ಮನವೆ ಮಾಧವನೊಳು ಮಮತೆಯಿರಲಿ |
ತನುಮನ ಧನಗಳು |
ತನವಾ ನೀಡಿದ ಮ್ಯಾಲೆ |
ಮನಸಿಜ ಜನಕನು ಅನುದಿನ ಪೊರೆವ ||ಪ||
ಕಾಮ ಜನಕನು ಪ್ರೇಮದಿ ನೆನದರೆ |
ಮಾಮನೋಹರ ತನ್ನ ಧಾಮವ ಕೊಡುವ ||೧||
ಸಂತಸ ನಿನ್ನನು ಜಿಂತಿಸುವಂ |
ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ ||೨||
ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ |
ನಿಜಪದವನೆ ಕೊಡುವಾ #ವಿಜಯವಿಠಲ ನಾ ||೩||
***
pallavi
manavE mAdhanoLu mamate irali
anupallavi
tanumana dhanagaLa tAnE nIDida nyAlE manasija janakanu anudina porevA
caraNam 1
kAma janakana prEmadi nenedare nA manhara tanna dhAmava koDuva
caraNam 2
svantata Atana cinisutta nanta mangaLa matihondu manavE
caraNam 3
ajabhavanuta vijaya sakhana yajisuva janarige nija padavane koDuva vijayaviThalanu
***