ವಾಡ ಗ್ರಾಮದಿ ನಿಂತ ದೇವನ ||pa||
ರೂಢಿಪ ದಾಸರಿಗೆ ನೀಡಲು ದರುಶನ
ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ||a.pa||
ಈತನೆ ವೈಕುಂಟನಾಥನು ನಿಜ |
ಶಾತಕುಂಭೋದÀರ ತಾತನು
ಮಾತಂಗ ವರದಾತ ಶ್ವೇತವಾಹನ ಸೂತ
ಜಾತರಹಿತ ದನುಜಾತ ಕುಲಾಂತಕ ||1||
ತೋಂಡಮಾನಗೊಲಿದಾತ | ತನ್ನ
ತೋಡ ಜನಕೆ ಸುಖದಾತನ |
ಅಂಡಜಾತ ಪ್ರಕಾಂಡ ವರೂಥ ಬ್ರ
ಹ್ಮಾಂಡನಾಯಕನಾದ ಪಾಂಡವಪಾಲನ ||2||
ಇಂದು ಧರಾಮರ ವಂದ್ಯನ ಶಾಮ
ಸುಂದರ ವಿಠಲನ ಮುಕುಂದನ
ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ
ವೃಂದವೆಲ್ಲವು ಇಂದು ಬೆಂದು ಪೋದವು ಘನ||3||
***
..
ನೋಡಿದೆ ವೆಂಕಟರಮಣನ | ದ್ವಾರ
ವಾಡ ಗ್ರಾಮದಿ ನಿಂತ ದೇವನ ಪ
ರೂಢಿಪ ದಾಸರಿಗೆ ನೀಡಲು ದರುಶನ
ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ಅ.ಪ
ಈತನೆ ವೈಕುಂಟನಾಥನು ನಿಜ |
ಶಾತಕುಂಭೋದÀರ ತಾತನು
ಮಾತಂಗ ವರದಾತ ಶ್ವೇತವಾಹನ ಸೂತ
ಜಾತರಹಿತ ದನುಜಾತ ಕುಲಾಂತಕ 1
ತೋಂಡಮಾನಗೊಲಿದಾತ | ತನ್ನ
ತೋಡ ಜನಕೆ ಸುಖದಾತನ |
ಅಂಡಜಾತ ಪ್ರಕಾಂಡ ವರೂಥ ಬ್ರ
ಹ್ಮಾಂಡನಾಯಕನಾದ ಪಾಂಡವಪಾಲನ 2
ಇಂದು ಧರಾಮರ ವಂದ್ಯನ ಶಾಮ
ಸುಂದರ ವಿಠಲನ ಮುಕುಂದನ
ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ
ವೃಂದವೆಲ್ಲವು ಇಂದು ಬೆಂದು ಪೋದವು ಘನ 3
***