Showing posts with label ಇಂದು ಮುಂದಿಲ್ಲ ಶ್ರೀ ಮುಕುಂದಗೆ jagannatha vittala. Show all posts
Showing posts with label ಇಂದು ಮುಂದಿಲ್ಲ ಶ್ರೀ ಮುಕುಂದಗೆ jagannatha vittala. Show all posts

Saturday, 14 December 2019

ಇಂದು ಮುಂದಿಲ್ಲ ಶ್ರೀ ಮುಕುಂದಗೆ ankita jagannatha vittala

ಜಗನ್ನಾಥದಾಸರು
ಇಂದು ಮುಂದಿಲ್ಲ ಪ

ಶ್ರೀ ಮುಕುಂದಗೆ ಸಮರೆನಿಸುವರು ಲೋಕದೊಳು ಅ.ಪ.

ವನಧಿ ಮಥನದಲ್ಲಿ ಅನಿಮಿಷರನ ಬಿಟ್ಟು
ಜನನಿ ಲಕುಮಿ ನಾರಾಯಣನೊಲಿಸಿದಳಾ 1

ಪ್ರಪಿತಾಮಹನು ಲೋಕಾಧಿಪ ಬ್ರಹ್ಮಗೆ
ತಪ ತಪವೆಂದು ಪೇಳಿದಗುಪಮೆ ಎನಿಸುವವರು 2

ಕೊಂದು ಶಿವನ ಕಾಯ್ದ ಇಂದಿರಾಪತಿಗೆಣೆ 3

ಮಂದರಾದ್ರಿಯನೆತ್ತಿ ಸಿಂಧುಮಥನ ಮಾಡಿ
ವೃಂದಾರಕರಿಗೆ ಆನಂದವಿತ್ತು ಪರಿ4

ಭೃಗು ಮುನಿಪನು ಬ್ರಹ್ಮಾದಿಗಳ ಪರೀಕ್ಷಿಸಿ
ಜಗನ್ನಾಥವಿಠಲ ತ್ರಿಗುಣವರ್ಜಿತನೆಂದು 5
*******