ಕಾಯಯ್ಯಾ ನೀ ಎನ್ನ ರನ್ನಾ | ದಯದಲಿ ಸಂಪನ್ನಾ ಪ
ಮಂದರಧರ ದಶಕಂದರ ಹರಿ ಅತಿ- | ಸುಂದರ ಸದ್ಗುಣ ಮಂದಿರ ಈಶಾ | ಕುಂದರದನ ಕಂಬುಕಂದರ ಐದೊಂದು | ಕಂದರ ಪಿತ ಸಖ ಇಂದಿರೆಯರಸಾ 1
ತುಂಗ ವಿಕ್ರಮ ದನುಜಾಂತ ಮದಗಜಕ | ಹರಣ ರಂಗ ನಿಸ್ಸೀಮಾ | ಇಂಗಿತಜನ ಭವಭಂಗ ಕಮಲದಳ | ಕಂಗಳಲೊಪ್ಪುವ ಮಂಗಳ ಮಹಿಮಾ 2
ಅಂಬುಜ ಭವನುತ ಅಂಬುಧಿಜಾನನ | ಅಂಬುಜ ಸುಚಕೋರಾಂಬುಜ ಚರಣ | ಅಂಬುಧಿವಾಸ ವಿಶ್ವಂಭರ ಮಹಿಪತಿ- | ನಂಬಿದ್ದವರಿಗಿಂಬಾಗಿಹೆ ಕೃಷ್ಣಾ 3
***