Showing posts with label ಎಂದು ಕರುಣದಿಂದ ನೋಡುವಿ ರಾಘವೇಂದ್ರ anantadreesha. Show all posts
Showing posts with label ಎಂದು ಕರುಣದಿಂದ ನೋಡುವಿ ರಾಘವೇಂದ್ರ anantadreesha. Show all posts

Friday, 27 December 2019

ಎಂದು ಕರುಣದಿಂದ ನೋಡುವಿ ರಾಘವೇಂದ್ರ ankita anantadreesha

on ರಾಘವೇಂದ್ರ ಗುರುಗಳು
ಎಂದು ಕರುಣದಿಂದ ನೋಡುವಿ ರಾಘ-
ವೇಂದ್ರಗುರುವೆ ಎಂದು ನಮಗಾನಂದನೀಡುವಿ ಪ

ಎಂದು ಕರುಣದಿಂದ ನೋಡುವಿ
ನೊಂದು ತಾಪದಿಂದ ಬಹಳ
ಬೆಂದು ನಿನ್ನ ಕಂದನೆಂತೆಂದು ಪಾದಕೆ
ಹೊಂದಿದವನ ಅ.ಪ

ದೀನನಾನು ಧೇನಿಸುವೆನೊ ಅನುದಿನ ಕಾಮ
ಧೇನು ನೀನು ದಾನಶೂರನೊ
ದಾನದಲ್ಲಿ ನೀದಾನ ಕಾರಣ ದಾನಿ ನಿನ್ನಂದ
ಹೀನನಾದಾ ದಾನದಿಂದ ಇನ್ನೇನು ಫಲವು
ದಾನಮಾಡೊ ದೀನರೊಡಿಯ 1

ಅಲ್ಪ ನಾನು ಜಲ್ಪಕೆಣಿಸುವೆ ಅ-
ನಲ್ಪ ನೀನು ಕಲ್ಪವೃಕ್ಷಕಲ್ಪನಲ್ಲವೆ
ಅಲ್ಪರಿಗೆ ಅನಲ್ಪ ಫಲ ಅಕಲ್ಪಿತವಾಗಿ ಕಲ್ಪಿಸುವರೆ
ಅಲ್ಪರಿವÀರನಲ್ಪರೆಂದು
ಸ್ವಲ್ಪಮನೋ ವಿಕಲ್ಪವಿಲ್ಲದೆ 2

ಗುಣಿಯು ನೀಣು ಅಣಿಯು ಇಲ್ಲದ ದು
ರ್ಗುಣಿಯು ನಾನು ಹಣಿಯೋ ನೀನು
ಮಣಿಯೊ ಪಾಪದ
ಧಣಿಯು ಚಿನ್ನದ ಖಣಿಯೇ ಚಿಂತಾ

ಮಣಿಯೆ ನಿನಗೆ ಎಣಿಯು ಇಲ್ಲಗುಣಿ `ಅನಂತ' ಫಣಿಯ ತೋರಿಸು ದಣಿಯಲಾರೆ 3
*********