ರಚನೆ : ಗುರುಗೋವಿಂದ ವಿಠಲದಾಸರು
ಇನ್ನಾದರು ಎನ್ನ ಪೊರೆಯೊ ಮೋಹನರಾಯ
ನಿನ್ನವನಲ್ಲವೇನೋ ||ಪ||
ಬನ್ನ ಬಡಿಪದುಚಿತವೇನೋ ಚೆನ್ನ
ಶ್ರೀ ವಿಜಯ ದಾಸಾರ್ಯರ ಚಿಣ್ಣಾ ||ಅ.ಪ.||
ಎನ್ನ ಪಾಲಿಸಿದಂದದೀ ಸಕಲ ಪ್ರಪನ್ನರ
ಸಲಹುವುದೆಂದೂ ಬಿನ್ನಪಗೈದು ಮೋಹನ್ನ
ವಿಠಲನೀಗೆ ಘನ್ನುಪಕಾರವ ಮಾಡಿದ ಧೀರಾ ||೧||
ಮನ್ನವಚ ಕಾಯದಿ ನಿನ್ನಯ ಚರಣವನ್ನು ಪೂಜಿಪೆ
ಮೋಹನ್ನ ಮನ್ನಿಸಿಯೆನ್ನಯ ಅವಗುಣವೆಣಿಸದೆ
ಕುನ್ನಿಯ ಕಾಯೊ ಸದ್ಗುರುವೆ ಪ್ರಸನ್ನ ||೨||
ಸಾರ ಭಕ್ತರಿಗರ್ಥಿಲಿ ಸ್ತವನ ಮುಕ್ತಿದಾಯಕ
ಗುರುಗೋವಿಂದ ವಿಠಲನವ್ಯಕ್ತಮಾಡಿಸೊ
ಗುರು ಮೋಹನ್ನರಾಯಾ ||೩||
|| ಕೃಷ್ಣಾರ್ಪಣಮಸ್ತು ||
********