Showing posts with label ರಂಗ ಕೇಳಯ್ಯ ಬೆಳಂದಿಗಳ ಬೆಳಗುವ ramesha. Show all posts
Showing posts with label ರಂಗ ಕೇಳಯ್ಯ ಬೆಳಂದಿಗಳ ಬೆಳಗುವ ramesha. Show all posts

Saturday, 16 November 2019

ರಂಗ ಕೇಳಯ್ಯ ಬೆಳಂದಿಗಳ ಬೆಳಗುವ ankita ramesha

by ಗಲಗಲಿಅವ್ವನವರು
ರಂಗಕೇಳಯ್ಯ ಬೆಳಂದಿಗಳ ಬೆಳಗುವ ವಸ್ತ್ರಕಂಗಳಿಗೆ ಸೂರ್ಯ ಹೊಳೆವಂತೆಶ್ರೀರಂಗ ಕೊಳ್ಳಯ್ಯ ಉಡುಗೊರೆ ಪ.

ಏಸೋ ಮಾಣಿಕದ್ವಸ್ತ ಹಸಿರುಪಟ್ಟಾವಳಿವಸುದೇವಗೀಗ ರಥ ತೇಜಿ ಕೊಟ್ಟ 1

ಲೆಕ್ಕವಿಲ್ಲದೆ ರತ್ನ ಸಂಖ್ಯವಿಲ್ಲದೆ ವಸ್ತ್ರದೇವಕಿಗೆ ಕೊಟ್ಟಪಟ್ಟಾವಳಿ2

ಹಲವು ಮಾಣಿಕದ ವಸ್ತ ಬೆಲೆಯಿಲ್ಲದಷ್ಟು ವಸ್ತ್ರಬಲರಾಮಗೆ ಕೊಟ್ಟ ರಥಗಳ 3

ಮುತ್ತು ಮಾಣಿಕದೊಸ್ತ ಮತ್ತೆಪಟ್ಟಾವಳಿಸೀರೆಮಿತ್ರೆ ರೇವತಿಗೆ ದೊರೆ ಕೊಟ್ಟ 4

ಸಂಭ್ರಮದಿಭಾನುಮಾನುಸಾಂಬಪ್ರದ್ಯುಮ್ನಗೆಮೇಲೆಂಬೊ ವಸ್ತ್ರಗಳುಪಟ್ಟಾವಳಿಕೊಟ್ಟ5

ಸರಸಿಜಾಸನ ಶಿವನ ಅರಸೆಯರಿಗೆ ಮೊದಲಾಗಿಸರಸದೊಸ್ತಗಳು ರಥಕೊಟ್ಟ 6

ಇಂದ್ರ ಚಂದ್ರನ ಮಡದಿಯರಿಗೆಬಂದ ಋಷಿಗಳಿಗೆಲ್ಲಚಂದ-ದೆÉೂಸ್ತ್ರಗಳ ದೊರೆ ಕೊಟ್ಟ 7

ಪಂಡಿತರು ರಾಯರಿಗೆ ದುಂಡು ಮುತ್ತಿನ ವಸ್ತತಂಡ ತಂಡದಲಿಜವಳಿಯ ದೊರೆ ಕೊಟ್ಟ 8

ದಾಸರುದಾಸಿಯರಿಗೆ ಸೋಸಿನ ವಸ್ತ್ರಗಳು ಸೀರೆಕುಪ್ಪಸ ಜರತಾರಿಗಳ ದೊರೆ ಕೊಟ್ಟ 9

ಗುಜ್ಜಿಯರ ಮಕ್ಕಳಿಗೆ ಗೆಜ್ಜೆ ಸರಪಳಿ ಅಂಗಿಸಜ್ಜು ತೋರುವ ಅರ¼ಲೆ ಕೊಟ್ಟ 10

ಗೊಲ್ಲನಾರಿಯರ ಕುಬ್ಜಿಗೆಲ್ಲ ರಾಮೇಶ ಕೊಟ್ಟಚಲುವ ನಮ್ಮ ಮ್ಯಾಲೆ ಹರುಷಾಗೊ 11
********