Showing posts with label ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ uragadrivasa vittala. Show all posts
Showing posts with label ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ uragadrivasa vittala. Show all posts

Monday, 2 August 2021

ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ ankita uragadrivasa vittala

ಎಲ್ಲಿಗ್ಹೋಗುವೆ ಎಲೊ ಹರಿಯೇ ಮನದಲ್ಲಿ

ನಿಲ್ಲೋ ಒಂದರಘಳಿಗೆ ಹೇ ಧೊರೆಯೆ ಪ


ವಾರಿವಿಹಾರದಿ ನಿಂದು-ಗಿರಿಭಾರ ಕಳೆದು ನೀನಡಗಿದೆ ಅಂದು

ಧಾರುಣಿಯನೆ ಬಗೆದು ನಿಂದು-ಧೀರ ಪೋರನ

ಮಾತನ ಸಲಹಬೇಕೆಂದು 1

ವರವಟುವೇಷವ ಧರಿಸಿ-ದುಷ್ಟನೃಪರಕುಲಗೇಡಿಗನೆಂದೆನಿಸಿ

ನಾರಿಯನಟವಿಯೊಳರಸಿ-ಪುರನಾರಿಯರ

ಮನವನ್ನೆಅಪಹರಿಸಿ 2

ವರವಸನವ ಬಿಟ್ಟು ನಿಂದು-ಘೋರತುರಗವನೇರಿ

ಓಡುವೆಯೊಮುಂದು

ಧೊರೆ ಶ್ರೀ ವೆಂಕಟೇಶನೆಂದೂ-ನೀನೆ

ಉರಗಾದ್ರಿವಾಸ ವಿಠಲ ದಯಾಸಿಂಧು 3

****