ಗಿಣಿಯೆ ನಿನಗೇನು ಬೇಕದನೀವೆ ಹಯವದನ-
ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ವಾದಿರಾಜನಿಗೆ
ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ.
ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ 1
ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ 2
ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆÉಲೆ ಗಿಣಿಯೆ 3
ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ 4
ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ 5
ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದÀಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತÀಂದು ಮುಂದಿರಿಸು ನೀ ಗಿಣಿಯೆ6
ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ 7
ಗಗನದಲಿ ನೆಲೆಸಿಹುದು ನಮ್ಮ ಪತಿಯ ಚೆಲುವ ಪಾದಗಗನದೆಡೆಯೆ ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ8
ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ 9
ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ 10
***