Showing posts with label ಸೋಮಶೇಖರ ತಾನೆ ಬಲ್ಲ ಶ್ರೀರಾಮನಾಮಾಮೃತ shree krishna SOMASHEKHARA TAANE BALLA SRIRAAMANAAMAAMRUTA. Show all posts
Showing posts with label ಸೋಮಶೇಖರ ತಾನೆ ಬಲ್ಲ ಶ್ರೀರಾಮನಾಮಾಮೃತ shree krishna SOMASHEKHARA TAANE BALLA SRIRAAMANAAMAAMRUTA. Show all posts

Saturday 11 December 2021

ಸೋಮಶೇಖರ ತಾನೆ ಬಲ್ಲ ಶ್ರೀರಾಮನಾಮಾಮೃತ ankita shree krishna SOMASHEKHARA TAANE BALLA SRIRAAMANAAMAAMRUTA



ಸೋಮಶೇಖರ ತಾನೆ ಬಲ್ಲ ಶ್ರೀ-

ರಾಮನಾಮಾಮೃತ ಸವಿಯನೆಲ್ಲ ಪ


ಮದನಪಿತಾಯೆಂದು ಕುಣಿಕುಣಿದಾಡಲುಕೆದರಿದ ಕೆಂಜೆಡೆಗಳ ಪುಂಜದಿಒದಗಿದ ಗಂಗೆ ತುಂತುರು ಹನಿಗಳ ಕಂಡುಪದಮಜಾಂಡಹಿತ ರಾಮರಾಮಾ ಎಂಬ 1


ಆನಂದ ಜಲದ ಸೋನೆಗೆ ಲಲಾಟ-ದಾನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳುತಾನೆದ್ದು ಮುಳುಗುತ ರಾಮ ರಾಮಾಯೆಂಬ2


ಶಿರದ ಗಂಗೆಯ ವರ ಅಗ್ಗಣಿಯಾಗಿರೆಸರಸಿಜ ಬಾಂಧವ ಚೆಂದಿರ ದೀಪಉರಿಗಣ್ಣಿನ ಹೊಗೆ ಧೂಪವನೇರಿಸಿಕರಣವೆ ನೈವೇದ್ಯಯೆಂದು ರಾಮ ಎಂಬ 3


ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪಇಂದ್ರನೀಲದ ಚೆನ್ನಪುತ್ಥಳಿಯಂತೆಚಂದದಿ ತನ್ನಯ ಹೃದಯ ಮಧ್ಯದಿ ರಾಮ-ಚಂದ್ರ ಹೊಳೆಯೆ ಶ್ರೀ ರಾಮ ರಾಮ ಎಂಬ4


ಐದು ಮುಖಗಳಿಂದ ಹರಿಯ ಕೊಂಡಾಡಲುಸ್ವಾಧೀನ ಭೂಷಣ ಫಣಿಗಳೆಲ್ಲಮೋದದಿಂದಾಡಲು ಫಣಿ ಮಣಿಯಾಘಾತನಾದ ತಾಳವಾಗೆ ರಾಮ ರಾಮ ಎಂಬ 5


ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬಒಮ್ಮೆ ನಾರದ ಪಾಡೆ ತತ್ಥೈಯೆಂಬಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ6


ಅರಸಂಚೆಯ ಕಂಜ ಪುಂಜಗಳಲಿಪ್ಪಅರೆ ಮುಚ್ಚಿದ ಹದಿನೈದು ನೇತ್ರಗಳಿಂಹರಿಯ ಕೊಂಡಾಡುತ ಪಂಚ ಮುಖಗಳಿಂದಸಿರಿಕೃಷ್ಣ ಮುಕುಂದ ನರಹರಿ ರಾಮ ಎಂಬ7

****