ಪ್ರಾಪೇ ಪಾರಮೇಷ್ಠ್ಯೇ ಕರ-ತರಮತುಲಂ ಮೂರ್ದ್ನಿ ವಿನ್ಯಸ್ಯ ಧನ್ಯಂ
ತನ್ವನ್ ಭೂಯಃ ಪ್ರಭೂತ-ಪ್ರಣಯ-ವಿಕಸಿತಾಬ್ಜೇಕ್ಷಣಸ್ತ್ವೇಕ್ಷಮಾಣಃ || ೨೧ ||

ಜಘ್ನೇ ನಿಘ್ನೇನ ವಿಘ್ನೋ ಬಹುಲ-ಬಲ-ಬಕ-ಧ್ವಂಸನಾದ್ ಯೇನ ಶೋಚದ್-
ವಿಪ್ರಾನು-ಕ್ರೋಶ-ಪಾಶೈರಸು-ವಿಧೃತಿ-ಸುಖಸ್ಯೈಕ-ಚಕ್ರಾ-ಜನಾನಾಮ್ |
ತಸ್ಮೈ ತೇ ದೇವ ಕುರ್ಮಃ ಕುರು-ಕುಲ-ಪತಯೇ ಕರ್ಮಣಾ ಚ ಪ್ರಣಾಮಾನ್
ಕಿರ್ಮೀರಂ ದುರ್ಮತೀನಾಂ ಪ್ರಥಮಮಥ ಚ ಯೋ ನರ್ಮಣಾ ನಿರ್ಮಮಾಥ || ೨೨ ||

ನಿರ್ಮೃದ್ನನ್ನತ್ಯಯತ್ನಂ ವಿಜರ-ವರ ಜರಾ-ಸಂಧ-ಕಾಯಾಸ್ಥಿ-ಸಂಧೀನ್
ಯುದ್ಧೇ ತ್ವಂ ಸ್ವಧ್ವರೇ ವಾ ಪಶುಮಿವ ದಮಯನ್ ವಿಷ್ಣು-ಪಕ್ಷ-ದ್ವಿಡೀಶಮ್ |
ಯಾವತ್ ಪ್ರತ್ಯಕ್ಷ-ಭೂತಂ ನಿಖಿಲ-ಮಖ-ಭುಜಂ ತರ್ಪಯಾಮಾಸಿಥಾಸೌ
ತಾವತ್ಯಾಽಯೋಜಿ ತೃಪ್ತ್ಯಾ ಕಿಮು ವದ ಭಗವನ್ ರಾಜ-ಸೂಯಾಶ್ವ-ಮೇಧೇ || ೨೩ ||

ಕ್ಷ್ವೇಲಾಕ್ಷೀಣಾಟ್ಟ-ಹಾಸಂ ತವ ರಣಮರಿ-ಹನ್ನುದ್-ಗದೋದ್ದಾಮ-ಬಾಹೋಃ
ಬಹ್ವಕ್ಷೋಹಿಣ್ಯನೀಕ-ಕ್ಷಪಣ-ಸು-ನಿಪುಣಂ ಯಸ್ಯ ಸರ್ವೋತ್ತಮಸ್ಯ |
ಶುಶ್ರೂಷಾರ್ಥಂ ಚಕರ್ಥ ಸ್ವಯಮಯಮಿಹ ಸಂ-ವಕ್ತುಮಾನಂದ-ತೀರ್ಥ-
ಶ್ರೀಮನ್ನಾಮನ್ ಸಮರ್ಥಸ್ತ್ವಮಪಿ ಹಿ ಯವಯೋಃ ಪಾದ-ಪದ್ಮಂ ಪ್ರ-ಪದ್ಯೇ || ೨೪ ||

ದ್ರುಹ್ಯಂತೀಂ ಹೃದ್-ರುಹಂ ಮಾಂ ದ್ರುತಮನಿಲ ಬಲಾದ್ ದ್ರಾವಯಂತೀಮವಿದ್ಯಾ-
ನಿದ್ರಾಂ ವಿದ್ರಾವ್ಯ ಸದ್ಯೋ-ರಚನ-ಪಟುಮಥಾಽಪಾದ್ಯ ವಿದ್ಯಾ-ಸಮುದ್ರ |
ವಾಗ್-ದೇವೀ ಸಾ ಸು-ವಿದ್ಯಾ-ದ್ರವಿಣ-ದ ವಿದಿತಾ ದ್ರೌಪದೀ-ರುದ್ರ-ಪತ್ನ್ಯಾ
ದ್ಯುದ್-ರಿಕ್ತಾ ದ್ರಾಗಭದ್ರಾದ್ ರಹಯತು ದಯಿತಾ ಪೂರ್ವ-ಭೀಮಾಽಜ್ಞಯಾ ತೇ || ೨೫ ||

ಯಾಭ್ಯಾಂ ಶುಶ್ರೂಷುರಾಸೀಃ ಕುರು-ಕುಲ-ಜನನೇ ಕ್ಷತ್ರ-ವಿಪ್ರೋದಿತಾಭ್ಯಾಂ
ಬ್ರಹ್ಮಭ್ಯಾಂ ಬೃಂಹಿತಾಭ್ಯಾಂ ಚಿತಿ-ಸುಖ-ವಪುಷಾ ಕೃಷ್ಣ-ನಾಮಾಸ್ಪದಾಭ್ಯಾಮ್ |
ನಿರ್ಭೇದಾಭ್ಯಾಂ ವಿಶೇಷಾದ್ ದ್ವಿ-ವಚನ-ವಿಷಯಾಭ್ಯಾಮ-ಮೂಭ್ಯಾಮುಭಾಭ್ಯಾಂ
ತುಭ್ಯಂ ಚ ಕ್ಷೇಮ-ದೇಭ್ಯಃ ಸರಸಿಜ-ವಿಲಸಲ್ಲೋಚನೇಭ್ಯೋ ನಮೋಽಸ್ತು || ೨೬ ||

ಗಚ್ಛನ್ ಸೌಗಂಧಿಕಾರ್ಥಂ ಪಥಿ ಸ ಹನುಮತಃ ಪುಚ್ಛಮಚ್ಛಸ್ಯ ಭೀಮಃ
ಪ್ರೋದ್ದರ್ತುಂ ನಾಶಕತ್ ಸ ತ್ವಮುಮುರು-ವಪುಷಾ ಭೀಷಯಾಮಾಸ ಚೇತಿ |
ಪೂರ್ಣ-ಜ್ಞಾನೌಜಸೋಸ್ತೇ ಗುರು-ತಮ ವಪುಷೋಃ ಶ್ರೀಮದಾನಂದ-ತೀರ್ಥ-
ಕ್ರೀಡಾ-ಮಾತ್ರಂ ತದೇತತ್ ಪ್ರಮದ-ದ ಸು-ಧೀಯಾಂ ಮೋಹಕ ದ್ವೇಷ-ಭಾಜಾಮ್ || ೨೭ ||

ಬಹ್ವೀಃ ಕೋಟೀರಟೀಕಃ ಕುಟಿಲ-ಕಟು-ಮತೀನುತ್ಕಟಾಟೋಪ-ಕೋಪಾನ್
ದ್ರಾಕ್ ಚ ತ್ವಂ ಸ-ತ್ವರತ್ವಾಚ್ಛರಣ-ದ ಗದಯಾ ಪೋಥಯಾಮಾಸಿಥಾರೀನ್ |
ಉನ್ಮಥ್ಯಾತಥ್ಯ-ಮಿಥ್ಯಾತ್ವ-ವಚನ-ವಚನಾತ್-ಪಥ-ಸ್ಥಾಂಸ್ತಥಾಽನ್ಯಾನ್
ಪ್ರಾಯಚ್ಛಃ ಸ್ವ-ಪ್ರಿಯಾಯೈ ಪ್ರಿಯ-ತಮ-ಕುಸುಮಂ ಪ್ರಾಣ ತಸ್ಮೈ ನಮಸ್ತೇ || ೨೮ ||

ದೇಹಾದುತ್-ಕ್ರಾಮಿತಾನಾಮಧಿ-ಪತಿರಸತಾಮಕ್ರಮಾದ್ ವಕ್ರ-ಬುದ್ಧಿಃ
ಕ್ರುದ್ಧಃ ಕ್ರೋಧೈಕ-ವಶ್ಯಃ ಕ್ರಿಮಿರಿವ ಮಣಿಮಾನ್ ದುಷ್ಕೃತೀ ನಿಷ್ಕ್ರಿಯಾರ್ಥಮ್ |
ಚಕ್ರೇ ಭೂ-ಚಕ್ರಮೇತ್ಯ ಕ್ರಕಚಮಿವ ಸತಾಂ ಚೇತಸಃ ಕಷ್ಟ-ಶಾಸ್ತ್ರಂ
ದುಸ್ತರ್ಕಂ ಚಕ್ರ-ಪಾಣೇರ್ಗುಣ-ಗಣ-ವಿರಹಂ ಜೀವ-ತಾಂ ಚಾಧಿ-ಕೃತ್ಯ || ೨೯ ||

ತದ್-ದುಷ್ಪ್ರೇಕ್ಷಾನು-ಸಾರಾತ್ ಕತಿಪಯ-ಕು-ನರೈರಾದೃತೋಽನ್ಯೈರ್ವಿಸೃಷ್ಟೋ
ಬ್ರಹ್ಮಾಹಂ ನಿರ್ಗುಣೋಽಹಂ ವಿತಥಮಿದಮಿತಿ ಹ್ಯೇಷ ಪಾಷಂಡ-ವಾದಃ |
ತದ್-ಯುಕ್ತ್ಯಾಭಾಸ-ಜಾಲ-ಪ್ರಸರ-ವಿಷ-ತರೂದ್ದಾಹ-ದಕ್ಷ-ಪ್ರಮಾಣ-
ಜ್ವಾಲಾ-ಮಾಲಾ-ಧರಾಗ್ನಿಃ ಪವನ ವಿ-ಜಯತೇ ತೇಽವತಾರಸ್ತೃತೀಯಃ || ೩೦ ||

ಆಕ್ರೋಶಂತೋ ನಿರಾಶಾ ಭಯ-ಭರ ವಿವಶ-ಸ್ವಾಶಯಾಶ್ಚಿನ್ನ-ದರ್ಪಾಃ
ವಾಶಂತೋ ದೇಶ-ನಾಶಸ್ತ್ವಿತಿ ಬತ ಕು-ಧಿಯಾಂ ನಾಶಮಾಶಾ ದಶಾಽಶು |
ಧಾವಂತೋಽಶ್ಲೀಲ-ಶೀಲಾ ವಿತಥ-ಶಪಥ-ಶಾಪಾಶಿವಾಃ ಶಾಂತ-ಶೌರ್ಯಾಃ
ತ್ವದ್-ವ್ಯಾಖ್ಯಾ-ಸಿಂಹ-ನಾದೇ ಸಪದಿ ದದೃಶಿರೇ ಮಾಯಿ-ಗೋಮಾಯವಸ್ತೇ || ೩೧ ||

ತ್ರಿಷ್ವಪ್ಯೇವಾವ-ತಾರೇಷ್ವರಿಭಿರಪ-ಘೃಣಂ ಹಿಂಸಿತೋ ನಿರ್ವಿಕಾರಃ
ಸರ್ವ-ಜ್ಞಃ ಸರ್ವ-ಶಕ್ತಿಃ ಸಕಲ-ಗುಣ-ಗಣಾಪೂರ್ಣ-ರೂಪ-ಪ್ರಗಲ್ಭಃ |
ಸ್ವಚ್ಛಃ ಸ್ವಚ್ಛಂದ-ಮೃತ್ಯುಃ ಸುಖಯಸಿ ಸುಜನಂ ದೇವ ಕಿಂ ಚಿತ್ರಮತ್ರ
ತ್ರಾತಾ ಯಸ್ಯ ತ್ರಿ-ಧಾಮಾ ಜಗದುತ ವಶ-ಗಂ ಕಿಂಕರಾಃ ಶಂಕರಾದ್ಯಾಃ || ೩೨ ||

ಉದ್ಯನ್ಮಂದ-ಸ್ಮಿತ-ಶ್ರೀ-ಮೃದು ಮಧು-ಮಧುರಾಲಾಪ-ಪೀಯೂಷ-ಧಾರಾ-
ಪೂರಾಸೇಕೋಪ-ಶಾಂತಾಸುಖ-ಸು-ಜನ-ಮನೋ-ಲೋಚನಾಪೀಯಮಾನಮ್ |
ಸಂ-ದ್ರಕ್ಷ್ಯೇ ಸುಂದರಂ ಸಂ-ದುಹದಿಹ ಮಹದಾನಂದಮಾನಂದ-ತೀರ್ಥ
ಶ್ರೀಮದ್-ವಕ್ತ್ರೇಂದು-ಬಿಂಬಂ ದುರಿತ-ನುದುದಿತಂ ನಿತ್ಯದಾಽಹಂ ಕದಾ ನು || ೩೩ ||

ಪ್ರಾಚೀನಾಚೀರ್ಣ-ಪುಣ್ಯೋಚ್ಚಯ-ಚತುರ-ತರಾಚಾರತಶ್ಚಾರು-ಚಿತ್ತಾನ್
ಅತ್ಯುಚ್ಚಾಂ ರೋಚಯಂತೀಂ ಶ್ರುತಿ-ಚಿತ-ವಚನಾಂ ಶ್ರಾವಕಾಂಶ್ಚೋದ್ಯ-ಚುಂಚೂನ್ |
ವ್ಯಾಖ್ಯಾಮುತ್-ಖಾತ-ದುಃಖಾಂ ಚಿರಮುಚಿತ-ಮಹಾಚಾರ್ಯ ಚಿಂತಾ-ರತಾಂಸ್ತೇ
ಚಿತ್ರಾಂ ಸಚ್ಛಾಸ್ತ್ರ-ಕರ್ತಶ್ಚರಣ-ಪರಿಚರಾಂಛ್ರಾವಯಾಸ್ಮಾಂಶ್ಚ ಕಿಂಚಿತ್ || ೩೪ ||

ಪೀಠೇ ರತ್ನೋಪಕ್ಲಪ್ತೇ ರುಚಿರ-ರುಚಿ-ಮಣಿ-ಜ್ಯೋತಿಷಾ ಸನ್ನಿಷಣ್ಣಂ
ಬ್ರಹ್ಮಾಣಂ ಭಾವಿನಂ ತ್ವಾಂ ಜ್ವಲತಿ ನಿಜ-ಪದೇ ವೈದಿಕಾದ್ಯಾ ಹಿ ವಿದ್ಯಾಃ |
ಸೇವಂತೇ ಮೂರ್ತಿಮತ್ಯಃ ಸು-ಚರಿತ ಚರಿತಂ ಭಾತಿ ಗಂಧರ್ವ-ಗೀತಂ
ಪ್ರತ್ಯೇಕಂ ದೇವ-ಸಂಸತ್ಸ್ವಪಿ ತವ ಭಗವನ್ ನರ್ತಿತ-ದ್ಯೋ-ವಧೂಷು || ೩೫ ||

ಸಾನುಕ್ರೋಶೈರಜಸ್ರಂ ಜನಿ-ಮೃತಿ-ನಿರಯಾದ್ಯೂರ್ಮಿ-ಮಾಲಾವಿಲೇಽಸ್ಮಿನ್
ಸಂಸಾರಾಬ್ಧೌ ನಿಮಗ್ನಾಂಛರಣಮಶರಣಾನಿಚ್ಛತೋ ವೀಕ್ಷ್ಯ ಜಂತೂನ್ |
ಯುಷ್ಮಾಭಿಃ ಪ್ರಾರ್ಥಿತಃ ಸನ್ ಜಲ-ನಿಧಿ-ಶಯನಃ ಸತ್ಯವತ್ಯಾಂ ಮಹರ್ಷೇಃ
ವ್ಯಕ್ತಶ್ಚಿನ್ಮಾತ್ರ-ಮೂರ್ತಿರ್ನ ಖಲು ಭಗವತಃ ಪ್ರಾಕೃತೋ ಜಾತು ದೇಹಃ || ೩೬ ||

ಅಸ್ತ-ವ್ಯಸ್ತಂ ಸಮಸ್ತ-ಶ್ರುತಿ-ಗತಮಧಮೈ ರತ್ನ-ಪೂಗಂ ಯಥಾಽ೦ಧೈಃ
ಅರ್ಥಂ ಲೋಕೋಲಕೃತ್ಯೈ ಗುಣ-ಗಣ-ನಿಲಯಃ ಸೂತ್ರಯಾಮಾಸ ಕೃತ್ಸ್ನಮ್ |
ಯೋಽಸೌ ವ್ಯಾಸಾಭಿಧಾನಸ್ತಮಹಮಹರಹರ್ಭಕ್ತಿತಸ್ತತ್-ಪ್ರಸಾದಾತ್
ಸದ್ಯೋ ವಿದ್ಯೋಪಲಬ್ಧ್ಯೈ ಗುರು-ತಮಮಗುರುಂ ದೇವ-ದೇವಂ ನಮಾಮಿ || ೩೭ ||

ಆಜ್ಞಾಮನ್ಯೈರಧಾರ್ಯಾ ಶಿರಸಿ ಪರಿ-ಸರದ್-ರಶ್ಮಿ-ಕೋಟೀರ-ಕೋಟೌ
ಕೃಷ್ಣಸ್ಯಾಕ್ಲಿಷ್ಟ-ಕರ್ಮಾ ದಧದನು-ಸ್ರರಣಾದರ್ಥಿತೋ ದೇವ-ಸಂಘೈಃ |
ಭೂಮಾವಾಗತ್ಯ ಭೂಮನ್ನಸು-ಕರಮಕರೋರ್ಬ್ರಹ್ಮ-ಸೂತ್ರಸ್ಯ ಭಾಷ್ಯಂ
ದುರ್ಭಾಷ್ಯಂ ವ್ಯಸ್ಯ ದಸ್ಯೋರ್ಮಣಿಮತ ಉದಿತಂ ವೇದ-ಸದ್-ಯುಕ್ತಿಭಿಸ್ತ್ವಮ್ || ೩೮ ||

ಭೂತ್ವಾ ಕ್ಷೇತ್ರೇ ವಿಶುದ್ಧೇ ದ್ವಿಜ-ಗಣ-ನಿಲಯೇ ರೂಪ್ಯ-ಪೀಠಭಿಧಾನೇ
ತತ್ರಾಪಿ ಬ್ರಹ್ಮ-ಜಾತಿಸ್ತ್ರಿ-ಭುವನ-ವಿಶದೇ ಮಧ್ಯ-ಗೇಹಾಖ್ಯ-ಗೇಹೇ |
ಪಾರಿ-ವ್ರಾಜ್ಯಾಧಿ-ರಾಜಃ ಪುನರಪಿ ಬದರೀಂ ಪ್ರಾಪ್ಯ ಕೃಷ್ಣಂ ಚ ನತ್ವಾ
ಕೃತ್ವಾ ಭಾಷ್ಯಾಣಿ ಸಮ್ಯಗ್ ವ್ಯತನುತ ಚ ಭವಾನ್ ಭಾರತಾರ್ಥ-ಪ್ರಕಾಶಮ್ || ೩೯ ||

ವಂದೇ ತಂ ತ್ವಾ ಸು-ಪೂರ್ಣ-ಪ್ರಮತಿಮನು-ದಿನಾಸೇವಿತಂ ದೇವ-ವೃಂದೈಃ
ವಂದೇ ವಂದಾರುಮೀಶೇ ಶ್ರಿಯ ಉತ ನಿಯತಂ ಶ್ರೀಮದಾನಂದ-ತೀರ್ಥಮ್ |
ವಂದೇ ಮಂದಾಕಿನೀ-ಸತ್-ಸರಿದಮಲ-ಜಲಾಸೇಕ-ಸಾಧಿಕ್ಯ-ಸಂಗಂ
ವಂದೇಽಹಂ ದೇವ ಭಕ್ತ್ಯಾ ಭವ-ಭಯ-ದಹನಂ ಸಜ್ಜನಾನ್ ಮೋದಯಂತಮ್ || ೪೦ ||

ಸು-ಬ್ರಹ್ಮಣ್ಯಾಖ್ಯ-ಸೂರೇಃ ಸುತ ಇತಿ ಸು-ಭೃಶಂ ಕೇಶವಾನಂದ-ತೀರ್ಥ-
ಶ್ರೀಮತ್-ಪಾದಾಬ್ಜ-ಭಕ್ತಃ ಸ್ತುತಿಮಕೃತ ಹರೇರ್ವಾಯು-ದೇವಸ್ಯ ಚಾಸ್ಯ |
ತತ್-ಪಾದಾರ್ಚಾದರೇಣ ಗ್ರಥಿತ-ಪದ-ಲಸನ್ಮಾಲಯಾ ತ್ವೇತಯಾ ಯೇ
ಸಂರಾಧ್ಯಾಮೂ ನಮಂತಿ ಪ್ರತತ-ಮತಿ-ಗುಣಾ ಮುಕ್ತಿಮೇತೇ ವ್ರಜಂತಿ || ೪೧ ||

ಇತಿ ಶ್ರೀತ್ರಿವಿಕ್ರಮ-ಪಂಡಿತಾಚಾರ್ಯ-ವಿರಚಿತಾ ವಾಯು-ಸ್ತುತಿಃ ಸಮಾಪ್ತಾ ||
********

ಶ್ರೀನರಸಿಂಹ-ನಖ-ಸ್ತುತಿಃ (once again)

ಪಾಂತ್ವಸ್ಮಾನ್ ಪುರುಹೂತ-ವೈರಿ-ಬಲವನ್-ಮಾತಂಗ-ಮಾದ್ಯದ್-ಘಟಾ-
ಕುಂಭೋಚ್ಚಾದ್ರಿ-ವಿಪಾಟನಾಧಿಕ-ಪಟು-ಪ್ರತ್ಯೇಕ-ವಜ್ರಾಯಿತಾಃ |
ಶ್ರೀಮತ್-ಕಂಠೀರವಾಸ್ಯ-ಪ್ರತತ-ಸು-ನಖರಾ ದಾರಿತಾರಾತಿ-ದೂರ-
ಪ್ರಧ್ವಸ್ತ-ಧ್ವಾಂತ-ಶಾಂತ-ಪ್ರವಿತತ-ಮನಸಾ ಭಾವಿತಾ ನಾಕಿವೃಂದೈಃ (ಭೂರಿ-ಭಾಗೈಃ) || ೧ ||

ಲಕ್ಷ್ಮೀ-ಕಾಂತ ಸಮಂತತೋಽಪಿ ಕಲಯನ್ ನೈವೇಶಿತುಸ್ತೇ ಸಮಂ
ಪಶ್ಯಾಮ್ಯುತ್ತಮ-ವಸ್ತು ದೂರ-ತರತೋಽಪಾಸ್ತಂ ರಸೋ ಯೋಽಷ್ಟಮಃ |
ಯದ್-ರೋಷೋತ್ಕರ-ದಕ್ಷ-ನೇತ್ರ-ಕುಟಿಲ-ಪ್ರಾಂತೋತ್ಥಿತಾಗ್ನಿ-ಸ್ಫುರತ್-
ಖದ್ಯೋತೋಪಮ-ವಿಸ್ಫುಲಿಂಗ-ಭಸಿತಾ ಬ್ರಹ್ಮೇಶ-ಶಕ್ರೋತ್ಕರಾಃ || ೨ ||

|| ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತಂ ಶ್ರೀನರಸಿಂಹನಖಸ್ತುತಿಃ ಸಂಪೂರ್ಣಾ ||
****************


ಶ್ರೀ ಹರಿವಾಯುಸ್ತುತಿ   ಪುನಶ್ಚರಣದ ಮಹತ್ವ  ಮತ್ತು ವೈಜ್ಞಾನಿಕ ಪ್ರಭಾವ 

  ಪ್ರತಿ ಜೀವಿಯು ತನ್ನ ಜೀವಿತಕಾಲದಲ್ಲಿ ಪಂಚತತ್ವ ಗಳಾದ ಪೃಥ್ವಿ,  ಅಗ್ನಿ, ವಾಯು ಮತ್ತು ಆಕಾಶಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವಲಂಬಿಸಿ 
ಇರುತ್ತದೆ.  ಈ ತತ್ವಗಳು ಧರೆಯಿಂದ ಆಕಾಶದವರೆಗೆ ಸಾಂದ್ರತೆಯ ಆಧಾರದ ಮೇರೆಗೆ ಹರಡಿರುತ್ತವೆ. ಇವುಗಳಲ್ಲಿ ವಾಯುತತ್ವವು ಅತ್ಯಂತ ಪ್ರಭಾವಶಾಲಿ ಆದ ತತ್ವ, ಕಾರಣ ಅದು ಮಿಕ್ಕ ನಾಲ್ಕು ತತ್ವಗಳಲ್ಲೂ  ಮೇಳೈಸಿರುತ್ತದೆ. ಅಂತಹ ಸರ್ವಾಂತರ್ಯಾಮಿ ವಾಯುದೇವರ ಅನುಗ್ರಹವು ಪ್ರತಿ ಜೀವಿಗೆ ಬದುಕಲು ಅತ್ಯವಶ್ಯಕವಾಗಿದೆ. ವಾಯು ಮತ್ತು ಸೂರ್ಯನ ಬೆಳಕು ಮಾತ್ರ ಎಲ್ಲ ಕಡೆಗೆ ಪಸರಿಸಲು ಸಾಧ್ಯ. 
 ಮಾನವನ ಉಸಿರಾಟದಲ್ಲಿ  ಉಚ್ಛ್ವಾಸ ( Inhalation) ಮತ್ತು ನಿಶ್ವಾಸ (Exhalation ) ಕ್ರಿಯೆಗಳು ವಾಯುವಿನ ಸಹಾಯದಿಂದ ಎಲ್ಲ ಜೀವಕೋಶಗಳು ಬದುಕಲು ಸಾಧ್ಯವಾಗುತ್ತದೆ. ಶ್ವಾಸಕೋಶ ಸಂಬಂಧ ಕಾಯಿಲೆಗಳನ್ನು ಅದರ ಪರಿಣತ ವೈದ್ಯರು ಉಸಿರಾಟದ ವ್ಯಾಯಾಮ ವನ್ನು ಮಾಡಿಸಿ ರೋಗಿಗೆ ಉಪಶಮನ ನೀಡುತ್ತಾರೆ. 

    ಶ್ರೀ ಹರಿವಾಯುಸ್ತುತಿಯನ್ನು ಪ್ರತಿನಿತ್ಯ ಎತ್ತರದ ದ್ವನಿಯಲ್ಲಿ ಉಚ್ಛರಿಸುವುದರಿಂದ  ದೇಹದ ಎಲ್ಲ ಭಾಗಗಳು ಉದ್ಧೀಪನ ಗೊಂಡು ಆರೋಗ್ಯವೃದ್ಧಿ ಆಗುತ್ತದೆ. ವಾಯುದೇವರ ಮೂರೂ ಅವತಾರಗಳಲ್ಲಿ ಇಂತಹ ಚಮತ್ಕಾರವನ್ನು ನೋಡಬಹುದು. ಅವರ ಮೂರನೇ ಅವತಾರವಾದ ಶ್ರೀಮನ್ ಮಧ್ವಾಚಾರ್ಯರು (ಶ್ರೀಮದ್ ಆನಂದ ತೀರ್ಥರು ) ಮಾನವರ ಉದ್ಧಾರಕ್ಕೆ ತಮ್ಮ ವಿದ್ಯೆಯನ್ನು ಧಾರೆ ಎರೆದರು.     
    ಅವರ ಪಟ್ಟ ಶಿಷ್ಯರಾದ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರು ತಮ್ಮ ಗುರುಗಳ ಅಖಂಡ ಗುಣಗಳನ್ನು ವಾಯುಸ್ತುತಿಯ 41 shloka ಗಳಲ್ಲಿ ಸಮರ್ಪಿಸಿದರು. ಅದನ್ನು ಪರಿಗಣಿಸಿದ ಶ್ರೀಮದಾನಂದ ತೀರ್ಥರು, ಶ್ರೀ ಲಕ್ಷ್ಮೀ ನರಸಿಂಹ ದೇವರ ನಖಃ ಸ್ತುತಿಯ ಎರಡು shlokaಗಳನ್ನು ಆದಿ - ಅಂತ್ಯಗಳಲ್ಲಿ ಪಠಿಸಲು ಅನುಗ್ರಹಿಸಿದರು. ಈ 41 shlokaಗಳಲ್ಲಿ ವಾಯುದೇವರ ಸಾನ್ನಿಧ್ಯ ಹಾಗು ಅನುಗ್ರಹ ಗಳನ್ನು ಅನುಭವಿಸಬಹುದು. 
     ಅವತಾರತ್ರಯರಾದ ಶ್ರೀಮದಾನಂದ ತೀರ್ಥರ ಮತ್ತು ಅವತಾರ ಸೇವ್ಯವಾದ ಶ್ರೀಕೃಷ್ಣನ ರೂಪತ್ರಯವನ್ನು 
ವಾಯುಸ್ತುತಿಯಲ್ಲಿ ಕೊಂಡಾಡಿದ್ದಾರೆ. 

    ಶ್ರೀ ವಾಯುಸ್ತುತಿ ಪುನಶ್ಚರಣ ಅಂದರೆ ಎರಡು ನಖಃ ಸ್ತುತಿಯಾದಮೇಲೆ ಮೊದಲನೇ shlokaದಿಂದ 41 ನೇ shlokaದವರೆಗೆ ಪಠಿಸಿದರೆ ಅದು ನಮ್ಮ ಉಸಿರಾಟದ ಉಚ್ಛ್ವಾಸ ಅಂದರೇ ವಾಯುವನ್ನು ಶ್ವಾಸಕೋಶಕ್ಕೆ ಪಡೆಯುವ ಕ್ರಿಯೆ.  ಪ್ರತಿಯೊಂದು shlokaದಲ್ಲೂ ಪ್ರತ್ಯೇಕವಾದ ಪ್ರಭಾವ, ಶಕ್ತಿ ಮತ್ತು ವಾಯುದೇವರ ಅನುಪಮ ಮಾರ್ಗದರ್ಶನ ಕಾಣಬಹುದು. 
 ಉಚ್ಛ್ವಾಸ ಕ್ರಿಯೆಯಲ್ಲಿ ಕ್ರಮವಾಗಿ ವಾಕ್ ಸಿದ್ಧಿ , ಜ್ಞಾನ  ಸಿದ್ಧಿ , ಮಂತ್ರ  ಸಿದ್ಧಿ, ಸ್ನೇಹ ವೃದ್ಧಿ , ಸ್ತ್ರೀ ಸೌಖ್ಯ , ಪುತ್ರ ಸೌಖ್ಯ , ಶತ್ರು ನಾಶ , ದುಃಖ ನಿವಾರಣೆ , ಹರಿ ಭಕ್ತಿ ಸಿದ್ಧಿ , ಮೋಕ್ಷ ಮಾರ್ಗ , ಹೀಗೆ ಎಲ್ಲ shlokaಗಳಲ್ಲೂ ವೈವಿಧ್ಯ ಅನುಗ್ರಹವಿದೆ. 

   ಪುನಶ್ಚರಣದ ಎರಡನೇ ಹಂತದಲ್ಲಿ shlokaಗಳನ್ನು ಹಿಮ್ಮುಖ ಅನುಕ್ರಮದಲ್ಲಿ ಅಂದರೇ 41 ರಿಂದ 14 ನೆೇ shlokaದವರೆಗೆ ಪಠಿಸಬೇಕು. ಇದು ನಮ್ಮ ಉಸಿರಾಟದ ನಿಶ್ವಾಸವನ್ನು ಸೂಚಿಸುತ್ತದೆ. ಇದರಲ್ಲಿ ನಮ್ಮ ಋಣಾತ್ಮಕ ಗುಣಗಳನ್ನು ಹೊರಹಾಕುತ್ತೇವೆ. 
    ಪುನಶ್ಚರಣದ ಅಂತಿಮ ಹಂತದಲ್ಲಿ 1 ರಿಂದ 41 slokaಗಳನ್ನು ಪಠಿಸಿ ವಾಯುದೇವರ ಧನಾತ್ಮಕ ಶಕ್ತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. 

    ಶ್ರೀ ಹರಿವಾಯುಸ್ತುತಿಯ ಪುನಶ್ಚರಣದ ಸಕಲ ಶಕ್ತಿಗಳು ವೃದ್ಧಿಯಾಗಿ, ಯಾವುದೇ ರೋಗದ ವೈರಾಣುಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. 
 ರೋಗ ನಿರೋಧಕ ಶಕ್ತಿಯ ಸಂಚಯವಾಗುತ್ತದೆ. 
|| ಹರಿಸರ್ವೋತ್ತಮ ವಾಯುಜೀವೋತ್ತಮ ||

    { ಸ್ವಂತ ಚಿಂತನೆ } ಡಾ. ಗುರುರಾಜ ಏರಿ 
*************

[2:33 PM, 4/20/2020] Prasad Karpara Group: ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯ ವಿರಚಿತಾ
🙏 ಹರಿವಾಯು ಸ್ತುತಿಃ🙏
ಮೂಲಶ್ಲೋಕಗಳು, ತಾತ್ಪರ್ಯ, ವಿಶೇಷಾಂಶಗಳೊಂದಿಗೆ 

ಹರಿವಾಯುಸ್ತುತಿ ಎಂಬ ಈ ಹೆಸರೇ ಹರಿ ಮತ್ತು ವಾಯುಗಳನ್ನು ಸ್ತುತಿಸುವುದೇ ಈ ಕೃತಿಯ ಉದ್ದೇಶ ಎಂದು ತಿಳಿಸುತ್ತಿದೆ.‌ಹರಿ- ವಾಯು ಎಂಬ ಈ ಜೋಡಿಯು ದೈವ ಹಾಗೂ ಗುರುಗಳ ಅನ್ಯೋನ್ಯತೆಯನ್ನು ಬಿಂಬಿಸುತ್ತದೆ. ಗುರ್ವನುಗ್ರಹ ದೈವಾನುಗ್ರಹಗಳು ಸಾಧಕನಿಗೆ ಅತ್ಯಂತ ಅವಶ್ಯವಾದವುಗಳು. ಅದನ್ನು ಮಹಿಮೆಯ ಮೂಲಕ ಭಕ್ತಿ- ನಿಷ್ಠೆ ಗಳನ್ನು ಧೃಡಗೊಳಿಸುವ ಕೆಲಸ ಕೃತಿಯಿಂದ ಸರಾಗವಾಗಿ ಸಾಗಿದೆ ಎನ್ನಬಹುದು. 

ಈ ಕೃತಿಯನ್ನು ರಚಿಸಿದವರು ತ್ರಿವಿಕ್ರಮ‌ಪಂಡಿತಾಚಾರ್ಯರು , ಮಹಾವಿದ್ವಾಂಸರು ಎಂಬ ಹಿನ್ನೆಲೆಯೊಂದಿಗೆ , ಮಧ್ವರನ್ನು ನೇರ ಕಂಡವರು ಮೊದಲು ಅದ್ವೈತದಿಗ್ದಂತಿಗಳಾಗಿದ್ದು ಪ್ರಖ್ಯಾತ ವಿಮರ್ಶಕರಾಗಿದ್ದವರು. ವಾದ -ವಿವಾದಗಳ ಅನಂತರ ಸತ್ಯದ ನಿಚ್ಚಳತೆ ಇವರಿಗೆ ಕೆಚ್ಚೆದೆ ಮೂಡಿಸಿತು.ಹೀಗಾಗಿ ಮಾಧ್ವಸಿದ್ದಾಂತವನ್ನು ಒಪ್ಪಿಕೊಂಡರು.‌ಹೀಗಾಗಿ ತ್ರಿವಿಕ್ರಮ ಪಂಡಿತಾಚಾರ್ಯರು ಭಾವುಕರಾಗದೆ ವಸ್ತುಸ್ಥಿತಿಯ ಅನ್ವೇಷಕರಾಗಿ ಮೆರೆದರು. ಇಂತಹ ಸಮಕಾಲೀನ ವಿಮರ್ಶಕರು- ಪ್ರತಿಪಕ್ಷ ಧುರೀಣರು ಮಾಧ್ವಸಿದ್ದಾಂತವನ್ನು ಒಪ್ಪಿಕೊಂಡರು ಎನ್ನುವುದು ಮಾಧ್ವಶಾಸ್ತ್ರದ ಪ್ರತಿಷ್ಠೆಯೇ ಸರಿ! ಹೀಗಾಗಿ ಇದೊಂದು ಅನುಭಾವಿಕೃತಿ. ಆದ್ದರಿಂದಲೇ ಏಳು ಶತಮಾನಗಳು ಮುಗಿದರೂ ಈ ಸ್ತುತಿ ವೈಭವದಲ್ಲಿ ಏಳು- ಬೀಳುಗಳು ಆರ್ಭಿವಿಸಲಿಲ್ಲ..

ವಿಮತೀಯರಾದರೂ ವಿಮರ್ಶಕರಾಗಿದ್ದು ಮೆರೆದ ತ್ರಿವಿಕ್ರಮರು ಕೃತಿಯನ್ನು ಎಲ್ಲರೂ ಒಪ್ಪಿದರು. ಗೃಹಸ್ಥ ರಂತೆ ಸಂನ್ಯಾಸಿಗಳೂ ಕೂಡ ಇದರ ಪಾರಾಯಣ- ಪುನಶ್ಚರಣೆಗಳನ್ನು ಇಟ್ಟುಕೊಂಡಿದ್ದಾರೆ. ವಾಯುಸ್ತುತಿಯನ್ನು ತಿಳಿಯದವರು ಮಾಧ್ವರೇ ಅಲ್ಲಾ! ಅನ್ನುವಷ್ಟರ ಮಟ್ಟಿಗೆ ಈ ಕೃತಿ ಜನ ಮನದಲ್ಲಿ ಸೇರಿಹೋಗಿದೆ.
ಇಷ್ಟೆಲ್ಲ ಮಹಿಮೆ ಕಾರಣ ಎಂದರೆ......
 1 ಇದರ ಆವಿರ್ಭಾವಪ್ರಸಂಗ
2 ವಾಯುದೇವರ ಅಂಗೀಕಾರಮುದ್ರೆ
3 ಅದರ ಫಲನೀಡುವ ಶಕ್ತಿ
4 ಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾಗುವ ಸಕಲಗುಣಗಳ ಸಂಕಲನ
5 ಯತಿಶ್ರೇಷ್ಠರಿಂದ ಮುಕ್ತಠಂದ ಪ್ರಶಂಸೆ
6 ಪ್ರತಿಪಾದ್ಯ ದೇವತೆಯ ವೈಭವ

ಆವಿರ್ಭಾವ ಪ್ರಸಂಗ

ಸಾಮಾನ್ಯವಾಗಿ ಕವಿಗಳು ತಮಗೆ ಮೆಚ್ಚುಗೆಯಾದ ವಿಚಾರವನ್ನು ಒಂದೆಡೆ ಕುಳಿತು ವಿವರಿಸುತ್ತಾ ಕಲ್ಪನೆಗಳನ್ನು ಸೇರಿಸುತ್ತಾ ಹೋಗುತ್ತಾರೆ.‌ಹೀಗಾದಾಗ ಕವಿಯ ಮೇಲಿನ ಪ್ರೀತಿಯಿಂದಲೂ, ಕಲ್ಪನೆಗಳ ರೋಚಕತೆಯಿಂದಲೋ , ರಾಜಾಶ್ರಯದಿಂದಲೋ , ಆ ಕೃತಿ ಪ್ರಸಿದ್ದವಾಗುತ್ತದೆ. ಕಾಲಕಳೆದಂತೆ ಕಣ್ಮರೆಯಾಗುತ್ತದೆ. ಅಥವಾ ಕೆಲವು ವರ್ಗಕ್ಕೆ ಸೀಮಿತವಾಗುತ್ತದೆ..
ಆದರೆ ವಾಯುಸ್ತುತಿ ಕಲ್ಪನೆ- ರಾಜಾಶ್ರಯ ಆಧಾರದಂದ ಬಂದುದಲ್ಲ ಆಚಾರ್ಯ ಮಧ್ವರು ಭಗವಂತನನ್ನು ಆರಾಧಿಸುತ್ತಿರುವಾಗ ಈ ತ್ರಿವಿಕ್ರಮ ಪಂಡಿತಾಚಾರ್ಯರು ಇಣುಕಿ ನೋಡಿದರಂತೆ,ಮಧ್ವಾಚಾರ್ಯರು ರಾಮ- ಕೃಷ್ಣ- ವೇದವ್ಯಾಸರನ್ನು ಆರಾಧಿಸುತ್ತಿದ್ದರು. ಇದನ್ನು ಕಂಡ ತ್ರಿವಿಕ್ರಮರ ಅನುಭವ ಪದ್ಯರೂಪದಲ್ಲಿ ಹೊರಹೊಮ್ಮಿತು. ಹೀಗಾಗಿ ತ್ರಿವಿಕ್ರಮರ ಪಾಂಡಿತ್ಯ ಪದಬಂದ ರೂಪ ಪದ್ಯಕ್ಕೆ ಕಾರಣವಾದರೆ, ಅನುಭವವೇ ವಸ್ತುವಿಷಯವಾಯಿತು, ಹೀಗಾಗಿ ತ್ರಿವಿಕ್ರಮರಿಂದ ಹೊರಹೊಮ್ಮಿದ ಈ ಕೃತಿ ಸತ್ಯದ ಪ್ರತಿ ಫಲನವಾಗಿ ಉಳಿಯಿತು. ಹೀಗಾಗಿ ಇದು ಭಕ್ತರ ದೀಕ್ಷಾಶ್ಲೋಕವಾಗಿ ನಿರೂಪಿತವಾಗಿದೆ.‌ಮಾಧ್ವದೀಕ್ಷೆಯ ಪ್ರಭೋದಕವಾಗಿದೆ. ಇದರ ಆವಿರ್ಭಾವನ್ನು ಸೂಚಿಸುವ ಶ್ಲೋಕಗಳು ಹೀಗಿವೆ....

ಅದ್ರಾಕ್ಷೀತ್ ತ್ರೀಣಿ ರೂಪಾಣಿ ಕದಾಚಿತ್ ಬಹುಭಾಗ್ಯವಾನ್ ,ಶ್ರೀಮದಾಚಾರ್ಯ ವರ್ಯಾಣಾಂ ತಥಾ ರಾಮಾಸ್ಯ ಕೃಷ್ಣಯೋಃ ತತ್ರಾಪಿ ಗುರುಭಿಃ ಸೇವ್ಯಮಾನಾನಿ ಪರಮಾದರತ್ ಪರಮಾನಂದಮಗ್ನೋsಸೌ ಚಕ್ರೇ ವಾಯುಸ್ತುತ್ತಿಃ ಸುಧೀಃ

ವಾಯುದೇವರ ಅಂಗೀಕಾರ ಮುದ್ರೆ

ಆವಿರ್ಭಾವವೇ ಅನುಭವದಿಂದ ಹೊರಹೊಮ್ಮಿದಂತೆ ಇದರ ಆಧ್ಯಾತ್ಮತೆಗೆ ಮತ್ತೊಂದು ಗರಿಮೂಡಿದುದು ವಾಯುದೇವರ ಅಂಗೀಕಾರದ ಮುದ್ರೆಯಿಂದ ಸ್ತುತಿಯನ್ನು ರಚಿಸಿದ ತ್ರಿವಿಕ್ರಮ ಪಂಡಿತರು ಅದನ್ನು ದಾಖಲಿಸಿ ಮಧ್ವಾಚಾರ್ಯರ ಪರಿಶೀಲನೆಗೆ ಒಪ್ಪಿಸಿದರಂತೆ ಮಧ್ವಾಚಾರ್ಯರಂತೂ ಎಂದೂ ಎಲ್ಲೂ ಅಸತ್ಯದ ಪ್ರಶಂಸೆಯನ್ನು ಅಪ್ರಾಮಾಣಿಕ ವಿಷಯವನ್ನು ಸಹಿಸಿದವರಲ್ಲ. ಅವರು ಇದು ಪರಿಶುದ್ದವಾಗಿದೆ.‌ಇದು ಭಗವಂತನಿಗೆ ಪ್ರೀತಿಯಾಗುತ್ತದೆ ಎಂದು ಸಮ್ಮತಿಸಿ ಇದರೊಂದಿಗೆ ವಿಷ್ಣುವನ್ನೇ ಸ್ತುತಿಸುವ ಸ್ತೋತ್ರವನ್ನು ರಚಿಸಿ ಸೇರಿಸಿದರಂತೆ. ಹೀಗಾಗಿ ಜೀವೋತ್ತಮರ ಅಂಗೀಕಾರ ಮುದ್ರೆಯೊಂದಿಗೆ, ವಿಷ್ಣುಸ್ತುತಿಯ ರಚನೆಯೂ ಸೇರಿ ಇದು ಭಗವಂತನಿಗೆ ನೇರ ಸೇರುವಂತೆ ಆಯಿತು.‌ತ್ರಿವಿಕ್ರಮರು ರಚಿಸಿದ ಪ್ರತಿಶ್ಲೋಕವೂ ಸಹ ಹರಿವಾಯುಗಳನ್ನು ಒಟ್ಟಿಗೆ ಸ್ತುತಿಸುತ್ತದೆ.‌ ಆದರೂ ವಿಷ್ಣುಪಾರಮ್ಯವನ್ನೇ ಪ್ರತ್ಯೇಕ ಪ್ರಕಟಿಸುವ ಮಂಗಳ ಶ್ಲೋಕ ವಿಷ್ಣಸರ್ವೋತ್ತಮತ್ವದ ಧಾರ್ಢ್ಯಕ್ಕೆ ಪೀಠಿಕೆಯಾಯಿತು. ಮಧ್ವರ ಮೂಲಕ‌ ಭಗವಂತನಿಗೆ ನೇರ ಅರ್ಪಿಸಿದಂತೆಯೂ ಆಯಿತು. ಇಂತಹ ಭಾಗ್ಯ ಬೇರಾವ ಸಮಕಾಲೀನರ ಕೃತಿಗೂ ಲಭ್ಯವಾಗಿಲ್ಲ ಎಂಬುದು ಗಮನಾರ್ಹ..

3 ಅದರ ಫಲನೀಡುವ ಶಕ್ತಿಃ

ತತ್ತ್ವಜ್ಞಾನ ಗುರ್ವನುಗ್ರಹಗಳೊಂದಿಗೆ ಸ್ತುತಿಯ ಜನಪ್ರಿಯತೆಗೆ ಮತ್ತೊಂದು ಮಾನದಂಡ ಎಂದರೆ ಅದರ ಫಲನೀಡುವ ಶಕ್ತಿ.‌ಇತರ ಉಳಿದ ಸ್ತೋತ್ರಗಳು ಪೂರ್ತಿ ಪಠನದ ಅನಂತರ ಒಂದೋ,ಎರಡೋ ಫಲಗಳನ್ನು ನೀಡಿಯಾವು ಅಥವಾ ಫಲಗಳ ಸಾಲನ್ನು ಅಂತ್ಯದಲ್ಲಿ ಒಟ್ಟಾಗಿ ಹೇಳವುದು ಪದ್ದತಿ. ಆದರೆ ವಾಯುಸ್ತುತಿ ಪ್ರತಿಯೊಂದು ಶ್ಲೋಕವೂ ಸಹ ವಿಶಿಷ್ಠವಾದ ಫಲವನ್ನು ನೀಡುತ್ತದೆ. ಹೀಗಾಗಿ ಪ್ರತಿಯೊಂದು ಶ್ಲೋಕವೂ ಮಂತ್ರತುಲ್ಯವಾಗಿದೆ. ಇಡೀ ಸಮೂಹವಂತೂ ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿದೆ. ಹೀಗಾಗಿ ಇದರ ಫಲವನ್ನು ಕಂಡವರು ಅದನ್ನುಭವಿಸಿ ಜಗತ್ತಿಗೆ ಸಾರಿದರು.

ಅದರಲ್ಲೂ ಮೋಕ್ಷದ ಸಾಧನ ಎನಿಸಿದ ತತ್ತ್ವಜ್ಞಾನವನ್ನು ತಿಳಿಯುವ  ಯೋಗ್ಯತೆ ಈ ಸ್ತುತಿಯಿಂದ ಲಭಿಸುತ್ತದೆ. ವಾದಿರಾಜತೀರ್ಥರಂತೂ ತಾನು ವಾಯುಸ್ತುತಿಯ ಉಪಾಸನೆಯಿಂದಲೇ ಮಧ್ವರ ಗ್ರಂಥಗಳಿಗೆ ವ್ಯಾಖ್ಯಾನ ಮಾಡುವ ಸಾಮರ್ಥ್ಯ ವನ್ನು ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ...

ಮಾಧ್ವಗ್ರಂಥಸ್ಯಾಭಿಸಂಧಿಂ ವಿದುರ್ದೇವಾ ನ ಮಾನವಾಃ|
ವಾಯುಸ್ತುತಿರತೋನಿತ್ಯಂ ವೇದಾಹಂ ತು ಕಥಂಚನ||

ಮಧ್ವಾಚಾರ್ಯರ ಗ್ರಂಥಗಳ ಅಭಿಪ್ರಾಯವನ್ನು ದೇವತೆಗಳೇ ಸವಿಯಬಲ್ಲರು. ಮಾನವರು ಸವಿಯಲಾರರು.‌ಆದರೂ ವಾಯುಸ್ತುತಿಯಲ್ಲಿ ನಿತ್ಯ ನಿಮಗ್ನನಾಗಿರುವಿವುದರಿಂದ ಸ್ವಲ್ಪ ಮಟ್ಟಿಗೆ ತಿಳಿದಿದ್ದೇನೆ.‌ "ಅಯಮಿಹ ಸುಕೃತಿಂ ವಾಯುದೇವೋ ವಿದಧ್ಯಾತ್" ನನ್ನನ್ನು ವಾಯುದೇವ ಬುದ್ದಿವಂತನನ್ನಾಗಿ ಮಾಡಲಿ ಎಂದು ಬೇಡುತ್ತಿದ್ದೆ.‌ಅದರ ಪ್ರಭಾವದಿಂದ ನನಗೆ ತಿಳಿವು ಮೂಡಿದೆ ಎನ್ನುತ್ತಾರೆ ವಾದಿರಾಜರು.

ವಾದಿರಾಜರಂತಹ ಮಹನೀಯರು, ಇತರ ಸಾಧಾರಣ ಸಾಧಕರೂ ಸಹ ಅದರ ಫಲ ಅನುಭವಿಸಿರುವುದರಿಂದ ವಾಯುಸ್ತುತಿ ಪ್ರಭಾವ ಪರಂಪರೆಯಿಂದಲೂ ಪ್ರಭಾವಶಾಲಿಯಾಗಿ ಬೆಳೆದಿದೆ....

🙏 ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ🙏
[2:33 PM, 4/20/2020] Prasad Karpara Group: 🙏 ಶ್ರೀ ಹರಿ ವಾಯುಸ್ತುತಿ 🙏
ಭಾಗ 2

4 ಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾಗುವ ಸಂಕಲನ :

ಸಾಧಕರು ತಮ್ಮ ವ್ಯಕ್ತಿತ್ವದ ಸಂಪೂರ್ಣ ವಿಕಸನಕ್ಕೆ ಅನೇಕ ಗುಣಗಳಿಂದ ಪರಿಪುಷ್ಟರಾಗಿರಬೇಕು ಉತ್ತಮ ವಾಕ್ಯುದ್ದಿ ನಿರ್ಮಲ ಮನಸ್ಸು - ದೇಹದಾರ್ಢ್ಯ - ಎಚ್ಚರ - ಗುರ್ವನುಗ್ರಹ , ದೈತ್ಯರಿಂದ ಪ್ರಭಾವಕ್ಕೊಳಗಾಗದಿರುವದು, ಗ್ರಂಥಗಳ ಜ್ಞಾನ ವೈರಾಗ್ಯಲಾಭ ಸಿದ್ದಿ - ಆರೋಗ್ಯ ಹೀಗೆ ಇವೇ ಮೊದಲಾದವು ಅವಶ್ಯಕ.ಅವನ್ನೆಲ್ಲಾ ನೀಡುವ ಈ ಸ್ತುತಿ ಇಂದಿಗೂ ಎಂದೆಂದಿಗೂ ಸಾಧಕರ ಜೀವನಾಡಿ ಎನಿಸಿರುತ್ತದೆ. ಉಳಿದ ಸ್ತೋತ್ರಗಳು ಕೇವಲ ಶ್ರದ್ದೆ ತುಂಬಿಸಿದರೆ ಇದು ಎಲ್ಲ ಗುಣಗಳನ್ನು ಅಳವಡಿಸಿಕೊಂಡು ಸಾಧಕ ಹೇಗೆ ಕ್ರಮೇಣ ಎತ್ತರಕ್ಕೆ ಏರಿ ಹರಿಯ ಅನುಗ್ರಹ ಪಡೆಯಬಹುದು ಎಂದು ತಿಳಿಸುತ್ತದೆ .

5 ಯತೀಶ್ರೇಷ್ಠರಿಂದ ಮುಕ್ತಕಂಠದ ಪ್ರಶಂಸೆ:

ಯತಿ ಶ್ರೇಷ್ಠರುಗಳೂ ಇದನ್ನು ತಪ್ಪದೇ ಪಾರಾಯಣ ಮಾಡುತ್ತಾ ಗೌರವಿಸಿದ್ದಾರೆ. ಇದಕ್ಕೆ ಸರಿಸಮನಾದ ಇನ್ನೊಂದು ವಾಯುಸ್ತುತಿ ಎಂಬುದು ಇಲ್ಲ.‌ಇದರ ಮುಂದೆ ಪರ್ಯಾಯವಾಗಿ ಮತ್ತೊಂದು ಯಾರು ರಚಿಸಿಲ್ಲ. ವಾದಿರಾಜರು ಸಹ ಮುಕ್ತಿಮಲ್ಲಿಕಾ ಗ್ರಂಥದಲ್ಲಿ ಈ ವಾಯುಸ್ತುತಿಯು ಹೇಗೆ ವೇದಗಳ ಅರ್ಥಗಳನ್ನು ಪವಮಾನ ಸೂಕ್ತಗಳನ್ನು ಒಳಗೊಂಡಿದೆ ಎಂದು ವಿಸ್ತರಿಸಿ ಬರೆದಿದ್ದಾರೆ . ಇಂತಹ ಭಾಗ್ಯ ಬೇರೆ ಸುತ್ತಿಗೆ ಕಾಣುವುದು ದುರ್ಲಭ.

6 ಪ್ರತಿಪಾಧ್ಯ ದೇವತೆ ವೈಭವ

ಹಾಗೆಯೇ ಇದರಿಂದ ಅರ್ಚಿಸಲ್ಪಡುವ ದೇವತೆ ಸಾಕ್ಷಾತ್ ಶ್ರೀ ಮನ್ನಾರಾಯಣನೇ ಆಗಿರುವುದರಿಂದ ಸರ್ವೋತ್ತಮನಾದ ಹರಿ, ಜೀವೋತ್ತಮನಾದ ವಾಯು ಇವರಿಬ್ಬರೂ ಈ ಸ್ತುತಿಯ ಆರಾಧ್ಯದೈವರಾಗಿರುವುದೂ ಸಹ ಇದರ ಹಿರಿಮೆಗಳಲ್ಲೊಂದಾಗಿದೆ.

ಇನ್ನೂ ವಾಯುಸ್ತುತಿಯ ಅಂತರಾಳಕ್ಕೆ ಇಳಿದಾಗ ಮಾತು ಮುಗಿಯುವುದಿಲ್ಲ .ತ್ರಿವಿಕ್ರಮ ಪಂಡಿತರು ವ್ಯವಸ್ಥಿತವಾದ ಬದುಕಿನಂತೆ ಇವರ ಚಿಂತನೆಯು ಕ್ರಮಬದ್ಧವಾಗಿದೆ.

"ಆಪಾದಮೌಳಿಪರ್ಯಂತಂ ಗುರೂಣಾಂ ಆಕೃತಿಂ ಸ್ಮರೇತ್" ಗುರುಗಳ ಶರೀರವನ್ನು ಪಾದದಿಂದ ಶಿರಃ ಪರ್ಯಂತ ವರ್ಣಿಸಬೇಕು ಎಂಬ ಋಷಿ ಪರಂಪರೆಗನುಗುಣವಾಗಿ ವಾಯುದೇವರ ಜಗದ್ಗುರುಗಳ ಪಾದವನ್ನು ವರ್ಣಿಸಬೇಕು.ತ್ರಿವಿಕ್ರಮರು ಪಾದಕ್ಕಿಂತಲೂ ಮೊದಲು ಕಾಣುವ ಪಾದಪೀಠವನ್ನು ವರ್ಣಿಸುತ್ತಾರೆ. ಆ ಕಾರ್ಯ ನಿರ್ವಣೆಯಲ್ಲಿ ನಾನು ನಿಪುಣನಲ್ಲ ಎಂದು ನೇರ ಹೇಳಿದ್ದಾರೆ. ಹೀಗೆ ಹೇಳವುದು ಎಲ್ಲರ ಬಾಯಲ್ಲಿ ನಿಂತು ನುಡಿಸುವ ಆ ಭಾರತಿಯೂ ಕೂಡ ವಾಯುದೇವರ ಪಾದಧೂಳನ್ನು ಭಾರೀ ಭಕುತಿಯಿಂದ ಸೇವಿಸುವಾಗ ದೇವತೆಗಳೂ ಸಹ ಮುನ್ನುಗ್ಗುತ್ತಾ ಅದನ್ನು ಸೇವಿಸಿ ಅಜ್ಞಾನ ಕಳೆದುಕೊಂಡಿದ್ದಾರೆ. ತಿಳಿವಳಿಕೆ ಪಡೆದುಕೊಂಡಿದ್ದಾರೆ. ಹೀಗಿರುವಾಗ ಅಲ್ಪನಾದ ಮನುಷ್ಯ ಅಸಡ್ಡೆ ಮಾಡಲಾದೀತೆ? ಎನ್ನುತ್ತಾರೆ..

ವಾಯುದೇವರ ಪಾದಧೂಳಿ- ಸಂಜೀವಿನಿಯ ತಂಗಾಳಿ .ರೋಗಗಳಿಗೆ ಮದ್ದು - ಚಿಂತನೆಗಳಿಗೆ ಸಿದ್ದೌಷಧ- ಜ್ಞಾನ ಭಕ್ತಿ ಮೊದಲಾದ ಸದ್ಗುಣಗಳಿಗೆ ಜನ್ಮಭೂಮಿ ಆನಂದಗಳ ವೈವಿಧ್ಯವನ್ನೇ ಸುರಿಸುವ ಆ ಧೂಳಿಯನ್ನು ದೇವತೆಗಳು ಧಾವಂತದಿಂದ ಸೇವಿಸುತ್ತಾರೆ. ಹಾಗೆಂದು ಹೇಳಿ ವಾಯುದೇವರನ್ನು ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತಾ ಕೆಟ್ಟವರ ಸುದ್ದಿಗೆ ಹೋಗದೆ ಜನಪ್ರೀಯ ಸಾಧು ಎನ್ನಲಾಗದು..‌

"ಮುಖ್ಯಪ್ರಾಣನೀವು ನಂಬದ ಜನರ ಗಂಟಲಗಾಣ" ಎನ್ನುವಂತೆ ಅಯೋಗ್ಯರನ್ನು ಅಂಧಂತಮನಸ್ಸಿನಲ್ಲಿ ತಳ್ಳಿ ಶಿಕ್ಷಿಸುವವರು ಇವರು. ಹೀಗಾಗಿ ತಾತ್ಸರಮಾಡಿದವರಿಗೆ ಶಾಶ್ವತ ಸಂಸಾರ- ಅದ್ವೈತಿಗಳಿಗೆ ಉಗ್ರಶಿಕ್ಷೆ ಕೊಟ್ಟಂತೆ ಸಾತ್ತ್ವಿಕರಿಗೆ ಮೋಕ್ಷವನ್ನು ನೀಡುವವರು ಇವರು. ಒಂದೊಂದು ಅವತಾರವೂ ಆದರ್ಶಮಯ. ಹನುಮಂತ ನೆನಿಸಿದಾಗ ನೆನೆಸಿದವರ ಪಾಪವನ್ನೇ ಸುಡುವ ಗುಣಗಳ ಶುದ್ದ ಅಪರಂಜಿ, ಮಹಾಬಾಹುಬಲ. ಆದರೂ ಭಕ್ತಿಯಲ್ಲಿ ನಿಸ್ಸೀಮ ಎನಿಸಿದವರು. ನೆನೆದವರಿಗೆ ಇಂದೂ ರಾಮನಲ್ಲಿ ಭಕ್ತಿ ಚಿಮ್ಮುತದತ್ತದೆ. " ಸ್ಪೃಹಯತೀ ಮಹತೀಂ ಭಕ್ತಿಂ ಅಧ್ಯಾಪಿ ರಾಮೇ" ಅಧ್ಯಾತ್ಮದೊಂದಿಗೆ ಪರೋಪಕಾರದ ಪ್ರಸಂಗ ಬಂದಾಗ, ಸಂಜೀವನಿಯ ತಂದು ಎಲ್ಲರಿಗೂ ಜೀವ ನೀಡಿದರು. ಆರೋಗ್ಯ ಇತ್ತರು. ಕಪಿಗಳ ಸುಟ್ಟು  ಮುಖವನ್ನು ಮೊದಲಿಂತೆ ಮಾಡಿದರು. ಇಷ್ಟೇಲ್ಲಾ ಮಾಡಿದರೂ ರಾಮನಲ್ಲಿನ ಭಕ್ತಿ ಅಚಲವಾಗಿಯೇ ಇತ್ತು. ಅಹಂಕಾರ ಸುಳಿಯಲಿಲ್ಲ. ರಾವಣನನ್ನು ಕಪಿಮುಷ್ಠಿಯಿಂದ ಗುದ್ದಿ ಅವನ ದೇಹ ನುಜ್ಜಾಗಿಸಿದರು. ಭಕ್ತಾಭೀಷ್ಟಪ್ರದನಾದ ಆ ಹನುಮ ಆ ತುಂಬಿದ ಬಲವಾದ ಮುಷ್ಟಿಯಿಂದ ನನಗೆ ಇಷ್ಟಾರ್ಥಗಳನ್ನೆಲ್ಲ ಬಾಚಿಕೊಡಲಿ. ಸಜ್ಜನರಿಗೆ ಎಂದೆಂದೂ ಹರಸುವುದೇ, ತುಂಬಿಕೊಡುವುದೇ ಈ ಹನುಮಂತನ ಲೀಲೆ. ಇವನ ತುಂಬುಹೃದಯದ ಸೇವೆಗೆ ,ರಾಮನ ಮನಸ್ಸು ತುಂಬಿಹೋಯಿತು .ಅರಳಿದ ಕಣ್ಣುಗಳಿಂದ , ಒದ್ದೆಯಾದ ನೋಟದಿಂದ ರಾಮ ಹನುಮಂತನನ್ನು ನೋಡಿದ್ದೇ ನೋಡಿದ್ದು. ಕಡೆಗೆ ತನ್ನ ಅಮೃತ ಸುರಿಸುವ ಆ ಹಸ್ತವನ್ನು ಹನುಮಂತನ ತಲೆಯ ಮೇಲೆ ಇಟ್ಟು ಆರ್ಶಿವದಿಸಿದನಂತೆ! ಅಂತೂ ಹನುಮನ ಸೇವಾಭಾವ ಭಕ್ತಿ ಪರಾಕ್ರಮಗಳನ್ನು ಕೇಳಿದವನೇ ಧನ್ಯ.....
🙏 ಶ್ರೀಹರಿಃ ಸರ್ವೋತ್ತಮ ಶ್ರೀವಾಯುಜೀವೋತ್ತಮಃ🙏
[2:33 PM, 4/20/2020] Prasad Karpara Group: 🙏 ಶ್ರೀ ಹರಿವಾಯುಸ್ತುತಿ🙏
ಭಾಗ-3 

ಭೀಮನಂತೂ ಬಲಭೀಮ ಎನಿಸಿಕೊಂಡವ‌. ಅವನ ಬಲ ಸ್ವಾರ್ಥಕ್ಕೆ ಸಾಧನೆ ಆಗದೆ ಪರೋಪಾರಕ್ಕೆ ಸೇತುವೆ ಆಯಿತು. ಊರಿಗೆ ಕಂಟಕನಾದ ಬಕಾಸುರನನ್ನು ಬಲಿಹಾಕಿತು ನರಭಕ್ಷಕ ಕಿರ್ಮೀರನನ್ನು ಕೊಚ್ಚಿಹಾಕಿತು ರಾಜಕೀಯವನ್ನೇ ದಾಂಧಲೆ ಮಾಡಿಕೊಂಡ, ಮಿಲಿಟರಿ ಸೈನ್ಯವನ್ನೇ ಮಿತಿಮಿರಿ ಬೆಳೆಸಿದ ಜರಾಸಂಧನನ್ನು ಜಜ್ಜಿಹಾಕಿತು. ಇಷ್ಟೆಲ್ಲಾ ಗೆಲುವಿನ ಸರಣಿಯನ್ನೇ ಅನುಭವಿಸಿದರೂ ಪರಾಕ್ರಮಗಳನ್ನು ಪರಮಾತ್ಮನ ಪಾದಾರವಿಂದದಲ್ಲಿ ಅರ್ಪಿಸುವ ಅಪ್ಪಟಶ್ರದ್ದೆ ದುಪ್ಪಟಾವಾಯಿತೇ ವಿನಃ ಅಹಂಕಾರ ತರಲಿಲ್ಲ.ಶತ್ರುವನ್ನು ಬಗ್ಗು ಬಡಿಯುವ ಆ ಗಧಾಭಂಗ, ಅಟ್ಟಹಾಸದಿಂದಲೇ ಶತೃಗಳನ್ನು ರಣರಂಗದಿಂದ ಅಟ್ಟಿಬಿಡುವ ಆ ಸಿಂಹಾನಾದ, ಅಕ್ಷೋಹಿಣೀ ಸೈನ್ಯಗಳನ್ನೇ ಸಂಹರಿಸಿದ ಆ  ಅಗಾಧಬಲ ಇದೆಲ್ಲಾ ಇದ್ದೂ ಕಳಕಳಿಯಿಂದ ಇವೆಲ್ಲಾ ಹರಿಯ ಸೇವೆ ಎನ್ನುವ ನಮ್ರಭಾವ , ಅವನ್ನೆಲ್ಲಾ ವರ್ಣಿಸಲಾದೀತೆ? ಭಾರತ ಬರೆದ ವೇದವ್ಯಾಸರೇ ಸಮರ್ಥರು- ಅಥವಾ ವಾಯುದೇವ ಬಂದು ಬಾಯ್ಬಿಡಬೇಕು. 

ನಮ್ಮನ್ನು ಆಳುವ, ಅಳುವಂತೆಮಾಡುವ ಆ ಅವಿಧ್ಯೆಯನ್ನು ಅನಿಲ ನಿರ್ಮೂಲ ಮಾಡಲಿ ಎಂಬುದೇ ನಮ್ಮ ಪ್ರಾರ್ಥನೆ. ಆ ವಾಯುದೇವ ಜ್ಞಾನಾಭಿಮಾನಿಯಾದ ಭಾರತಿಗೆ ಒಂದು ಆದೇಶ ಕೊಟ್ಟರು ಸರಿ, ಅಜ್ಞಾನ ಆಚೆ ಹೋಗಿ ನಾನು ವಿಧ್ಯಾವಂತನಾದೆ‌ ಎಂದು ಅರ್ಥ.

ಪರಾಕ್ರಮ ವಾತ್ಸಲ್ಯ- ಜ್ಞಾನ ಇವೆಲ್ಲವೂ ಹವ್ಯಾಸ ಎನಿಸಿದೆ ಗುಣ ಎನಿಸಬೇಕು ಅದಕ್ಕಾಗಿ ಹರಿಯಲ್ಲಿ ಭಕ್ತಿ ಬೆಳೆಯಬೇಕು ಸೇವೆಯನ್ನು ಸತತ ಮಾಡಬೇಕು. ವಾಯುದೇವರೇ! ತಾವು ಭೀಮನಾದಾಗಲಂತೂ ಒಂದಲ್ಲಾ-ಹರಿಯ ಎರಡು ರೂಪಗಳನ್ನೂ ಯಾದವಕೃಷ್ಣ- ವಾಸಿಷ್ಠಕೃಷ್ಣರನ್ನು ಚೆನ್ನಾಗಿ ಸೇವಿಸಿದಿರಿ. ನಿಮ್ಮ ಮಹಿಮೆ ಬಣ್ಣಿಸಲಾಗದು. ಬಾಗಿ ನಮಿಸುವುದೇ ಸರಿ ಎನ್ನುತ್ತಾರೆ....

ಸಜ್ಜನರಿಗೆ ದಾರಿ ತೋರುವಂತೆ , ಕುಹಕಜನರಿಗೆ ಕಂಗಾಲು ತರುವುದರಲ್ಲೂ ನೀವು ನಿಸ್ಸೀಮರು.‌ನೀವೇ ಹನುಂತನ ಅವತಾರ ತಾಳಿದವರು- ಆದರೂ ಹನುಮನ‌ ಬಾಲ ಎತ್ತಲಾರದೆ ಸೋತ ಹೋದಿರಿ, ಭೀಮ ಸೋತ ಎಂಬ ಕಥೆ ಬೆಳೆಯಿತು. ಅಂತೂ ಅದರ ಹಿಂದಿರುವ ತತ್ತ್ವ- ನಿಮ್ಮೆರಡೂ ಅವತಾರಗಳೂ ಸರಿಸಮಾನ ಎಂಬ ವಿವೇಕ ಬೆರೆಯಲಿಲ್ಲ. ಇದೆಲ್ಲ ನಿಮ್ಮ‌ ಲೀಲೆ. ಸಜ್ಜನರಿಗೆ ಸುಖ- ದುರ್ಜನರಿಗೆ ದುರಂತ ತರುವ ಆ ಭೀಮನನ್ನು ಮರೆಯಲಾಗದು.‌ಆ ವಾಯುದೇವನಿಗೆ ನಮಸ್ಕಾರ. ಹೂವ ತರುವ ನೆಪದಿಂದ ಮುನ್ನೂರು ಕೋಟಿ ದೈತ್ಯರನ್ನು ಮಣ್ಣು ಮಾಡಿದೆ. ಮತ್ತೆ ನೂರು ಕೋಟಿ ರಕ್ಕಸರನ್ನೂ ಸಹ ಕೊಚ್ಚಿಹಾಕಿದೆ...

ನೀನು ಕಾಂತೆಗೆ ಹೂವು ಕೊಟ್ಟೆ ,ಇಡೀ ಲೋಕಕ್ಕೆ ಕಲ್ಯಾಣ ತಂದುಕೊಟ್ಟೆ ,ನೀನು ಗಂಡದೆಯ ಗಂಡನಾಗಿ, ದ್ರೌಪದಿಯ ನಲ್ಲನಾಗಿ ,ಹರಿಯ ಅದ್ದೂರಿಭಕ್ತನಾದವನು. ಭೀಮನೇ! ನಿನಗೆ ನಮಸ್ಕಾರ ನಮ್ಮ‌ ದಾಂಪತ್ಯವೂ ಲೋಕಕ್ಕೆ ಮಂಗಳ ವಾದಂತೆ ಹರಿಯ ಸೇವೆಗೆ ಅಂಗಳ ಆಗಲಿ. ಕುಟುಂಬಕ್ಕೂ ಸಹ ಅನ್ಯೋನ್ಯತೆ ತಾಳ - ಮೇಳ ಮೂಡಸಲಿ ಕೃಷ್ಣನು ಭೂಮಿ ಬಿಟ್ಟನಂತರ ನೀನೂ ಭೂಮಿಯನ್ನು ತೊರೆದೆ . ಹರಿಯ ದರ್ಶನ ಸಂದರ್ಶನ- ಅವಲೋಕನ,ಸ್ಮರಣೆ ಇಲ್ಲದೆ ಕ್ಷಣಕಾಲವೂ ಸಹ ಸುಮ್ಮನೆ ಕೂರಬಾರದು ಎಂಬ ಆ ಆದರ್ಶ ವಿಷ್ಣಭಕ್ತಿಯ ಪ್ರತಿಬಿಂಬ ಮೂಡಿಸುವುದು ...

ದೈತ್ಯರ ದಾಂಧಲೆ ದ್ವಾಪರಕ್ಕೆ ಮುಗಿಯಲಿಲ್ಲ ಕಲಿಕಾಲ ಎಂದರೆ ದೈತ್ಯರದ್ದೇ ಸಾಮಾಜ್ರ್ಯ ಅದರಲ್ಲೂ ಆಳ್ವಿಕೆ ಅನ್ನ ಇವುಗಳಿಗಿಂತ ಜ್ಞಾನದ ಮೇಲೆ ದೈತ್ಯರ ಕಣ್ಣು. ಅಂತೂ ತತ್ತ್ವಜ್ಞಾನ ನಾಶಕ್ಕಾಗಿ ಬಂದರು. ನಾನೇ ಬ್ರಹ್ಮ ಎಂದರು.‌ಹರಿ ನಿರ್ಗುಣ ಎಂದು ನಿರೂಪಿಸಿದರು.‌ಕೊನೆಗೆ ಜಗತ್ತೇ ಸುಳ್ಳು ಎಂದು ಅಬ್ಬರಿಸಿದರು. ಇದೆಲ್ಲ ಪಾಪಸ್ ಕಳ್ಳಿ ಗಿಡದಂತೆ ಕಾಡಾಗಿ ಹಬ್ಬಿತು. ಜನತಗೆ ಮಬ್ಬು ಕವಿಯಿತು....

ಆಗ ಆನಂದತೀರ್ಥ ಎಂಬ ಜ್ಞಾನಾಗ್ನಿ ಕಾಡ್ಗಿಚ್ಚಾಗಿ ಬಂದಿತು. ಅದರ ವಾದವನ್ನೆಲ್ಲಾ ಬೂದಿಮಾಡಿತು . ಈಗ ಕಾಡು ಹೋಗಿ ಜನರು ಕೂಡುವ ನಾಡಾಯಿತು....

ಆ ಅವತಾರ ಜ್ಞಾನ ಗಣಿ ವಾದದ ಧಣಿ. ಆ ವಾದದ ನಾದದ ಮುಂದೆ ವಾದಿಗಳು ಕಾಲ್ಕಿತ್ತರು ಹಲ್ಕಿತ್ತ ಹಾವಾದರು‌. ಆದರೂ ಬುದ್ದಿ ಬರಲಿಲ್ಲ.‌ಮತ್ತೆ ಮುಂದೆ ಗೆಲ್ಲುತ್ತೇವೆ ಎಂದರು ಬುದ್ದಿಯೇ ಇರದವರಿಗೆ ವಿವೇಕ ಬಂದಿತೇ..

ಒಮ್ಮೆ ನಿಮ್ಮ ಶಾಸ್ತ್ರ ಕೇಳಬೇಕಂದರೆ ಸಾಲದು ಕಿವಿ, ಇದ್ದವರಿಗೆಲ್ಲಾ ತಲೆ ಖಾಲಿಯಾಗಿದ್ದರೂ ಶಬ್ಧ ಕೇಳಿಸಿತು ಆದರೆ ಮದ್ವಶಾಸ್ತ್ರ ಕೇಳಲು - ಕೇಳಿದ್ದು ತಿಳಿಯಾಗಿ ತಿಳಿಯಲು ಹಿಂದಿನ ಜನ್ಮ ಪುಣ್ಯ ಗಂಟಾಗಿ ಇರಬೇಕು. ಈ ಜನ್ಮದಲ್ಲಿ ಧೃಡಕಾಯ ಆರೋಗ್ಯ ಅರಸಿ ಬಂದಿರಬೇಕು.‌ಆಚಾರ ಅವರನ್ನು ಹಿಂಬಾಲಿಸಿರಬೇಕು ಇಷ್ಟೆಲ್ಲಾ ಇತಿಮಿತಿಗಳೊಂದಿಗೆ ಪ್ರಶ್ನೆ ಕೇಳುವ ತೀಕ್ಷ್ಣಮತಿಯೂ ಆಗಿರಬೇಕು.‌ಅಂತಹವರಿಗೆ ಮಧ್ವಶಾಸ್ತ್ರ ರಸದೌತಣ, ಆನಂದತೀರ್ಥರೇ, ಆ ಶಾಸ್ತ್ರ ಕೇಳುವ ಕಲಿಯುವ ಆ ಭಾಗ್ಯ ನಮಗೆ ನೀಡಿರಿ..

🙏 ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ🙏

[2:33 PM, 4/20/2020] Prasad Karpara Group: 🙏 

ಶ್ರೀಹರಿವಾಯುಸ್ತುತಿ🙏

ಭಾಗ 4 

ಆ ಶಾಸ್ತ್ರದ ಮಾತು ಒಂದೆಡೆ, ಸುಂದರವಾದ ನಿಮ್ಮ ದೇಹ, ಇನ್ನೊಂದೆಡೆ ಮಂದಹಾಸ ಮರೆಯಾಗದ ಆ ಮುದ್ದು ಮುಖ, ಮಧುರವಾದ ಮೆಲ್ನುಡಿ ಆರೋಗ್ಯ - ಉಲ್ಲಾಸ ಮೂಡಿಸುವ ಜೇನಿನಂತಹ ಮಾತು, ಕೇಳಿದಾಗಲೇ ದುಃಖ ದೂರವಾಗುವುದು ನೆನೆಸಿಕೊಂಡಷ್ಟು ಮತ್ತೇ ಮತ್ತೇ ನೋಡಬೇಕೆಂದು ಮನಸ್ಸು ಗರಿಗೆದರವುದು - ಪಾಪ ಪರಿಹರಿಸುವ - ಆನಂದ ಸುರಿಸುವುದು ಒಟ್ಟಿನಲ್ಲಿ ಮೂತ್ತೆರಡು ಲಕ್ಷಣದ ಶರೀರ ಪೂರ್ಣ ವ್ಯಕ್ತಿತ್ವದ್ದಾಗಿದೆ. ಅದನ್ನು ಎಂದೆಂದೂ ನೋಡುವ ಭಾಗ್ಯ ಎಂದು ಸಿಕ್ಕುವುದೆ? 

ಈ ವರ್ಣನೆಯನ್ನು ಕೇಳಿದಾಗ "ಸುಂದರ ಮೂರುತಿ ಮುಖ್ಯಪ್ರಾಣ" ಎಂಬ ದಾಸರಪದ ಕಣ್ಮುಂದೆ ನಿಲ್ಲವುದು, 

ಒಟ್ಟನಲ್ಲಿ ಸರ್ವಜ್ಞರಾದವರು ತಾವು ಅಸುರರ ಭಾಷ್ಯ ಖಂಡಿಸಿ ಬ್ರಹ್ಮಸೂತ್ರಭಾಷ್ಯ ರಚಿಸಿದಿರಿ. ಸಕಲ ಗುಣಗಳಿಂದ ತುಂಬಿದವರು ನೀವು. ಮೃತ್ಯು ನಿಮ್ಮನ್ನು ಮುಟ್ಟವುದಿಲ್ಲ.‌ಅಷ್ಟೆ ಏಕೆ? ಆಕ್ರಮಣ ಮಾಡಿದರೂ ವಿಕಾರವಾಗದು ನಿಮ್ಮ ದೇಹ. ಒಟ್ಟಿನಲ್ಲಿ ಸಜ್ಜನರಿಗೆ ಸುಖ ತರುವವರು- ನಿಮ್ಮ ಮಹಿಮೆ ಎಂದರೆ ನಿಮ್ಮ ಹರಿಯ ಗರಿಮೆ,ಆ ಹರಿಯ ಸ್ತುತಿ ಎಂದರೆ ಮನವಿತ್ತ ವಾಯುದೇವನ ಸ್ತುತಿ...

ಒಟ್ಟಿನಲ್ಲಿ ಇಷ್ಟಂತೂ ಸತ್ಯ ವಾಯುದೇವರ ಸುತ್ತಿ ಮಾಡಿದವರ ಪುಣ್ಯ - ಸೇವಿಸಿದವರ ಪುಣ್ಯ ಗಂಗಾಸ್ನಾನಕ್ಕಿಂತಲೂ ಮಿಗಿಲು , ಸಂಸಾರದ ಭಯ ಸುಟ್ಟು ಹೋದಂತೆ ಮೋಕ್ಷದ ಆನಂದಕ್ಕೆ ಬೀಜ ಹುಟ್ಟುಹಾಕಿದಂತೆ, ಅದು ಎಲ್ಲಾ ನೀಡುವ ಕಲ್ಪ ವೃಕ್ಷ ಅದನ್ನು ಸೇವಿಸಬೇಕು. ಆದರದಿಂದ ನಮಸ್ಕರಿಸಬೇಕು . ಅಂತಹವರು ಜ್ಞಾನದ ವಿಸ್ತೃತಿಹೊಂದಿ ಮುಕ್ತಿಯನ್ನು ಹೊಂದುತ್ತಾರೆ....

ಹೀಗೆ ತ್ರಿವಿಕ್ರಮ ಪಂಡಿತಾಚಾರ್ಯರು ರಚಿಸಿದ ವಾಯುಸ್ತುತಿ ಹೇಳುತ್ತಾ ಹೋಗುತ್ತದೆ.‌ಪ್ರತ್ಯಕ್ಷವಾಗಿ ಮಧ್ವರನ್ನು ಕಂಡ, ಮಧ್ವಶಾಸ್ತ್ರದ ಹಿರಿಮೆ ಮನಗಂಡ ಅವರ ಮಾತಿಗೆ ತೂಕಹೆಚ್ಚು ಹೀಗಾಗಿ ಇನ್ನೊಂದು ವಾಯುಸ್ತುಶ್ರೀವಾಯುಜೀವೋತ್ತಮಃ*
ಹರಿವಾಯುಸ್ತುತಿ ಅರ್ಥ ತಾತ್ಪರ್ಯಗಳ ಸಮೇತ ಪ್ರಕಟಿಸುವ ಆಸೆ ಚಿಗುರೊಡೆಯಿತು ದಯಮಾನಾದ ಪರಮಾತ್ಮನ ಅನುಗ್ರಹದಿಂದ ಈ ಕಾರ್ಯ ಇಂದು ಬೆಳಕು ಕಾಣುತ್ತಿದೆ...


🙏 ಶ್ರೀಹರಿಃ ಸರ್ವೋತ್ತಮಃ ಶ್ರೀವಾಯುಜೀವೋತ್ತಮಃ🙏
*****************