..
kruti by ಲಕ್ಷ್ಮೀನಾರಯಣರಾಯರು Lakshminarayanaru
ಬಾರೋ ವರಶೂರ ಕುಮಾರ ಸುಂದರಾಕಾರ ಪ
ಪರಾತ್ಪರ ಕೃಪಾಕರ ಸುರೇಶ್ವರ ಹಿತಕರ ಅ.ಪ
ವೇದವ ತಂದಿತ್ತನೆ ಭೂಧರವೆತ್ತಿದನೆ
ಮೇದಿನೀ ಸಾಧಕನೆ ಅದ್ಭುತ ವಿಕ್ರಮನೆ 1
ವಾಸವ ವಂದಿತನೆ ಭೂಸುರ ವರದನೆ
ಪಾಶೀನುತಮಹಿಮನೆ ಕೇಶವನೆ ದೇರ್ಶಿಕನೆ 2
ವ್ಯಾಕುಲ ಕಳೆವನೆ ಕಾಕೋದರಶಯನನೆ
ಸಾಕುವ ಶ್ರೀಕಾಂತನೆ ಏಕಾ ಮೇವಾ ದ್ವಿತೀಯನೆ 3
***